ಗುರ್ತಿನ ಚೀಟಿ ವಿತರಣೆ
ಸಿಂಧನೂರು: ತಾಲೂಕಿನ ಬಳಗಾನೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೆಂದ್ರದಲ್ಲಿ ಕರ್ನಾಟಕ ಸರ್ಕಾರದ ಅನುದಾನದಡಿಯಲ್ಲಿ ಬರುವ ವಿಕಲಚೇತನರಿಗೆ ಗುರುತಿನ ಚೀಟಿಯನ್ನು ಕೇಂದ್ರದ ವೈದ್ಯಾಧಿಕಾರಿ ಡಾ. ಮೌನೇಶ ಪೂಜಾರ ನೋಂದಾಯಿಸಿ ಗುರುತಿನ ಚೀಟಿ ವಿತರಿಸಿದರು. ಎಲ್ಲಾ ಗ್ರಾಮಗಳ ವಿಕಲಚೇತನರ ಉಚಿತ ನೋಂದಣಿ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿ ಎಲ್ಲರಿಗೂ ಗುರುತಿನ ಚೀಟಿ ವಿತರಿಸಲಾಗುವುದು ಎಂದರು. ಕರ್ನಾಟಕ ವಿಕಲಚೇತನ ಗ್ರಾಮೀಣ ಕಾರ್ಯಾಲಯದ ಜಿಲ್ಲಾಧ್ಯಕ್ಷ ಮಹ್ಮದ್ ಹುಸೇನ್ ಸಾಬ್, ಗ್ರಾಮದ ವಿ.ಆರ್.ಡಬ್ಯ್ಲೂ. ವಿರೂಪಾಕ್ಷಿಸ್ವಾಮಿ ಮತ್ತಿತರರು ಇದ್ದರು.
ನಾಳೆ ಕಾಲ್ನಡಿಗೆ ಜಾಥಾ
ರಾಯಚೂರು: ತಾಲೂಕಿನ ಗಾರಲದಿನ್ನಿ ಗ್ರಾಮದಲ್ಲಿ ಮಾದಿಗ ಜನಾಂಗದವರ ಮೇಲೆ ಡಿ.4 ರಂದು ನಡೆದ ಸಾಮೂಹಿಕ ದೌರ್ಜನ್ಯ ಖಂಡಿಸಿ ಡಿ.17ರಂದು ಗಾರಲದಿನ್ನಿ ಗ್ರಾಮದಿಂದ ರಾಯಚೂರು ಜಿಲ್ಲಾ ಕೇಂದ್ರಕ್ಕೆ ಕಾಲ್ನಡಿಗೆ ಜಾಥಾ ಆಯೋಜಿಸಲಾಗಿದೆ ಎಂದು ಡಾ. ಅಂಬೇಡ್ಕರ್ ಪೇಪಲ್ಸ್ ಪಾರ್ಟಿ ತಿಳಿಸಿದೆ. ಅಂದು ಗಾರಲದಿನ್ನಿ ಗ್ರಾಮದಿಂದ ಬೆಳಗ್ಗೆ 10ಕ್ಕೆ ಕಾಲ್ನಡಿಗೆ ಜಾಥಾ ಆರಂಭಗೊಳ್ಳಲಿದ್ದು, ಮಟಮಾರಿ ರೈಲು ನಿಲ್ದಾಣ, ಪೂರತಿಪ್ಲಿ, ನಾಗಲಾಪೂರ, ಉಡಮಗಲ್ ಖಾನಾಪುರ ಮಾರ್ಗವಾಗಿ ರಾಯಚೂರಿನ ಅಂಬೇಡ್ಕರ್ ವೃತ್ತದವರೆಗೆ ಜಾಥಾ ಸಾಗಲಿದೆ ಎಂದು ತಿಳಿಸಿದ್ದು, ಈ ಜಾಥಾದಲ್ಲಿ ಎಲ್ಲರೂ ಪಾಲ್ಗೊಂಡು ಯಶಸ್ವಿಗೊಳಿಸಲು ಮನವಿ ಮಾಡಿದ್ದಾರೆ.
ಸ್ಲಂ ಮೋರ್ಚಾಗೆ ನಾಯಕ ನೇಮಕ
ದೇವದುರ್ಗ: ಬಿಜೆಪಿ ಸ್ಲಂ ಮೋರ್ಚಾದ ಜಿಲ್ಲಾಧ್ಯಕ್ಷರಾಗಿ ಟಿ.ಸುರೇಶ ನಾಯಕ ನೇಮಕಗೊಂಡಿದ್ದಾರೆ. ಈ ಕುರಿತು ಆದೇಶ ಹೊರಡಿಸಿರುವ ಪಕ್ಷದ ಜಿಲ್ಲಾಧ್ಯಕ್ಷ ಬಸನಗೌಡ ಬ್ಯಾಗವಾಟ್, ಜವಾಬ್ದಾರಿಯನ್ನು ವಹಿಸಿಕೊಂಡು ಪಕ್ಷದ ಸಂಘಟನೆಯಲ್ಲಿ ಸಕ್ರಿಯರಾಗಬೇಕೆಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

