ರಾಯಚೂರು

ಇಂದು ಸ್ಮಾರಕ ದತ್ತಿ ಉಪನ್ಯಾಸ

Published On :

ಸಿಂಧನೂರು: ತಾಲೂಕಿನ ಕುರಕುಂದಿ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಡಿ.18ರಂದು ಜಿಲ್ಲಾ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸಂಯುಕ್ತಾಶ್ರಯದಲ್ಲಿ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಸಾಪ ತಾಲೂಕಾಧ್ಯಕ್ಷೆ ರಮಾದೇವಿ ಶಂಭೋಜಿ ತಿಳಿಸಿದ್ದಾರೆ. ಅಧ್ಯಕ್ಷತೆಯನ್ನು ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯಗುರು ಶಂಕರಪ್ಪ ವಹಿಸುವರು. ದಿ.ವೆಂಕಣ್ಣ ಸಾಹುಕಾರ ಕುರಕುಂದಿ ಸ್ಮಾರಕ ದತ್ತಿಯ ಉಪನ್ಯಾಸವನ್ನು ಶಿಕ್ಷಣ ಹಾಗೂ ಸಮುದಾಯದ ಅಭಿವೃದ್ಧಿ ವಿಷಯ ಕುರಿತು ಪತಂಜಲಿ ಯೋಗ ಸಮಿತಿಯ ರಾಜ್ಯ ಪ್ರಭಾರಿ ಎಂ.ಭಾಸ್ಕರ್ ಉಪನ್ಯಾಸ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ದತ್ತಿದಾನಿ ಈಶಪ್ಪ ಸಾಹುಕಾರ ಕುರಕುಂದಿ, ನ್ಯಾ. ಬಸವರಾಜ ಕುರಕುಂದಿ, ತಾಪಂ ಸದಸ್ಯ ಅಮರೇಶ ಬಸಾಪೂರ, ಎಸ್ಡಿಎಂಸಿ ಅಧ್ಯಕ್ಷ ಹನುಮಂತಪ್ಪ ಜಲ್ಲಿ, ವೀರಯ್ಯ ಸ್ವಾಮಿ, ಎಸ್.ಶರಣೇಗೌಡ, ಎಸ್.ದೇವೇಂದ್ರಗೌಡ, ವಿಶ್ವನಾಥ, ನೂತನ ದತ್ತಿ ದಾನಿಗಳಾದ ಪಂಪಯ್ಯ ಸ್ವಾಮಿ ಸಾಲಿಮಠ ಅಂತರಗಂಗಿ ಮತ್ತಿತರರು ಭಾಗವಹಿಸುವರು.
ಔಷಧ ಅಂಗಡೀಲಿ
ಗುಟ್ಕಾ ಮಾರಾಟ?
ಸಿಂಧನೂರು: ತಾಲೂಕಿನ ದೇವಿಕ್ಯಾಂಪಿನಲ್ಲಿರುವ ಸೃಜನಾಮೃತ ಮೆಡಿಕಲ್ ಸ್ಟೋರ್ನಲ್ಲಿ ಗುಟ್ಕಾ, ಪೆಟ್ರೋಲ್, ಸಿಗರೇಟ್ ಮತ್ತಿತರ ಕಿರಾಣಿ ಸಾಮಾಗ್ರಿಗಳನ್ನು ಮಾರಾಟ ಮಾಡುತ್ತಿದ್ದು, ಅವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಅಲ್ಲಿಯ ನಿವಾಸಿಗಳಾದ ಈರಪ್ಪ, ಅಮರೇಶಪ್ಪ, ಹನುಮಂತಪ್ಪ ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.