ಪ್ರತಿಭೆ ಮೆರೆದ ಚಿಣ್ಣರು
ಕ.ಪ್ರ. ವಾರ್ತೆ ಸಿಂಧನೂರು ಡಿ.19
ಮಕ್ಕಳಲ್ಲಿನ ನಾನಾ ಬಗೆಯ ಪ್ರತಿಭೆಗಳನ್ನು ಗುರುತಿಸಲು ಶಿಕ್ಷಕರು ಮುಂದಾಗಬೇಕೆಂದು ವಿಕಾಸ ಪ್ರಾಥಮಿಕ ಮತ್ತು ಪ್ರೌಢಶಾಲೆಯ ನಿರ್ದೇಶಕ ರಾಜೇಶ ಹಿರೇಮಠ ಸಲಹೆ ನೀಡಿದರು.
ನಗರದ ವಿಕಾಸ ಶಾಲೆಯಲ್ಲಿ ಹೊಸಳ್ಳಿ(ಇ.ಜೆ.) ವಲಯ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳಲ್ಲಿ ಹಾಡುವುದು, ಚಿತ್ರ ಬಿಡಿಸುವುದು. ಕಥೆ ಹೇಳುವುದು. ಸಂಗೀತ ಇನ್ನಿತರ ಪ್ರತಿಭೆಗಳಿರುತ್ತವೆ. ಅವುಗಳನ್ನು ಗುರುತಿಸಲಾಗದೇ ಕಮರಿ ಹೋಗಬಾರದು. ಪ್ರತಿಭೆಗಳನ್ನು ಗುರುತಿಸುವಂತಾಗಬೇಕೆಂದರು.
ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಎನ್.ಬಿ. ಕರಂಡಿ ಕಾರ್ಯಕ್ರಮ ಉದ್ಘಾಟಿಸಿದರು. ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಚಂದ್ರಶೇಖರ ಹಿರೇಮಠ, ಪ್ರಭಾರಿ ಸಮನ್ವಯಾಧಿಕಾರಿ ಆದೆಪ್ಪ ಹೆಂಬಾ, ಬಿಆರ್ಪಿ ಮಲ್ಲಪ್ಪ, ಸಿಆರ್ಪಿ ವೀರೇಶ ಗೋನವಾರ, ಸಂಸ್ಥೆಯ ನಿರ್ದೇಶಕ ಶರಣಬಸವ ವಕೀಲರು, ಮಲ್ಲಿಕಾರ್ಜುನ ಹಟ್ಟಿ, ಅಮರೇಗೌಡ ಅಮರಾಪುರ, ಚನ್ನಯ್ಯಸ್ವಾಮಿ ಸ್ಥಾವರಮಠ, ಆಡಳಿತಾಧಿಕಾರಿ ಬಿ.ಕೆ.ಸೋಮಶೇಖರ, ಮುಖ್ಯಗುರುಗಳು, ಶಿಕ್ಷಕರು ಹಾಗೂ ಇತರರು ಉಪಸ್ಥಿತರಿದ್ದರು. ರಾಹುಲ್ ಪ್ರಾರ್ಥಿಸಿದರು. ದೀಪಿಕಾ, ರಂಜಿತಾ ನಾಡಗೀತೆ ಹಾಡಿದರು. ರಾಘವೇಂದ್ರ ಸ್ವಾಗತಿಸಿದರು. ಮಹಿಬೂಬ್ ನಿರೂಪಿಸಿದರು. ಮಲ್ಲಿಕಾರ್ಜುನ ರೆಡ್ಡಿ ವಂದಿಸಿದರು.
ಹೊಸಳ್ಳಿ(ಇ.ಜೆ.) ವಲಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ವಿಕಾಸ ಶಾಲೆ ಅತ್ಯಧಿಕ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ.
ಪ್ರೌಢಶಾಲಾ ವಿಭಾಗ: ಕನ್ನಡ ಭಾಷಣದಲ್ಲಿ 9ನೇ ತರಗತಿಯ ಶಶಿಧರ(ಪ್ರಥಮ), ಇಂಗ್ಲಿಷ್ ಭಾಷಣದಲ್ಲಿ 9ನೇ ತರಗತಿಯ ಮಂಜುನಾಥ(ಪ್ರಥಮ), ಹಿಂದಿ ಭಾಷಣದಲ್ಲಿ 9ನೇ ತರಗತಿಯ ಮಹ್ಮದದ್ರಿಯಾಜ್, ತೆಲುಗು ಭಾಷಣದಲ್ಲಿ 8ನೇ ತರಗತಿಯ ರಾಜಶೇಖರ(ಪ್ರಥಮ), ಚಿತ್ರಕತೆ 9ನೇ ತರಗತಿಯ ಮಲ್ಲಿಕಾರ್ಜುನ (ಪ್ರಥಮ).
ರಂಗೋಲಿ ಸ್ಪರ್ಧೆಯಲ್ಲಿ 10ನೇ ತರಗತಿಯ ದೀಪಿಕಾ(ಪ್ರಥಮ), ಚರ್ಚೆ ಸ್ಪರ್ಧೆಯಲ್ಲಿ 10ನೇ ತರಗತಿ ರಾಹುಲ್ (ಪ್ರಥಮ), ಮಿಮಿಕ್ರಿಯಲ್ಲಿ 9ನೇ ತರಗತಿಯ ವಿನೋದಕುಮಾರ(ಪ್ರಥಮ), ಆಶುಭಾಷಣ 9ನೇ ತರಗತಿಯ ಮಂಜುನಾಥ(ಪ್ರಥಮ), ಕ್ಲೇ ಮಡಲಿಂಗ್ನಲ್ಲಿ 9ನೇ ತರಗತಿಯ ಸಂತೋಷ ಕುಮಾರ(ಪ್ರಥಮ), ಯೋಗಾಸನ- 9ನೇ ತರಗತಿಯ ಗಣೇಶಗೌಡ(ಪ್ರಥಮ), ಧಾರ್ಮಿಕ ಪಠಣ(ಸಂಸ್ಕೃತ)ದಲ್ಲಿ 10ನೇ ತರಗತಿಯ ರಾಹುಲ್ (ಪ್ರಥಮ), ಅರೇಬಿಕ್- 10ನೇ ತರಗತಿಯ ಮಹ್ಮದ್ ಇಮ್ರಾನ್(ಪ್ರಥಮ), ಕ್ವಿಜ್- 9ನೇ ತರಗತಿಯ ಶಶಾಂಕ್ ಹಾಗೂ ತಂಡ(ಪ್ರಥಮ). ಕೋಲಾಟ ಸ್ಪರ್ಧೆಯಲ್ಲಿ 9ನೇ ತರಗತಿಯ ದೀಕ್ಷಿತಾ ಹಾಗೂ ಸಂಗಡಿಗರು(ಪ್ರಥಮ), ನಾಟಕ- 8ನೇ ತರಗತಿಯ ವಿರುಪನಗೌಡ ಹಾಗೂ ತಂಡ(ಪ್ರಥಮ).
ಪ್ರಾಥಮಿಕ ಶಾಲಾ ವಿಭಾಗ: ಧಾರ್ಮಿಕ ಪಠಣ(ಅರೇಬಿಕ್) 4ನೇ ತರಗತಿ ತಸ್ಕಿನ್ (ಪ್ರಥಮ), ಆಯಷಾ(ಪ್ರಥಮ), ಸಂಸ್ಕೃತ- 7ನೇ ತರಗತಿಯ ಶ್ರೀಲಕ್ಷ್ಮೀ, ಕಂಠಪಾಠ(ಉರ್ದು) ಸ್ಪರ್ಧೆಯಲ್ಲಿ 6ನೇ ತರಗತಿಯ ನಿಶಾ(ಪ್ರಥಮ), ದೇಶಭಕ್ತಿಗೀತೆಯಲ್ಲಿ 7ನೇ ತರಗತಿಯ ಪ್ರತಿಭಾ ಹಾಗೂ ಸಂಗಡಿಗರು(ಪ್ರಥಮ), ಜಾನಪದಗೀತೆಯಲ್ಲಿ 7ನೇ ತರಗತಿಯ ಶ್ವೇತಾ ಹಾಗೂ ಸಂಗಡಿಗರು(ಪ್ರಥಮ) ಸ್ಥಾನಗಳನ್ನು ಗಳಿಸಿ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷರು, ಪದಾಧಿಕಾರಿಗಳು, ಆಡಳಿತಾಧಿಕಾರಿಗಳು, ಮುಖ್ಯಗುರುಗಳು, ಶಿಕ್ಷಕರು ಅಭಿನಂದಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

