ರಾಯಚೂರು

ಫ್ಯಾಷನ್ ಡಿಜೈನಿಂಗ್ ತರಬೇತಿ

Published On :

ಲಿಂಗಸ್ಗೂರು: ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಬೆಂಗಳೂರು, ಜಿಲ್ಲಾ ಕೈಗಾರಿಕಾ ಕೇಂದ್ರ ರಾಯಚೂರು ಹಾಗೂ ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ(ಸಿಡಾಕ್) ಧಾರವಾಡ ಇವರ ಸಂಯುಕ್ತಾಶ್ರಯದಲ್ಲಿ ವಿಶೇಷ ಅಭಿವೃದ್ಧಿ ಯೋಜನೆಯಡಿಯಲ್ಲಿ ಫ್ಯಾಷನ್ ಡಿಜೈನಿಂಗ್ ಕುರಿತು 4 ವಾರಗಳ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಿಡಾಕ್, ಜಿಲ್ಲಾ ಕೈಗಾರಿಕಾ ಕೇಂದ್ರದ ಜಿಲ್ಲಾ ಉಪನಿರ್ದೇಶಕರು ತಿಳಿಸಿದ್ದಾರೆ.
ಪಟ್ಟಣದಲ್ಲಿ 2013 ಡಿಸೆಂಬರ್ ಕೊನೆ ವಾರದಲ್ಲಿ ಹಮ್ಮಿಕೊಳ್ಳಲಾಗಿದ್ದು, ತಾಲೂಕಿನ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಸದರಿ ಕಾರ್ಯಕ್ರಮದಲ್ಲಿ ಉದ್ಯಮಶೀಲತಾ ಪ್ರೇರಣಾ ತರಬೇತಿ, ಯಶಸ್ವಿ ಉದ್ಯಮಶೀಲರ ಗುಣಲಕ್ಷಣಗಳು, ಫ್ಯಾಷನ್ ಡಿಸೈನಿಂಗ್ ಬಗ್ಗೆ ಇರುವ ಅವಕಾಶ ಫ್ಯಾಷನ್ ಡಿಸೈನಿಂಗ್ ಬಗ್ಗೆ ಥೀಯರಿ, ಪ್ರಾತ್ಯಕ್ಷಿಕವಾಗಿ ತೋರಿಸುವುದು ಮತ್ತು ಅಭ್ಯರ್ಥಿಗಳಿಂದ ಪ್ರಾಕ್ಟೀಸಿಂಗ್ ಮಾಡಿಸುವುದು. ಸ್ವಯಂ ಉದ್ಯಮ ಪ್ರಾರಂಭಿಸಲು ಇಲಾಖೆ, ಸಂಸ್ಥೆಗಳು, ಬ್ಯಾಂಕುಗಳು ನೀಡುವ ನೆರವು ಬಗ್ಗೆ ಮಾಹಿತಿ, ಯಶಸ್ವಿ ಉದ್ಯಮಶೀಲರಿಂದ ಅನುಭವ ಹಂಚಿಕೆ, ಯೋಜನಾ ವರದಿ ತಯಾರಿಕೆ ಮುಂತಾದ ವಿಷಯಗಳ ಬಗ್ಗೆ ಅನುಭವಿ ಉಪನ್ಯಾಸಕರು ಹಾಗೂ ತರಬೇತುದಾರರಿಂದ ತರಬೇತಿ ನೀಡಲಾಗುವುದು.
18ರಿಂದ 40 ವರ್ಷ ವಯೋವುತಿಯ ಕನಿಷ್ಠ ಎಸ್ಸೆಸ್ಸೆಲ್ಸಿ ಪಾಸಾದ, ಈ ತರಬೇತಿ ಸಂಪೂರ್ಣ ಪ್ರಾಯೋಜನೆ ಪಡೆಯುವವರು ಸ್ವವಿವರ ಮಾಹಿತಿ, ವಯಸ್ಸಿನ ದಾಖಲೆ, ವಾಸಸ್ಥಳಕ್ಕೆ ರೇಷನ್ ಕಾರ್ಡ್, ಚುನಾವಣಾ ಗುರುತಿನ ಚೀಟಿ, ಜಾತಿ ಪ್ರಮಾಣ ಪತ್ರದೊಂದಿಗೆ ಡಿ.21ರಂದು ಸಂಜೆ 4ರೊಳಗೆ ಬಸವಶ್ರೀ ಇನ್‌ಸ್ಟಿಟ್ಯೂಟ್, ಬೈಪಾಸ್ ರಸ್ತೆ, ಸಜ್ಜಲಶ್ರೀ ಐಟಿಐ ಹತ್ತಿರ, ಆಜಾದ್ ನಗರ ಲಿಂಗಸ್ಗೂರು ಇವರಿಗೆ ಸಲ್ಲಿಸಬೇಕು. ವಿವರಕ್ಕೆ ಮೊ. 9449526838 ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.