ರಾಯಚೂರು

ಮಸ್ಕಿ ಮಾದರಿ ಮಾಡುವೆ: ಪಾಟೀಲ್

Published On :

ಕ.ಪ್ರ. ವಾರ್ತೆ ,  ಮುದಗಲ್ ,  ಡಿ.24
ಮಸ್ಕಿ ಕ್ಷೇತ್ರದ ವ್ಯಾಪ್ತಿಯ ಹಳ್ಳಿಗಳ ಸಮಸ್ಯೆ ನಿವಾರಣೆಗೆ ಸರ್ಕಾರದ ವಿವಿಧ ಯೋಜನೆಯಡಿ ಅನುದಾನ ತಂದು ಕ್ಷೇತ್ರದ ಅಭಿವೃದ್ಧೆ ಶ್ರಮಿಸುವುದಲ್ಲದೇ, ಈ ಮೀಸಲು ಕ್ಷೇತ್ರವನ್ನು ಮಾದರಿ ಕ್ಷೇತ್ರ ಮಾಡುವ ಮಹಾದಾಸೆ ಹೊಂದಲಾಗಿದೆ ಎಂದು ಹೇಳಿದರು.
ಮಂಗಳವಾರ ಕನ್ನಾಳ, ಗುಡಿಹಾಳ ಗ್ರಾಮಗಳ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಪ್ರತಾಪಗೌಡ ಪಾಟೀಲ್ ಚಾಲನೆ ನೀಡಿ ಮಾತನಾಡಿದ ಅವರು, ಹೈ-ಕ ಅಭಿವೃದ್ಧಿ ಮಂಡಳಿಯ 5 ಲಕ್ಷ ಅನುದಾನದಲ್ಲಿ ಸುಲ್ತಾನಪುರ ಗ್ರಾಮದ ಅಗಸಿ ನಿರ್ಮಾಣ, ಶಾಸಕರ ಅನುದಾನದಲ್ಲಿ ಕಡದರಾಳ ಗ್ರಾಮಕ್ಕೆ 5 ಲಕ್ಷ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣ, ಬೈಲಗುಡ್ಡ ಗ್ರಾಮಕ್ಕೆ 13 ಲಕ್ಷದಲ್ಲಿ ಸಿಸಿ ರಸ್ತೆ, ಚರಂಡಿ ನಿರ್ಮಾಣ, ಯರದೊಡ್ಡಿ ಗ್ರಾಮದಲ್ಲಿ ಎಸ್‌ಸಿ- ಎಸ್‌ಟಿ ಕಾಲೋನಿಯಲ್ಲಿ 12 ಲಕ್ಷದಲ್ಲಿ ಸಿಸಿ ರಸ್ತೆ, ಚರಂಡಿ ನಿರ್ಮಾಣ, ಕನ್ನಾಳ ಗ್ರಾಮದಲ್ಲಿ 6 ಲಕ್ಷದಲ್ಲಿ ಸಿಸಿ ರಸ್ತೆ ನಿರ್ಮಾಣ, ದಿಗ್ಗನಾಯಕನಬಾವಿ ಗ್ರಾಮದಲ್ಲಿ 10 ಲಕ್ಷದಲ್ಲಿ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗಳಿಗೆ ಸಾಮೂಹಿಕವಾಗಿ ಒಂದೇ ದಿನದಲ್ಲಿ ಚಾಲನೆ ನೀಡಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕನ್ನಾಳ ಗ್ರಾಪಂ ಅಧ್ಯಕ್ಷೆ ನಾಗಮ್ಮ ಗೌಂಡಿ, ಎಪಿಎಂಸಿ ನಿರ್ದೇಶಕ ಮಂಜುನಾಥ ಪಾಟೀಲ್, ಪಿಕಾರ್ಡ್ ಬ್ಯಾಂಕ್ ನಿರ್ದೇಶಕ ಶಂಭುಲಿಂಗಪ್ಪ ಸಾಹುಕಾರ, ಮುಖಂಡರಾದ ಶಿವಕುಮಾರ ಮಸ್ಕಿ, ಚನ್ನಬಸನಗೌಡ ಕನ್ನಾಳ, ಶಾಸಕರ ಪುತ್ರ ಪ್ರಸನ್ನಕುಮಾರ, ಗಂಗಪ್ಪ ನಾಯಕ, ಗ್ರಾಪಂ ಸದಸ್ಯರಾದ ಸಂಗಮೇಶ್, ಯಂಕಪ್ಪ ಬಟ್ರಳ್ಳಿ ಸೇರಿದಂತೆ ಅನೇಕರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.