ರಾಯಚೂರು

ಅನುಚಿತ ವರ್ತನೆ: ಎಸ್ಪಿ ವಿರುದ್ಧ ಪತ್ರಕರ್ತರ ದೂರು

Published On :

ರಾಯಚೂರು: ಜಿಲ್ಲೆಯಲ್ಲಿ ಅತ್ಯಾಚಾರ ಮತ್ತು ಪ್ರಾಣಿ ಬಲಿ ಪ್ರಕರಣಗಳ ಕುರಿತು ಮಾಹಿತಿ ಪಡೆಯಲು ತೆರಳಿದ ಮಾಧ್ಯಮದ ವರದಿಗಾರರೊಂದಿಗೆ ಅನುಚಿತವಾಗಿ ವರ್ತಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕ್ರಮ ಖಂಡಿಸಿ ನಗರದಲ್ಲಿ ಶನಿವಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಮನವಿ ಸಲ್ಲಿಸಲಾಯಿತು.
ಸಂಘದ ಜಿಲ್ಲಾಧ್ಯಕ್ಷ ಚನ್ನಬಸವಣ್ಣ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಗೃಹ ಮಂತ್ರಿಗೆ ಮನವಿ ಸಲ್ಲಿಸಿ, ಫೆ.15ರಂದು ಮಧ್ಯಾಹ್ನ ವಿವಿಧ ವಾಹಿನಿಗಳ ವರದಿಗಾರರು ತಮ್ಮ ಕ್ಯಾಮೆರಾಮೆನ್ ಗಳ ಜತೆಗೂಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ತೆರಳಿ ಜಿಲ್ಲೆಯಲ್ಲಿ ನಡೆದ ಅತ್ಯಾಚಾರ, ಪ್ರಾಣಿ ಬಲಿಗೆ ಸಂಬಂಧಿಸಿ ಮಾಹಿತಿ ಪಡೆಯಲು ತೆರಳಿದಾಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮಾಧ್ಯಮದವರೊಂದಿಗೆ ಅನುಚಿತವಾಗಿ ವರ್ತಿಸಿ ಕೊಠಡಿಯಿಂದ ಹೊರಹೋಗಲು ಸೂಚಿಸಿದ್ದಾರೆಂದು ದೂರಿದರು.
ಆರೋಪ ಸರಿಯಲ್ಲ: ಕಳೆದ ಅನೇಕ ತಿಂಗಳಿನಿಂದ ಎಸ್ಪಿ ಎಸ್.ಬಿ. ಬಿಸನಳ್ಳಿ ಮಾಧ್ಯಮದವರೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದು, ಮಾಧ್ಯಮದವರಿಂದಲೇ ಸಮಾಜ ಹಾಳಾಗುತ್ತಿದೆ ಎಂದು ಎಸ್ಪಿ ಆರೋಪಿಸಿರುವುದು ಸರಿಯಲ್ಲ. ಮಾಧ್ಯಮಗಳಿಗೆ ಮಾಹಿತಿ ನೀಡದೇ ಅನಗತ್ಯವಾಗಿ ಗೊಂದಲ ಸೃಷ್ಟಿಸುವ ಕಾರ್ಯ ಮಾಡಿದ್ದಾರೆಂದು ಆರೋಪಿಸಿದರು.
ಪೊಲೀಸ್ ಮತ್ತು ಮಾಧ್ಯಮದ ಮಧ್ಯೆ ಸೌಹಾರ್ದ ಸಂಬಂಧ ಬೆಳೆಸಿ ಜಿಲ್ಲೆಯಲ್ಲಿ ಅಪರಾಧ ತಡೆಗೆ ಸಕ್ರಿಯ ಸಹಭಾಗಿತ್ವ ತರಲು ಮತ್ತು ಮಾಧ್ಯಮಗಳಿಗೆ ಸಕಾಲಕ್ಕೆ ಅಪರಾಧ ಸಂಬಂಧಿ ಮಾಹಿತಿ ನೀಡುವಂತೆ ಜಿಲ್ಲಾ ಎಸ್ಪಿಗೆ ನಿರ್ದೇಶಿಸಲು ಗೃಹ ಮಂತ್ರಿಗಳನ್ನು ಸಂಘದ ಪದಾಧಿಕಾರಿಗಳು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಪತ್ರಕರ್ತರಾದ ವಿಜಯಕುಮಾರ್, ಭೀಮಣ್ಣ ಹೀರಾ, ಬಸವರಾಜ ನಾಗಡದಿನ್ನಿ, ವೀರನಗೌಡ, ಮೃತ್ಯುಂಜಯ ಕಪಗಲ್, ದತ್ತು ಸರ್ಕಿಲ್, ಸತ್ಯನಾರಾಯಣ, ಭೀಮರಾಯ ಹದ್ದಿನಾಳ, ಮಹಾಂತೇಶ್ ಹಿರೇಮಠ, ಎಂ.ಜಯರಾಮ್, ಸಿದ್ದು ಬಿರಾದಾರ್, ಜಿಲಾನಿ, ಯಲ್ಲಪ್ಪ, ಅಬ್ದುಲ್ ಖಾದರ್, ದುರ್ಗೇಶ್ ಮತ್ತಿತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.