ಆರೋಗ್ಯ ಉಚಿತ ತಪಾಸಣಾ ಶಿಬಿರ
ರಾಯಚೂರು: ತಾಲೂಕಿನ ದೇವಸ್ಗೂರಿನ ಲೋಕ ಶೀಕ್ಷಣ ಕೇಂದ್ರ, ರಾಜ್ಯ ಸಂಪನ್ಮೂಲ ಕೇಂದ್ರ ಮೈಸೂರು ಹಾಗೂ ತಾಲೂಕು ಶಿಕ್ಷಣ ಸಮಿತಿ ರಾಯಚೂರು ಮತ್ತು ದೇವಸ್ಗೂರು ಗ್ರಾಪಂ.ನ ಲೋಕ ಶಿಕ್ಷಣ ಸಮಿತಿ ವತಿಯಿಂದ ಇತ್ತೀಚೆಗೆ ಆರೋಗ್ಯದ ಉಚಿತ ತಪಾಸಣೆ ಆಯೋಜಿಸಲಾಗಿತ್ತು. ದೇವಸ್ಗೂರು ಗ್ರಾಪಂ ಲೋಕಶಿಕ್ಷಣ ಸಮಿತಿ ಅಧ್ಯಕ್ಷೆ ಅಂಬುಜಾ ನಾಯಕ ಮಾತನಾಡಿ, ನವಸಾಕ್ಷರರು, ಕಲಿಕಾರ್ಥಿಗಳು ಸಾರ್ವಜನಿಕರು ಆರೋಗ್ಯ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕೆಂದು ಕರೆ ನೀಡಿದರು. ಸಮಿತಿ ಸದಸ್ಯ ಕಾರ್ಯದರ್ಶಿ ರಾಧಾಕುಮಾರಿ ಮಾತನಾಡಿದರು. ಜೆ.ಮಲ್ಲಾಪುರದ ವೈದ್ಯಾಧಿಕಾರಿ ಡಾ. ಸುರೇಶ್, ರಿಮ್ಸ್ ವೈದ್ಯರಾದ ಡಾ. ಪ್ರವೀಣಕುಮಾರ, ಡಾ. ಶಶಿಕುಮಾರ ರೋಗಿಗಳ ಆರೋಗ್ಯದ ತಪಾಸಣೆ ನಡೆಸಿದರು. ನವಚೇತನ ಸಂಸ್ಥೆಯ ಈರಮ್ಮ, ಆಶಾರಾಣಿ ಪಾಲ್ಗೊಂಡಿದ್ದರು.
24ರಂದು ಪ್ರಶಸ್ತಿ ಪ್ರದಾನ
ರಾಯಚೂರು: ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಭೂಪಾಳ ರಾಧಮ್ಮ ಭೀಮಣ್ಣ ಹಾಗೂ ಹೊಸೂರು ರಾಮಸ್ವಾಮಿ ಸ್ಮಾರಕ ದತ್ತಿ ಪ್ರಶಸ್ತಿ ಪ್ರದಾನ ಮತ್ತು ಅಭಿನಂದನಾ ಸಮಾರಂಭವನ್ನು ಫೆ.24ರಂದು ಆಯೋಜಿಸಲಾಗಿದೆ. ಅಂದು ಬೆಳಗ್ಗೆ 10ಕ್ಕೆ ನಗರದ ಪತ್ರಿಕಾ ಭವನದಲ್ಲಿ ನಡೆಯುವ ಸಮಾರಂಭದಲ್ಲಿ ಹಿರಿಯ ಪತ್ರಕರ್ತ ಕೆ. ರಾಮಕೃಷ್ಣ ಅವರು ಮಹಾಂತಯ್ಯಸ್ವಾಮಿ ಗೋನವಾರ, ಮಹ್ಮದ್ ಹನೀಫ್ ಖಾಜಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ತಾಲೂಕು ಕಸಾಪ ಅಧ್ಯಕ್ಷ ಚಿದಾನಂದ ಸಾಲಿ ವಹಿಸುವರು. ಪತ್ರಕರ್ತರಾದ ವೆಂಕಟಸಿಂಗ್, ಚನ್ನಬಸವಣ್ಣ ಅವರಿಗೆ ಸನ್ಮಾನಿಸಲಾಗುತ್ತದೆ. ಮುಖ್ಯ ಅತಿಥಿಗಳಾಗಿ ಎಚ್.ಪಂಪಯ್ಯ ಶೆಟ್ಟಿ, ಭೂಪಾಳ ಸಂದೀಪ್ ಪಾಲ್ಗೊಳ್ಳಲಿದ್ದಾರೆ.
25ರಿಂದ ಬೃಹತ್ ಗ್ರಾಹಕ ಮೇಳ
ಲಿಂಗಸ್ಗೂರು: ಸ್ಥಳೀಯ ಸಂಗಮೇಶ್ವರ ಕಲಾ ಮತ್ತು ಬಿಬಿಎಂ ಮಹಾವಿದ್ಯಾಲಯದ ವಾಣಿಜ್ಯ ಮತ್ತು ಬಿಬಿಎಂ ವಿದ್ಯಾರ್ಥಿಗಳ ಪ್ರಾಯೋಗಿಕ ವಿದ್ಯೆ ಕೌಶಲ್ಯಾಭಿವೃದ್ಧಿಗಾಗಿ ಫೆ.25ರಿಂದ 27ರವರೆಗೆ ಬೃಹತ್ ಗ್ರಾಹಕ ಮೇಳವನ್ನು ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಏರ್ಪಡಿಸಲಾಗಿದೆ ಎಂದು ಕಾಲೇಜು ಪ್ರಾಚಾರ್ಯ ಬಸವರಾಜ ತಿಳಿಸಿದ್ದಾರೆ. ಮೇಳದಲ್ಲಿ ಪ್ರಸಿದ್ಧ ಕಂಪನಿಗಳ ಗ್ರಾಹಕ ವಸ್ತುಗಳ ಪ್ರದರ್ಶನ ಮತ್ತು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುವುದು. ಇದರಿಂದ ವಿದ್ಯಾರ್ಥಿಗಳಲ್ಲಿನ ಸಂಘಟನಾ ಶಕ್ತಿ, ವಸ್ತುಪ್ರದರ್ಶನ ಕೌಶಲ್ಯ, ಗ್ರಾಹಕ ಸಂಬಂಧಿ ವೃದ್ಧಿಯ ಚತುರತೆ ಪ್ರಚುರ ಪಡಿಸಲು ಸಹಕಾರಿ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

