ರಾಯಚೂರು

ಕೆಜೆಪಿಯಿಂದ ಮಹದೇವಮ್ಮ

Published On :

ಯಾದಗಿರಿ: ನಗರಸಭೆ ಚುನಾವಣೆಯ ವಾರ್ಡ್ ನಂ.10ಕ್ಕೆ ಕೆಜೆಪಿ ಅಭ್ಯರ್ಥಿಯಾಗಿ ಮಹದೇವಮ್ಮ ಮಲ್ಲಯ್ಯ ಬಿರನೂರ ಅವರು ಶುಕ್ರವಾರ ನಗರದ ಎಪಿಎಂಸಿ ಯಾರ್ಡ್‌ನಲ್ಲಿರುವ ಪಶು ಸಂಗೋಪನಾ ಇಲಾಖೆಯ ಉಪನಿರ್ದೇಶಕರ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.
ಚುನಾವಣಾ ಅಧಿಕಾರಿ ಡಾ.ಎಂ.ಟಿ.ಮಂಜುನಾಥ ಹಾಗೂ ಉಪಚುನಾವಣಾಧಿಕಾರಿ ಮಾರುತಿ ಹುಜರತಿ ಅವರಿಗೆ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ನಾಗರಾಜ ಬಿರನೂರ, ಸಾಹೇಬ್ ರೆಡ್ಡಿ, ಪೀರ್ ಮೊಹಮ್ಮದ, ಮಲ್ಲಿಕಾರ್ಜುನ ಇತರರು ಇದ್ದರು.
ಬಿಎಸ್‌ಆರ್‌ನಿಂದ ಕಾವೇರಿ: ನಗರಸಭೆ ವಾರ್ಡ್ ನಂ.7ರಿಂದ ಸ್ಪರ್ಧಿಸಲು ಬಿಎಸ್‌ಆರ್ ಅಭ್ಯರ್ಥಿಯಾಗಿ ಕಾವೇರಿ ಮರೆಪ್ಪ ಇಬ್ರಾಹಿಂಪುರ ಅವರು ಶುಕ್ರವಾರ ನಾಮಪತ್ರ ಸಲ್ಲಿಸಿದರು. ನಗರದ ಎಪಿಎಂಸಿ ಆವರಣದಲ್ಲಿರುವ ಪಶು ಸಂಗೋಪನಾ ಇಲಾಖೆಯ ಉಪನಿರ್ದೇಶಕರ ಕಚೇರಿಯಲ್ಲಿ ಚುನಾವಣಾ ಅಧಿಕಾರಿ ಎಂ.ಟಿ.ಮಂಜುನಾಥ ಅವರಿಗೆ ನಾಮಪತ್ರ ಸಲ್ಲಿಸಿದರು. ನಗರಸಭೆ ನಿರ್ಗಮಿತ ಅಧ್ಯಕ್ಷೆ ಲಲಿತಾ ಅನಪುರ ಇತರರು ಇದ್ದರು.
ಕಾಂಗ್ರೆಸ್‌ನಿಂದ ಮಂಜುಳಾ ಘೂಳಿ: ಜಿಲ್ಲಾ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಮಂಜುಳಾ ಘೂಳಿ ಅವರು ಕಾಂಗ್ರೆಸ್‌ನಿಂದ ವಾರ್ಡ್ ನಂ.8ಕ್ಕೆ ಶುಕ್ರವಾರ ನಾಮಪತ್ರ ಸಲ್ಲಿಸಿದರು. ನಗರಸಭೆ ನಿರ್ಗಮಿತ ಸದಸ್ಯೆ ಕವಿತಾ ಪಾಟೀಲ, ನಾಗಪ್ಪ ಮಗದಂಪುರ, ಮಲ್ಲನಗೌಡ ಮಾಲಿಪಾಟೀಲ, ವಿನಾಯಕ ಪಾಟೀಲ, ವಿಜಯಲಕ್ಷ್ಮೀ, ಶಿವರಾಜ ಜಕಾತಿ ಇತರರು ಇದ್ದರು.
ಬಿಜೆಪಿಯಿಂದ ಅಂಬಿಗೇರ: ನಗರಸಭೆ ವಾರ್ಡ್ ನಂ.7ಕ್ಕೆ ಸ್ಪರ್ಧಿಸಲು ಬಿಜೆಪಿಯಿಂದ ಮಹಾದೇವಮ್ಮ ಅಂಬಿಗೇರ ಅವರು ಶುಕ್ರವಾರ ನಾಮಪತ್ರ ಸಲ್ಲಿಸಿದರು. ತೊಗರಿ ಮಂಡಳಿ ಅಧ್ಯಕ್ಷ ವೆಂಕಟೇಶ ಗಡ್ಡಿಮನಿ, ಸಿದ್ದಾರೆಡ್ಡಿ ಬಲಕಲ್, ದೇವಿಂದ್ರನಾಥ ನಾದ್ ಇದ್ದರು.
ಜೆಡಿಎಸ್‌ನಿಂದ ಮಹ್ಮದ್ ಇಸಾಖ್: ನಗರಸಭೆ ವಾರ್ಡ್ ನಂ.12ರಿಂದ ಜೆಡಿಎಸ್ ಅಭ್ಯರ್ಥಿಯಾಗಿ ಮಹಮ್ಮದ್ ಇಸಾಖ್ ಅವರು ಶುಕ್ರವಾರ ನಾಮಪತ್ರ ಸಲ್ಲಿಸಿದರು. ಪ್ರಮುಖರಾದ ಎಸ್.ಪಿ.ನಾಡೇಕರ್, ಮಹಮ್ಮದ್ ಅಲಿ, ಜಕೀರಸಾಬ್, ಆರಿಫ್ ಕಾಡ್ಲೂರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.