ರಾಯಚೂರು

ರೇಲ್ವೆ ಬಜೆಟ್ 2013 ಜನ ಏನಂತಾರೆ?

Published On :

ಜಿಲ್ಲೆಗೆ ಹೊಸದೇನೂ ಕೊಟ್ಟಿಲ್ಲ. ಜಾರಿಯಲ್ಲಿರುವ ಯೋಜನೆಗಳಿಗೆ ಅಷ್ಟಿಷ್ಟು ದೊರೆಯಬಹುದು. ನಿರಾಶಾದಾಯಕ ಬಜೆಟ್ ಇದು. ದಶಕಗಳಿಂದ ಜಾರಿಯಲ್ಲಿರುವ ಯೋಜನೆಗಳತ್ತ ಗಮನವಿಲ್ಲ. ನಿರಾಸೆ ತಂದಿದೆ.
- ಸಣ್ಣಫಕೀರಪ್ಪ, ಸಂಸದ, ರಾಯಚೂರು.


ಈ ಭಾಗದ ಬೇಡಿಕೆಗಳಿಗೆ ಸ್ಪಂದಿಸಿಲ್ಲ. ಹಳಸಲು ಯೋಜನೆಗಳನ್ನೇ ಮತ್ತೆ ಪ್ರಸ್ತಾಪಿಸಲಾಗಿದೆ. ಜಿಲ್ಲೆಯಲ್ಲಿ ಈಗಾಗಲೇ ಜಾರಿಯಲ್ಲಿರುವ ಯೋಜನೆಗಳನ್ನು ಚುರುಕುಗೊಳಿಸುವ ನಿಟ್ಟಿನಲ್ಲಿ ಬಜೆಟ್‌ನಲ್ಲಿ ವಿಷಯ ಪ್ರಸ್ತಾಪಿಸಿಲ್ಲ.
- ತ್ರಿವಿಕ್ರಮ್ ಜೋಷಿ, ರಾಯಚೂರು.


ಗದಗ-ವಾಡಿ ರೈಲ್ವೆ  ಮಾರ್ಗ ಪುನಾ ಸೇರ್ಪಡೆ ಅಲ್ಪ ಸಮಾಧಾನ ತಂದಿದೆ. ಈ ಭಾಗಕ್ಕೆ ಗಮನ ಅಷ್ಟಕ್ಕಷ್ಟೇ. ಕೇಂದ್ರದ ಮೇಲೆ ಜನಸಂಗ್ರಾಮ ಪರಿಷತ್ತಿನಿಂದ ಒತ್ತಡ ಹೇರಿದ್ದರಿಂದ ಗದಗ-ವಾಡಿ ಸೇರ್ಪಡೆಯಾಗಿದೆ.
- ರಾಘವೇಂದ್ರ ಕುಷ್ಟಗಿ, ಜನಸಂಗ್ರಾಮ ಪರಿಷತ್


ಹೈ- ಕ ಭಾಗದ ಜನರ ಬಹುದಿನದ ಕನಸಾದ ಗದಗ- ವಾಡಿ ರೇಲ್ವೆ ಯೋಜನೆಗೆ ಕೇಂದ್ರದ ರೇಲ್ವೆ ಸಚಿವರು ಬಜೆಟ್‌ನಲ್ಲಿ ಹಸಿರು ನಿಶಾನೆ ತೋರಿರುವುದು ಸ್ವಾಗತಾರ್ಹ.
- ಪಾಮಯ್ಯ ಮುರಾರಿ, ಜಿಪಂ ಮಾಜಿ ಉಪಾಧ್ಯಕ್ಷರು, ಲಿಂಗಸ್ಗೂರು


ಹೈ-ಕ ಹಿರಿಯ ನಾಯಕರು ಪ್ರಧಾನಮಂತ್ರಿ ಬಳಿ ನಿಯೋಗ ತೆರಳಿ ರೇಲ್ವೆ ಮಾರ್ಗಗಳ ಆರಂಭಿಸಲು ಮನವಿಗೆ ಸ್ಪಂದಿಸಿ ಗದಗ-ವಾಡಿ ರೇಲ್ವೆ ಮಾರ್ಗ ಆರಂಭಕ್ಕೆ ಬಜೆಟ್‌ನಲ್ಲಿ ಹಸಿರು ನಿಶಾನೆ ತೋರಿದೆ.
- ಶರಣಪ್ಪ ಮೇಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಿಂಗಸ್ಗೂರು.

ಮುನಿರಾಬಾದ್ ಮಹಿಬೂಬನಗರ ರೇಲ್ವೆ ಯೋಜನೆ ನೆನೆಗುದಿಗೆ ಬಿದ್ದಂತೆ ನೆಪಮಾತ್ರಕ್ಕೆ ಆಗಬಾರದು. ಕೂಡಲೇ ಕಾರ್ಯೋನ್ಮುಖರಾಗಿ ರೈತರ ಜಮೀನುಗಳಿಗೆ ಯೋಗ್ಯ ಬೆಲೆ ನೀಡಿ ಭೂಮಿ ಖರೀದಿಸಿ ಕೆಲಸ ಆರಂಭಿಸಬೇಕು.
- ಎಚ್.ಬಿ. ಮುರಾರಿ,
ಜಿಪಂ ಸದಸ್ಯ ಲಿಂಗಸ್ಗೂರು.


ರೇಲ್ವೆ ಬಜೆಟ್ ಜನಸ್ನೇಹಿ ಬಜೆಟ್ ಆಗಿದೆ. ಈ ಬಾರಿ ರೈಲುಗಳಲ್ಲಿ ಉಪಾಹಾರ ಸುಧಾರಣೆಗೆ ವ್ಯವಸ್ಥೆ ಮಾಡಲಾಗಿದೆ. ಮಹಿಳೆಯರಿಗೆ ಸುರಕ್ಷತೆ ಕಲ್ಪಿಸಿರುವುದು ಕಾಂಗ್ರೆಸ್ ಪಕ್ಷದ ಸಾಧನೆ.
- ಹಂಪನಗೌಡ ಬಾದರ್ಲಿ,
ಮಾಜಿ ಶಾಸಕ, ಸಿಂಧನೂರು.


ರೇಲ್ವೆ ಬಜೆಟ್‌ನಲ್ಲಿ ಮುನಿರಾಬಾದ್ ಮಹಿಬೂಬನಗರ ರೇಲ್ವೆಗೆ ಆದ್ಯತೆ ನೀಡಿಲ್ಲ. ಈ ಭಾಗದ ಜನರ ಕನಸು ನುಚ್ಚುನೂರಾಗಿದೆ. ಬನ್ಸಾಲ್ ಬಜೆಟ್ ಜನಪರವಾಗಿಲ್ಲ. ರಾಜ್ಯಕ್ಕೆ ನಿರಾಶೆ ಮೂಡಿಸಿದೆ.
- ಕೆ.ವಿರೂಪಾಕ್ಷಪ್ಪ,
ಮಾಜಿ ಸಂಸದ


ರೈಲು ಬೋಗಿಗಳಲ್ಲಿ ಮಹಿಳಾ ಪ್ರಯಾಣಿಕರಿಗೆ ವ್ಯವಸ್ಥೆ ಕಲ್ಪಿಸಿರುವುದು ಸ್ವಾಗತಾರ್ಹ. ಸುರಕ್ಷತೆ ದೃಷ್ಟಿಯಿಂದ ಭಾರತೀಯ ರೇಲ್ವೆ ಕಳ್ಳತನಕ್ಕೆ ಕಡಿವಾಣ ಹಾಕುವ ದೃಷ್ಟಿಯಿಂದ ಮುಂದಾಗಿರುವುದು ಸಂತಸ ತಂದಿದೆ.
- ಹನುಮನಗೌಡ ಬೆಳಗುರ್ಕಿ
ರೈತ ಮುಖಂಡರು, ಸಿಂಧನೂರು


ಈ ಬಾರಿ ರೇಲ್ವೆ ಸಚಿವರು ಮಂಡಿಸಿದ ಬಜೆಟ್‌ನಲ್ಲಿ ನೂರು ಹೊಸ ರೈಲುಗಳನ್ನು ಆರಂಭಿಸಲು ಮುಂದಾಗಿರುವುದು ಸ್ವಾಗತಾರ್ಹ. ಪ್ರಯಾಣದ ದರ ಏರಿಕೆ ಜನಸಾಮಾನ್ಯರಿಗೆ ಅಷ್ಟೊಂದು ಭಾರವಾಗಿಲ್ಲ.
- ವೀರೇಶ ಸಜ್ಜನ,
ಯುವ ಕವಿ, ಸಿಂಧನೂರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.