757 ಅಭ್ಯರ್ಥಿಗಳು ಕಣದಲ್ಲಿ
ರಾಯಚೂರು: ನಗರ ಮತ್ತು ಸ್ಥಳೀಯ ಸಂಸ್ಥೆಗಳಿಗೆ ಮಾ.7ರಂದು ನಡೆಯಲಿರುವ ಚುನಾವಣೆಗೆ ಅಂತಿಮವಾಗಿ ನಾಮಪತ್ರಗಳ ಹಿಂತೆಗೆತದ ನಂತರ 757 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.
ಜಿಲ್ಲೆಯ ನಗರ ಮತ್ತು ಸ್ಥಳೀಯ ಸಂಸ್ಥೆಗಳಿಗೆ ನಡೆಯುವ ಚುನಾವಣೆಗೆ ಒಟ್ಟು 1175 ಜನ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಪರಿಶೀಲನೆ ನಂತರ 938 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿದ್ದವು. ಆದರೆ ನಾಮಪತ್ರ ಹಿಂತೆಗೆತದ ನಂತರ ಒಟ್ಟು 757 ಅಭ್ಯರ್ಥಿಗಳು ಕಣದಲ್ಲಿ ಉಳಿದಂತಾಗಿದೆ.
ರಾಯಚೂರು ನಗರಸಭೆ: ರಾಯಚೂರು ನಗರಸಭೆಯ ಒಟ್ಟು 35 ವಾರ್ಡುಗಳಿಗೆ 237 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಕಾಂಗ್ರೆಸ್- 34, ಬಿಜೆಪಿ- 29, ಜೆಡಿಎಸ್- 35, ಬಿಎಸ್ಸಾರ್ ಕಾಂಗ್ರೆಸ್- 28, ಕೆಜೆಪಿ- 19, ಪಕ್ಷೇತರರು-92 ಜನ ಕಣದಲ್ಲಿದ್ದಾರೆ.
ಸಿಂಧನೂರು ನಗರಸಭೆ: ಸಿಂಧನೂರು ನಗರಸಭೆಯ 31 ವಾರ್ಡುಗಳಲ್ಲಿ 171 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಕಾಂಗ್ರೆಸ್- 31, ಬಿಜೆಪಿ- 21, ಜೆಡಿಎಸ್- 29, ಬಿಎಸ್ಸಾರ್ ಕಾಂಗ್ರೆಸ್- 31, ಸಿಪಿಎಂ- 2, ಕೆಜೆಪಿ- 28, ಪಕ್ಷೇತರರು- 22, ಜೆಡಿಯು- 5, ಎನ್ಸಿಪಿ- 1, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ- 1 ಅಭ್ಯರ್ಥಿ ಕಣದಲ್ಲಿದ್ದಾರೆ.
ಮಾನವಿ ಪುರಸಭೆ: ಮಾನವಿ ಪುರಸಭೆಯ 23 ವಾರ್ಡುಗಳಿಗೆ 111 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಒಂದು ಕ್ಷೇತ್ರದಲ್ಲಿ ಅವಿರೋಧ ಆಯ್ಕೆ ನಡೆದಿದೆ. ಹೀಗಾಗಿ 22 ವಾರ್ಡುಗಳಿಗೆ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್- 20, ಬಿಜೆಪಿ- 18, ಜೆಡಿಎಸ್- 22, ಬಿಎಸ್ಸಾರ್ ಕಾಂಗ್ರೆಸ್- 22, ಸಿಪಿಎಂ- 1, ಕೆಜೆಪಿ- 10, ಪಕ್ಷೇತರರು- 17, ವೆಲ್ ಫೇರ್ ಪಾರ್ಟಿ ಆಫ್ ಇಂಡಿಯಾ- 1 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ದೇವದುರ್ಗ ಪುರಸಭೆ: ದೇವದುರ್ಗ ಪುರಸಭೆಯ 23 ವಾರ್ಡುಗಳಲ್ಲಿ ಒಂದು ವಾರ್ಡಿಗೆ ಈಗಾಗಲೇ ಅವಿರೋಧ ಆಯ್ಕೆಯಾಗಿದ್ದು, 22 ವಾರ್ಡುಗಳಿಗೆ ಚುನಾವಣೆ ನಡೆಯಲಿದ್ದು, 68 ಜನ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಕಾಂಗ್ರೆಸ್- 22, ಬಿಜೆಪಿ- 22, ಜೆಡಿಎಸ್- 12, ಬಿಎಸ್ಸಾರ್ ಕಾಂಗ್ರೆಸ್- 5, ಎಸ್ಡಿಪಿಐ ಪಕ್ಷ- 2, ಪಕ್ಷೇತರರು- 5 ಜನ ಕಣದಲ್ಲಿದ್ದಾರೆ.
ಲಿಂಗಸ್ಗೂರು ಪುರಸಭೆ: ಲಿಂಗಸ್ಗೂರು ಪುರಸಭೆಯ ಒಟ್ಟು 23 ವಾರ್ಡುಗಳಲ್ಲಿ ಒಂದು ವಾರ್ಡಿಗೆ ಅವಿರೋಧ ಆಯ್ಕೆಯಾಗಿದ್ದು, 22 ವಾರ್ಡುಗಳಿಗೆ ಚುನಾವಣೆ ನಡೆಯಲಿದೆ. 103 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಕಾಂಗ್ರೆಸ್- 22, ಬಿಜೆಪಿ- 12, ಜೆಡಿಎಸ್- 22, ಬಿಎಸ್ಸಾರ್ ಕಾಂಗ್ರೆಸ್- 18, ಕೆಜೆಪಿ- 16, ಪಕ್ಷೇತರರು-9, ಜೆಡಿಯು- 4 ಅಭ್ಯರ್ಥಿಗಳಿದ್ದಾರೆ.
ಮುದಗಲ್ ಪಪಂ: ಲಿಂಗಸ್ಗೂರು ತಾಲೂಕಿನ ಮುದಗಲ್ ಪಟ್ಟಣ ಪಂಚಾಯಿತಿಯ 19 ವಾರ್ಡುಗಳಿಗೆ ಚುನಾವಣೆ ನಡೆಯಲಿದ್ದು, ಒಟ್ಟು 67 ಜನ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಕಾಂಗ್ರೆಸ್- 19, ಬಿಜೆಪಿ- 9, ಜೆಡಿಎಸ್- 18, ಬಿಎಸ್ಸಾರ್ ಕಾಂಗ್ರೆಸ್- 14, ಕೆಜೆಪಿ- 3, ಪಕ್ಷೇತರರು- 4 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಅವಿರೋಧ ಆಯ್ಕೆ: ನಾಮಪತ್ರ ಹಿಂಪಡೆಯುವ ದಿನ ಕೊನೆಗೊಳ್ಳುತ್ತಿದ್ದಂತೆಯೇ ಜಿಲ್ಲೆಯಲ್ಲಿ ಮೂವರು ಅವಿರೋಧ ಆಯ್ಕೆಯಾಗಿದ್ದಾರೆ. ಮಾನವಿ ಪುರಸಭೆಯ 21ನೇ ವಾರ್ಡಿನ ಕಾಂಗ್ರೆಸ್ ಅಭ್ಯರ್ಥಿ ಸೈಯದ್ ನಜೀರುದ್ದೀನ್ ಖಾದ್ರಿ, ದೇವದುರ್ಗ ಪುರಸಭೆಯ 18ನೇ ವಾರ್ಡಿನ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ರಂಗಯ್ಯ ಹಾಗೂ ಲಿಂಗಸ್ಗೂರು ಪುರಸಭೆಯ 20ನೇ ವಾರ್ಡಿನ ಜೆಡಿಎಸ್ ಅಭ್ಯರ್ಥಿ ಬಸವರಾಜ ಯತಗಲ್ ಈಗಾಗಲೇ ಅವಿರೋಧ ಆಯ್ಕೆಯಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

