ಕಾರ್ಮಿಕರ ಪ್ರತಿಭಟನೆ
ಲಿಂಗಸ್ಗೂರು: ತಾಲೂಕಿನ ನಾಗರಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬರುವ ಕಡುಬಡವರಿಗೆ ಪಡಿತರ ಚೀಟಿ ವಿತರಿಸಬೇಕೆಂದು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರು ಇತ್ತೀಚೆಗೆ ಪ್ರತಿಭಟನೆ ನಡೆಸುವ ಮೂಲಕ ತಹಸೀಲ್ದಾರ್ ಮಹಾಜನ್ ಅವರಿಗೆ ಮನವಿ ಸಲ್ಲಿಸಿದರು. ತಾಲೂಕಿನಲ್ಲಿ ಪಡಿತರ ಚೀಟಿಗಳನ್ನು ರದ್ದುಗೊಳಿಸದೆ ಅರ್ಹ ಫಲಾನುಭವಿಗಳಿಗೆ ಹೊಸ ಪಡಿತರ ಚೀಟಿ ವಿತರಿಸಬೇಕು. ಭಾಗ್ಯಜ್ಯೋತಿ ಯೋಜನೆ ಕುಟುಂಬಗಳಿಗೆ ಬಿಪಿಎಲ್ ಕಾರ್ಡ್ ವಿತರಿಸಬೇಕು. ಭಾಗ್ಯಜ್ಯೋತಿ ಇಲ್ಲದ ಕುಟುಂಬಗಳಿಗೆ ಬಿಪಿಎಲ್ ಕಾರ್ಡುಗಳನ್ನು ನವಿಕರಸಬೇಕೆಂದು ಒತ್ತಾಯಿಸಿದರು. ಈ ವೇಳೆ ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡರಾದ ಹನುಮಂತ ಕಾರಲಕುಂಟಿ, ಗುರುಪಾದಪ್ಪ ನಾಯಿಕೊಡಿ, ಪರಶುರಾಮ ಹಲ್ಕಾವಟಗಿ, ಅಮರೇಶ, ಮಲ್ಲಪ್ಪ ಸೇರಿದಂತೆ ಇದ್ದರು.
ಗ್ರಾಹಕನ ವೇಷದಲ್ಲಿ ಬಂದ, ಚಿನ್ನ ಕದ್ದು ಪರಾರಿಯಾದ!
ಹುಣಸಗಿ: ಪಟ್ಟಣದ ಈರಣ್ಣ ಪತ್ತಾರ ಎಂಬುವವರಿಗೆ ಸೇರಿದ ಬಂಗಾರದ ಆಭರಣದ ಅಂಗಡಿಗೆ ಗ್ರಾಹಕನ ವೇಷದಲ್ಲಿ ಬಂದ ವ್ಯಕ್ತಿಯೊಬ್ಬ 135 ಗ್ರಾಂ ಬಂಗಾರವನ್ನು ಕದ್ದು ಪರಾರಿಯಾದ ಘಟನೆ ನಡೆದಿದೆ. ಬಂಗಾರದ ಒಡವೆಗಳನ್ನು ಖರೀದಿ ಮಾಡುವವನಂತೆ ನಟಿಸುತ್ತ, ಮಣಿಗಳನ್ನು ಕೆಳಗೆ ಚೆಲ್ಲಿ ಮಾಲೀಕನ ಗಮನ ಬೇರೆಡೆ ಹರಿಯುವಂತೆ ಆ ಅಪರಿಚಿತ ವ್ಯಕ್ತಿ ಮಾಡಿದ್ದಾನೆ, ತಕ್ಷಣ ಬಂಗಾರದ ಆಭರಣಗಳನ್ನು ಕದ್ದು ಬೈಕಿನಲ್ಲಿ ವೇಗದಿಂದ ಪರಾರಿಯಾಗಿ ಹೋದನೆಂದು ಹೇಳಲಾಗಿದೆ. ಈ ಬಗ್ಗೆ ಹುಣಸಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಪ್ರಭಾರಿ ಎಸ್ಪಿ ಬಿ.ಮಹಾಂತೇಶ, ಡಿವೈಎಸ್ಪಿ ಎಸ್.ಡಿ. ಕಟ್ಟಿಮನಿ, ಹುಣಸಗಿ ಸಿಪಿಐ ಸತ್ಯನಾರಾಯಣರಾವ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಆರೋಪಿಗಳ ಪತ್ತೆಗಾಗಿ ವ್ಯಾಪಕ ಜಾಲ ಬೀಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ವೈಭವದ ಶ್ರೀಶೈಲ ಶೋಭಾಯಾತ್ರೆ
ಶಹಾಪುರ: ಶ್ರೀಶೈಲ ಮಲ್ಲಿಕಾರ್ಜುನ ಹಾಗೂ ಭ್ರಮರಾಂಬಾದೇವಿಯ ಶೋಭಾಯಾತ್ರೆ ಪಟ್ಟಣದಲ್ಲಿ ವೈಭವದಿಂದ ನಡೆಯಿತು. ಪಟ್ಟಣದ ಬಸವೇಶ್ವರ ವೃತ್ತದಿಂದ ಶ್ರೀಶೈಲ ಮಲ್ಲಿಕಾರ್ಜುನ ಮತ್ತು ಭ್ರಮರಾಂಬಾದೇವಿಯ ಶೋಭಾಯಾತ್ರೆ ಪ್ರಾರಂಭವಾಗಿ ಮೋಚಿಗಡ್ಡಾ, ಗಾಂಧೀ ಚೌಕ್, ದಿಗ್ಗಿ ಅಗಸಿ ಮಾರ್ಗವಾಗಿ ಚರಬಸವೇಶ್ವರ ಗದ್ದುಗೆಗೆ ತಲುಪಿ ನಂತರ ಕಲ್ಯಾಣ ಮಹೋತ್ಸವ ಕಾರ್ಯಕ್ರಮ ನಡೆಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

