9ರಿಂದ ಧಾರ್ಮಿಕ ಪ್ರವಾಸ
ಕನ್ನಡಪ್ರಭ ವಾರ್ತೆ, ಸಿಂಧನೂರು, ಜು.4
ಕನಕ ಸಂಸ್ಕಾರ ಬಳಗ, ಕರ್ನಾಟಕ ಹಾಲುಮತ ಜಾಗೃತಿ ಪ್ರತಿಷ್ಠಾನ ಹಾಗೂ ಸಿಂಧೂರವಾಣಿ ಪ್ರತಿಷ್ಠಾನದ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಧಾರ್ಮಿಕ ಕಾರ್ಯಕ್ರಮಗಳ ನಿಮಿತ್ತ ಜು.9ರಿಂದ ವಿಶೇಷ ಪವಿತ್ರ ಕ್ಷೇತ್ರಗಳ ಯಾತ್ರಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕನಕ ಸಂಸ್ಕಾರ ಬಳಗದ ಸಂಚಾಲಕ ಬಸವರಾಜ ಗೋಡಿಹಾಳ ಹೇಳಿದರು.
ನಗರದ ಕನಕ ಸಂಸ್ಕಾರ ಬಳಗದ ಕಚೇರಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ ಏಳು ವರ್ಷಗಳಿಂದ ಹಮ್ಮಿಕೊಂಡು ಬಂದಂತೆ ಈ ಬಾರಿಯೂ ಧಾರ್ಮಿಕ ಪ್ರವಾಸವು 7 ದಿನಗಳವರೆಗೆ ಇರುತ್ತದೆ. ಶೃಂಗೇರಿ- ಹೊರನಾಡು- ಧರ್ಮಸ್ಥಳ- ಕುಕ್ಕೆ ಸುಬ್ರಮಣ್ಯಂ, ಮೈಸೂರು ಸೇರಿದಂತೆ ರಾಜ್ಯದ ಒಟ್ಟು 27 ಧಾರ್ಮಿಕ, ಪ್ರೇಕ್ಷಣೀಯ ಹಾಗೂ ಐತಿಹಾಸಿಕ ತಾಣಗಳಿಗೆ ಪ್ರವಾಸ ಕೈಗೊಳ್ಳಲಾಗಿದೆ.
2400 ಕಿಮೀ ಪ್ರಯಾಣ: ಪ್ರವಾಸದಲ್ಲಿ ಸರ್ವ ಸಮಾಜದ ಬಂಧುಗಳಿಗೆ ಸ್ವಾಗತವಿರುತ್ತದೆ. ಪ್ರವಾಸದಲ್ಲಿ ಯಾತ್ರಾರ್ಥಿಗಳಿಗೆ ವೈದ್ಯಕೀಯ ಚಿಕಿತ್ಸೆ ಸೇರಿದಂತೆ ವಿವಿಧ ಸೌಲಭ್ಯಗಳಿದ್ದು, ಸುಮಾರು 2400 ಕಿಮೀ ಪ್ರಯಾಣ ಇರುತ್ತದೆ. ಈ ಪ್ರವಾಸದಿಂದ ಬರುವಂತಹ ಉಳಿತಾಯದ ಹಣವನ್ನು ನವೆಂಬರ್- ಡಿಸೆಂಬರ್ ತಿಂಗಳಲ್ಲಿ ಜರುಗುವ ಧಾರ್ಮಿಕ ಕಾರ್ಯಗಳಿಗೆ ವಿನಿಯೋಗಿಸಲಾಗುವುದು. ಸರ್ವರೂ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.
ಧಾರ್ಮಿಕ ಚಟುವಟಿಕೆಗಳಲ್ಲಿ ಕೈಜೋಡಿಸಿ: ಬಳಗದ ಇನ್ನೊಬ್ಬ ಯುವ ಮುಖಂಡ ವೆಂಕಟೇಶ ಬಾದರ್ಲಿ ಮಾತನಾಡಿ ಕೋಶ ಓದು, ಇಲ್ಲ ದೇಶ ನೋಡು ಎಂಬಂತೆ ಕರ್ನಾಟಕದ ಪವಿತ್ರ ನೆಲದಲ್ಲಿ ಅನೇಕ ದಾಸರು- ಶರಣರು- ಸಂತ- ಮಹಾಂತರು ಆಗಿ-ಹೋಗಿರುವ ಈ ಪುಣ್ಯಭೂಮಿಯನ್ನು ನೋಡುವುದೇ ಮಾನವನಿಗೆ ಒಂದು ಸೌಭಾಗ್ಯ. ನಮ್ಮ ಬಳಗದಿಂದ ಹಮ್ಮಿಕೊಂಡಿರುವ ಧಾರ್ಮಿಕ ಪ್ರವಾಸದಲ್ಲಿ ಭಾಗಿಯಾಗಿ ಪರೋಕ್ಷವಾಗಿ ಧಾರ್ಮಿಕ ಕಾರ್ಯಗಳಿಗೆ ಕೈ ಜೋಡಿಸಬೇಕೆಂದರು.
ಪ್ರವಾಸಕ್ಕೆ ಒಬ್ಬ ವ್ಯಕ್ತಿಗೆ 3,600 ನಿಗದಿಪಡಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಚಾಲಕರಾದ ಡಿ.ಹನುಮೇಶ ಮೊ. 9060673909, ಬಸವರಾಜ ಗೋಡಿಹಾಳ ಮೊ. 9449667882ಕ್ಕೆ ಸಂಪರ್ಕಿಸುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಹಾಲುಮತ ಜಾಗೃತಿ ಪ್ರತಿಷ್ಠಾನದ ಅಧ್ಯಕ್ಷ ಬಿ.ಬಸವರಾಜ, ಸಿಂಧೂರವಾಣಿ ಪ್ರತಿಷ್ಠಾನದ ಅಧ್ಯಕ್ಷ ಬಿ.ಹನುಮೇಶ, ಬಳಗದ ಮುಖಂಡರಾದ ಎಸ್.ಬಿ. ಸಣ್ಣತಿಮ್ಮಯ್ಯ, ಎಸ್.ಬಿ. ತಿಮ್ಮಣ್ಣ ವಾಲೇಕಾರ, ಕಟಾಲಿ ದುರುಗಪ್ಪ, ಶಶಿಧರ ಭಂಗಿ, ಭಂಗಿ ನರಸಪ್ಪ ಕಿರಾಣಿ, ಹನುಮಂತಪ್ಪ ದುಡದುಡ್ಡಿ, ಬಸವರಾಜ ಗುತ್ತಿ, ಬಾದರ್ಲಿ ಮಂಜುನಾಥ, ಖಾಜಾಮಿಯಾ, ದೇವರಾಜ ಬಪ್ಪೂರು, ದೌವಲಸಾಬ ಕೋಟೆ ಸೇರಿದಂತೆ ಅನೇಕರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

