ರಾಯಚೂರು

ರಂಜಾನ್‌ಗೆ ವಿದೇಶಿ ಖರ್ಜೂರ

Published On :

ಕನ್ನಡಪ್ರಭ ವಾರ್ತೆ, ಮುದಗಲ್, ಜು.22
ಮುಸ್ಲಿಮರ ಪವಿತ್ರ ಹಬ್ಬ ರಂಜಾನ್. ಸತತ ತಿಂಗಳ ಪರ್ಯಂತ ಉಪವಾಸ ಮಾಡುತ್ತಾರೆ. ಪಟ್ಟಣದಲ್ಲಿ ಶೇ. 40ರಷ್ಟು ಮುಸ್ಲಿಂ ಜನಾಂಗವಿದ್ದು ಉಪಾಸಕರಿಗೆ ಪ್ರತಿ ನಿತ್ಯ ಇಫ್ತಿಯಾರ್ ಕೂಟ ನಡೆಸಲಾಗುತ್ತದೆ. ದಾನಿಗಳು, ರಾಜಕೀಯ ಮುಖಂಡರು, ಉಪಾಸಕರಿಗೆ ಇಫ್ತಾರ್ ಕೂಟ ನಡೆಸಿ ಹಣ್ಣು, ಅನ್ನ, ಆಹಾರವನ್ನು ಊಟ ಮಾಡಿಸಿದರೆ ಪಣ್ಯ ಲಭಿಸುತ್ತದೆ ಎನ್ನುವ ನಂಬಿಕೆ. ಉಪಾಸಕರಿಗೆ ದೇಶಿ ತಳಿಯ ಪಪ್ಪಾಯ, ಖರ್ಜೂರ, ಬಾಳೆ ಹಣ್ಣುಗಳನ್ನು ನೀಡಿ ಹಸಿವನ್ನು ತಣಿಸಲಾಗುತ್ತದೆ.
ಆದರೆ ವಿಶೇಷ ಎಂದರೆ- ಈ ಬಾರಿ ಸ್ಥಳೀಯ ಹಣ್ಣು ವ್ಯಾಪಾರಿಯೊಬ್ಬ ವಿದೇಶಿ ಮೂಲಕ 33 ವಿವಿಧ ತಳಿಯ ಖರ್ಜೂರ ಹಣ್ಣುಗಳನ್ನು ತರಿಸಿ ಮಾರಾಟ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿರುವುದು.
ವಿದೇಶಗಳಿಂದ ಆಮದು: ಪಟ್ಟಣದ ಹಣ್ಣು ವ್ಯಾಪಾರಿ ಫ್ರೂಟ್ಸ್ ಮೈಬೂಬ್ ಅಬು ಎಂಬುವರರು ದುಬೈ, ಇರಾನ್, ಇರಾಕ್ ದೇಶಗಳಿಂದ ವಿವಿಧ ಬಗೆಯ ಖರ್ಜೂರ ಹಣ್ಣನ್ನು ತರಿಸಿದ್ದಾರೆ. ದುಬೈ, ಇರಾನ್, ಇರಾಕ್ ದೇಶದ ತಳಿಗಳಾದ ತರಕುಲ್, ಕಿಮ್ಯಾ, ಬಿರಾರಿ, ಕ್ರೌನ್, ಮುಕಾಲತ್, ಫಿಟ್, ಅಫೀಕೂಟ್, ಕಿರಮಾನ, 7777 ಸೇರಿದಂತೆ ಇನ್ನು ಅನೇಕ ತಳಿಯ ಖರ್ಜೂರ ಹಣ್ಣುಗಳನ್ನು ಆಮದು ಮಾಡಿಕೊಂಡು ಮಾರಾಟ ಮಾಡುತ್ತಿದ್ದಾರೆ. ರಂಜಾನ್ ಹಬ್ಬದಲ್ಲಿ ಬಡವರಿಂದ ಹಿಡಿದು ಶ್ರೀಮಂತರವರೆಗೂ ಕೈಗೆಟಕುವ ದರದಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ವ್ಯಾಪಾರಿ ಮೈಬೂಬ್ ಹೇಳುತ್ತಾರೆ.
ವ್ಯಾಪಾರ ಜೋರು: ದೇಶಿ ತಳಿಗಳಿಗಿಂತ ವಿದೇಶಿ ತಳಿಯ ಖರ್ಜೂರ ವ್ಯಾಪಾರ ಹೆಚ್ಚಾಗಿದೆ. ಆದ್ದರಿಂದ ಬಾಂಬೆ ಮೂಲಕ ಮುದಗಲ್ ಪಟ್ಟಣಕ್ಕೆ ತರಲಾಗುತ್ತದೆ. ಇಲ್ಲಿಂದ ರಾಯಚೂರು, ಮಾನವಿ, ಸಿಂಧನೂರು, ಗಂಗಾವತಿ, ಬಾಗಲಕೋಟೆ, ಇಳಕಲ್ಲ, ಆಲಮಟ್ಟಿ, ಲಿಂಗಸ್ಗೂರು ಸೇರಿದಂತೆ ಬಹುತೇಕ ಪಟ್ಟಣಗಳ ವ್ಯಾಪಾರಿಗಳಿಗೆ ಇಲ್ಲಿಂದಲೇ ಸಾಗಿಸಲಾಗುತ್ತದೆ ಎನ್ನುತ್ತಾರೆ.
ಕೆಜಿಗೆ 60ರಿಂದ 400ರವರೆಗೆ ಖರ್ಜೂರ ಮಾರಾಟವಾಗುತ್ತಿದೆ. ಇದರ ಜೊತೆಗೆ ದೇಶಿ ತಳಿಯ ಖರ್ಜೂರ, ಬಾಳೆ ಹಣ್ಣು, ಸೇಬು, ಕಿತ್ತಳೆಹಣ್ಣು ಮುಂತಾದ ಹಣ್ಣುಗಳ ವ್ಯಾಪಾರ ನಡೆಯುತ್ತಿದೆ ಎಂದು ತಿಳಿಸಿದರು.
ವರ್ಷದ 12 ತಿಂಗಳೂ ತಮ್ಮ ಬಳಿ ವಿವಿಧ ಬಗೆಯ ಹಣ್ಣುಗಳು ದೊರೆಯುತ್ತವೆ. ಹಣ್ಣು ಸಂಗ್ರಹ ಮಾಡಲು ದೊಡ್ಡ ಪ್ರಮಾಣದ ಹವಾ ನಿಯಂತ್ರಿತ ಗೋದಾಮು ನಿರ್ಮಿಸಿದ್ದರಿಂದ ಸದಾ ಕಾಲ ತಮ್ಮ ಬಳಿ ಹಣ್ಣುಗಳು ದೊರೆಯುತ್ತಿವೆ ಎನ್ನುತ್ತಾರೆ ಫ್ರೂಟ್ ಮೈಬೂಬ್.
 -ಪಂಪಯ್ಯ ಮಠ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.