'ಯುವ ಸಮೂಹ ಜಾಗೃತಗೊಳ್ಳಲಿ'
ಸಿಂಧನೂರು: ವಿದ್ಯೆ ಸಾಧಕನ ಸ್ವತ್ತಾಗಿದೆ. ಸೋಮಾರಿಗಳಿಗೆ ಕಲಿಕೆ ಅಸಾಧ್ಯ ವಿದ್ಯೆ. ನಮ್ಮ ಜ್ಞಾನಾರ್ಜನೆಗೆ ವಿದ್ಯೆ ಸೀಮಿತವಾಗಬೇಕು. ಪದವಿ ಪಡೆದವರೂ ನಿರುದ್ಯೋಗಿಗಳಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಯುವ ಸಮೂಹ ಜಾಗೃತಿಗೊಳ್ಳಬೇಕೆಂದು ತಹಸೀಲ್ದಾರ್ ಬಿ.ಟಿ. ಕುಮಾರಸ್ವಾಮಿ ಸಲಹೆ ನೀಡಿದರು.
ನಗರದ ಅನಿಕೇತನ ಪದವಿ ಪೂರ್ವ ಕಾಲೇಜಿನ ಸ್ವಾಗತ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ತಮ್ಮ ಬದುಕು ಕಟ್ಟಿಕೊಳ್ಳವತ್ತ ಮುನ್ನುಗ್ಗಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳತ್ತ ಗಮನಹರಿಸಬೇಕು. ಎಡರು ತೊಡರುಗಳ ನಡುವೆಯೂ ಜೀವನದಲ್ಲಿ ಯಶಸ್ಸು ಸಾಧಿಸಬೇಕು ಎಂದರು.
ಕಾಲೇಜಿನ ಅಧ್ಯಕ್ಷ ಡಿ.ಎಚ್. ಕಂಬಳಿ, ಪ್ರಾಚಾರ್ಯ ವೈ.ಎಚ್. ರಕ್ಕಸಗಿ ಮಾತನಾಡಿದರು. ಮುಕ್ಕುಂದಾ ಪ್ರೌಢಶಾಲೆ ಮುಖ್ಯಗುರು ಮಾಲತಿ, ಬಾಲಕರ ಪಪೂ ಕಾಲೇಜು ಪ್ರಾಚಾರ್ಯ ಕೆ.ಎಂ. ಶರಣಯ್ಯ, ಕವಿ ದೇವರಾಜ ಬಪ್ಪೂರ, ದಾವಲಸಾಬ ಮತ್ತಿತರರು ಪಾಲ್ಗೊಂಡಿದ್ದರು.
ಸನ್ಮಾನ: ಇದೇ ವೇಳೆ ಕಲಾ ವಿಭಾಗದ ಪಿಯುಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ತೃತೀಯ ಸ್ಥಾನ ಪಡೆದ ಬಸಮ್ಮ ಸೇರಿದಂತೆ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ 11 ವಿದ್ಯಾರ್ಥಿಗಳು ಹಾಗೂ ಪಾಲಕರನ್ನು ಸನ್ಮಾನಿಸಲಾಯಿತು.
ಮುಂಗಾರು; ಸಮೀಕ್ಷೆಗೆ ಸೂಚನೆ
ರಾಯಚೂರು: 2013-14ನೇ ಸಾಲಿನ ಮುಂಗಾರು ಋತುವಿನಲ್ಲಿ ಬೆಳೆ ಅಂದಾಜು ಸಮೀಕ್ಷೆಯಡಿ ಬೆಳೆ ಕಟಾವು ಪ್ರಯೋಗಗಳಿಗೆ ಆಯ್ಕೆಯಾದ ಗ್ರಾಮಗಳ ಯೋಜನೆ ಪಟ್ಟಿಯನ್ನು ಕಂದಾಯ, ಕೃಷಿ ಇಲಾಖೆಯ ಮೂಲ ಕಾರ್ಯಕರ್ತರಿಗೆ ವಹಿಸಿದ ಬೆಳೆ ಅಂದಾಜು ಸಮೀಕ್ಷೆ ನಡೆಸಲು ಸೂಚಿಸಲಾಗಿದೆ. ಬೆಳೆ ಕಟಾವು ಪ್ರಯೋಗಗಳ ಆಯ್ಕೆಯಾದ ಗ್ರಾಮಗಳ ವಿವರಗಳನ್ನು ಆಯಾ ಕಚೇರಿಗಳ ಸೂಚನಾ ಫಲಕದಲ್ಲಿ ಪ್ರಚುರಪಡಿಸುವುದು. ಬೆಳೆ ಕಟಾವು ಪ್ರಯೋಗ ನಡೆಸಿದ ಬಗ್ಗೆ ನಿಗದಿತ ನಮೂನೆಯಂತೆ ಸಂಬಂಧಪಟ್ಟ ಮೂಲ ಕಾರ್ಯಕರ್ತರಿಂದ ಭರ್ತಿ ಮಾಡಿ ದೃಢೀಕರಿಸಿ ಬೆಳೆವಾರು ತಯಾರಿಸಿ ನೀರಾವರಿ ಹಾಗೂ ಮಳೆಯಾಶ್ರಿತ ಬೆಳೆಗೆ ನಮೂನೆ- 1ರ ಜತೆಗೆ ವಾರದೊಳಗೆ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳು, ರಾಯಚೂರು ಇವರಿಗೆ ಸಲ್ಲಿಸಲು ಸೂಚಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

