ಸಂಕ್ಷಿಪ್ತ ಸುದ್ದಿ
ಅವಧಿಗೆ ಮುನ್ನವೇ ಮದ್ಯದ ದರ ಹೆಚ್ಚಳ
ಸಿಂಧನೂರು: ರಾಜ್ಯ ಸರ್ಕಾರವು ಆಗಸ್ಟ್ 1ರಿಂದ ಮದ್ಯದ ದರವನ್ನು ತೀರ್ಮಾನ ಕೈಗೊಂಡಿದೆ. ಆದರೆ ಸಿಂಧನೂರಿನ ಬಾರ್ ಮತ್ತು ರೆಸ್ಟೋರೆಂಟ್, ವೈನ್ ಶಾಪ್ಗಳಲ್ಲಿ ಮದ್ಯಕ್ಕೆ ಪ್ರತಿ ಕ್ವಾರ್ಟ್ರ್ಗೆ 50 ಹೆಚ್ಚಿಗೆ ಪಡೆಯಲಾಗುತ್ತಿದೆ. ಈಗಾಗಲೇ ಎರಡು ದಿನದಿಂದಲೇ ಹೆಚ್ಚಿನ ದರ ಪಡೆಯುತ್ತಿರುವ ಬಾರ್ ಮಾಲೀಕರು ಗ್ರಾಹಕರಿಗೆ ದಿಕ್ಕು ತಪ್ಪಿಸಲು ದರಪಟ್ಟಿಗಳನ್ನು ಹಾಕಿದ್ದಾರೆ. ಇಷ್ಟು ವರ್ಷಗಳಲ್ಲಿ ಹಾಕಲಾರದ ದರಪಟ್ಟಿಯನ್ನು ಈಗ ಪ್ರತಿ ಅಂಗಡಿಗೆ ಗ್ರಾಹಕರು ಪ್ರಶ್ನೆ ಮಾಡುತ್ತಿದ್ದಾರೆ. ಪಿಟ್ಟರ್ ಸ್ಕ್ಯಾಚ್, ಎಂಸಿ ವಿಸ್ಕಿ, ರಮ್ ಸೇರಿದಂತೆ ವಿವಿಧ ಬ್ರಾಂಡ್ಗಳಿಗೆ 50, ಅಗ್ಗದ ಮದ್ಯಕ್ಕೆ 30 ನಿಗದಿಪಡಿಸಿದ್ದಾರೆ. ಸರ್ಕಾರದ ಆದೇಶಕ್ಕಿಂತ ಒಂದು ವಾರ ಪೂರ್ವದಲ್ಲಿಯೇ ಅನಧಿಕೃತವಾಗಿ ದರಗಳನ್ನು ಹೆಚ್ಚಿಸಿದ್ದರೂ ಅಬಕಾರಿ ಇಲಾಖೆ ಮೌನವಾಗಿರುವುದರ ಬಗ್ಗೆ ಗ್ರಾಹಕರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಅಧಿಕಾರಿಗಳು ಬಾರ್ಗಳ ಮಾಲೀಕರೊಂದಿಗೆ ಶಾಮೀಲಾಗಿದ್ದಾರೆಂದು ಗ್ರಾಹಕರು ಆಪಾದಿಸಿದ್ದಾರೆ. ಆ.1ರತನಕ ಹಿಂದಿನ ದರದಂತೆ ಮದ್ಯ ಸರಬರಾಜು ಮಾಡದಿದ್ದರೆ, ಅಬಕಾರಿ ಸಚಿವರಿಗೆ ಮತ್ತು ಮುಖ್ಯಮಂತ್ರಿಗಳಿಗೆ ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡುವುದಾಗಿ ಗ್ರಾಹಕರು ಎಚ್ಚರಿಸಿದ್ದಾರೆ.
ತರಬೇತಿ: ಅರ್ಜಿ ಕರೆ
ರಾಯಚೂರು: ಲಿಂಗಸ್ಗೂರು ಪುರಸಭೆ ಕಾರ್ಯಾಲಯದಿಂದ ಪ್ರಸಕ್ತ ಸಾಲಿನ ಸ್ವರ್ಣ ಜಯಂತಿ ಶಹರಿ ರೋಜಗಾರ್ ಯೋಜನೆಯಡಿ ಸ್ಟೇಪ್ ಆಪ್ ಕಾರ್ಯಕ್ರಮದಡಿ ಪುರಸಭೆ ವ್ಯಾಪ್ತಿಯಲ್ಲಿ ಬಡತನ ರೇಖೆಗಿಂತ ಕೆಳಗಿರುವ ವಿದ್ಯಾವಂತ ನಿರುದೋಗಿಗಳಿಂದ ತರಬೇತಿಗೆ ಅರ್ಜಿ ಕರೆಯಲಾಗಿದೆ. ಅಭ್ಯರ್ಥಿಗಳಿಂದ ವಿವಿಧ 12ರೀತಿಯ ತರಬೇತಿಗಳಿಗೆ ಅರ್ಜಿ ಕರೆಯಲಾಗಿದೆ. ಸ್ವಯಂ ಉದ್ಯೋಗ ಆಧಾರಿತ ತರಬೇತಿಗಳಾ ಗಿದ್ದು, 18ರಿಂದ 35ವರ್ಷ ವಯೋವುತಿಯವರು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಆ.18 ಕಡೆ ದಿನವಾಗಿದೆ ಎಂದು ಲಿಂಗಸ್ಗೂರು ಪುರಸಭೆ ತಿಳಿಸಲಾಗಿದೆ. ಅದೇ ರೀತಿ ಉಪ ಘಟಕ ಕಾರ್ಯಕ್ರಮದಡಿ ನಿರುದ್ಯೋಗಿ, ಅರೆ ಉದ್ಯೋಗಿ ಅಭ್ಯರ್ಥಿಗಳಿಂದ ಹಣಕಾಸು ಸಾಲ ಸೌಲಭ್ಯಕ್ಕಾಗಿ ಅರ್ಜಿ ಕರೆಯಲಾಗಿದೆ. 22ರಿಂದ 38 ವರ್ಷ ವಯೋವುತಿಯವರು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಆ.5 ಕಡೆ ದಿನವಾಗಿದೆ ಎಂದು ಪ್ರಕಟಣೆ ತಿಳಿಸಿದೆ.ಹೆಚ್ಚಿನ ಮಾಹಿತಿಗಾಗಿ ಲಿಂಗಸ್ಗೂರು ಪುರಸಭೆಯನ್ನು ಸಂಪರ್ಕಿಸಲು ಕೋರಲಾಗಿದೆ.
ಇಂದು ವಿದ್ಯುತ್ ವ್ಯತ್ಯಯ
ರಾಯಚೂರು: ತಾಲೂಕಿನ ಮಟಮಾರಿ, ಮಲೀಯಾಬಾದ್ ಹಾಗೂ ವಡವಟ್ಟಿ ಗ್ರಾಮಗಳ ವಿದ್ಯುತ್ ಕೇಂದ್ರದಲ್ಲಿ ಕಾಮಗಾರಿ ಹಿನ್ನೆಲೆ ಜು.28ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಈ ಬಗ್ಗೆ ಕೆಪಿಟಿಸಿಎಲ್ ಪ್ರಕಟಣೆ ನೀಡಿದ್ದು, ಬೃಹತ್ ಕಾಮಗಾರಿ ನಿಮಿತ್ತ ಜು.28ರ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ತಾಲೂಕಿನ ಗ್ರಾಮೀಣ ಪ್ರದೇಶಗಳಿಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ತಿಳಿಸಿದೆ.
ದಾಖಲಾತಿ ಅವಧಿ ವಿಸ್ತರಣೆ
ರಾಯಚೂರು: ಇಲ್ಲಿಗೆ ಸಮೀಪದ ಯರಮರಸ್ ನಲ್ಲಿರುವ ಡಯಟ್ ನೋಡಲ್ ಕೇಂದ್ರದಲ್ಲಿ ಪ್ರಸಕ್ತ ಸಾಲಿನ ಡಿಇಡಿ ಮತ್ತು ಡಿಪಿಇಡಿ ಕೋರ್ಸುಗಳಿಗೆ ದಾಖಲಾತಿ ಪಡೆಯುವ ದಿನಾಂಕವನ್ನು ಜು.31 ರವರೆಗೆ ವಿಸ್ತರಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

