ರಾಯಚೂರು

'ಕಾಲುವೆ ನೀರು ಅಕ್ರಮ ಬಳಕೆ'

Published On :

ಸಿಂಧನೂರು: ತಾಲೂಕಿನ ಹಸಮಕಲ್ ಸೀಮಾ ವ್ಯಾಪ್ತಿಯಲ್ಲಿ ಹರಿಯುವ ವಿತರಣಾ ಕಾಲುವೆಯ 121ನೇ ಚೈನ್ನಲ್ಲಿ ಬರುವ ಆಕ್ವಡೆಕ್ಟ್ಗೆ ರಂಧ್ರ ಕೊರೆದು ಖಾಸಗಿ ವ್ಯಕ್ತಿಯೊಬ್ಬರು 40 ಎಕರೆ ಜಮೀನಿಗೆ ಅಕ್ರಮವಾಗಿ ನೀರು ಬಳಸಿಕೊಳ್ಳುತಿರುವುದರಿಂದ ತಮಗೆ ನೀರಿನ ಕೊರತೆ ಉಂಟಾಗಿದೆ. ತಕ್ಷಣ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಕಾಲುವೆ ಕೆಳಭಾಗದ ರೈತರಾದ ಶಂಕ್ರಪ್ಪ ದೇಸಾಯಿ, ಲಿಂಗಬಸನಗೌಡ, ನರಸರಡ್ಡಿ, ಲಕ್ಷ್ಮೀವೆಂಕೋಬ, ವೆಂಕೋಬ ಒತ್ತಾಯಿಸಿದ್ದಾರೆ.
ಈ ಕುರಿತು ಜಂಟಿ ಹೇಳಿಕೆ ನೀಡಿರುವ ಅವರು, ಕಳೆದ ಐದಾರು ವರ್ಷಗಳಿಂದ ತಿಮ್ಮನಗೌಡ ಎನ್ನುವವರು ಹಸಮಕಲ್ ಸೀಮಾ ವ್ಯಾಪ್ತಿಯ ಸರ್ವೆ ನಂ.23/ಪಿ/2 ಸೇರಿದಂತೆ ಒಂದೇ ಕಡೆಯಲ್ಲಿರುವ ವಿವಿಧ ಸರ್ವೆ ನಂಬರ್ ಜಮೀನುಗಳಿಗೆ ಅಕ್ರಮವಾಗಿ ನೀರು ಬಳಸಿಕೊಂಡು ಬತ್ತ ಬೆಳೆಯುತ್ತಿದ್ದಾರೆ. ಈ ಕುರಿತು ನ್ಯಾಯಾಲಯದಲ್ಲಿ ದಾವೆಯನ್ನು ಸಹ ಹಾಕಲಾಗಿದೆ.
ರಾಜಕೀಯ ಪ್ರಭಾವ: ಅಲ್ಲದೆ, ಹಲವಾರು ಬಾರಿ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಅವರಿಗೆ ಮನವಿ ನೀಡಿ ಕಾಲುವೆಗೆ ರಂಧ್ರ ಹಾಕಿ ನೀರನ್ನು ಕಳ್ಳತನ ಮಾಡುತ್ತಿರುವ ವ್ಯಕ್ತಿಯ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಒತ್ತಾಯ ಮಾಡುತ್ತಾ ಬಂದಿದ್ದಾರೂ ರಾಜಕೀಯ ಪ್ರಭಾವಕ್ಕೆ ಮಣಿದ ಅಧಿಕಾರಿಗಳು ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಳ್ಳದೆ ಕೆಳ ಭಾಗದ ರೈತರಿಗೆ ಅನ್ಯಾಯ ಮಾಡಿದ್ದಾರೆ ಎಂದು ರೈತರು ಆಪಾದಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.