ರಾಯಚೂರು

ನಾಡಿಯ ಉಚಿತ ಪರೀಕ್ಷೆ ಶಿಬಿರ

Published On :

ರಾಯಚೂರು: ನಗರದ ಕೋಟೆಯ ಶ್ರೀಮುಂಗ್ಲಿ ಆಂಜನೇಯ ದೇವಸ್ಥಾನದಲ್ಲಿ ಬುಧವಾರ ಜೀವನ ಕಲೆ ಸಂಸ್ಥೆಯ ಆಶ್ರಯದಲ್ಲಿ ನಾಡಿಯ ಉಚಿತ ಪರೀಕ್ಷೆ ಶಿಬಿರ ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಸದರ್ ಬಜಾರ್ ಪೊಲೀಸ್ ಠಾಣೆಯ ಪಿಎಸ್ಸೈ ದಯಾನಂದ ಉದ್ಘಾಟಿಸಿ, ಇಂಥ ಶಿಬಿರಗಳ ಆಯೋಜನೆ ಮೂಲಕ ಜನಾರೋಗ್ಯದ ಕಾಳಜಿ ವಹಿಸಿದ ನಗರಸಭೆ ಸದಸ್ಯ ನರಸಪ್ಪ ಅವರ ಕಾರ್ಯವೈಖರಿ ಪ್ರಶಂಸಿಸಿದರು. ಅಧ್ಯಕ್ಷತೆ ವಹಿಸಿ ನಗರಸಭೆ ಸದಸ್ಯ ನರಸಪ್ಪ ಎಕ್ಲಾಸಪುರ ಮಾತನಾಡಿದರು. ಜೀವನ ಕಲೆ ಸಂಸ್ಥೆಯ ಶಿಕ್ಷಕ ಮಲ್ಲಿಕಾರ್ಜುನ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ವೈದ್ಯ ಸಚಿನ್, ನರಸಿಂಗರಾವ್ ಮತ್ತಿತರರಿದ್ದರು. ವಾರ್ಡ್ 9ರ ಜನತೆ ಶಿಬಿರದ ಪ್ರಯೋಜನ ಪಡೆದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.