ರಾಯಚೂರು

ಬೀದಿ ನಾಯಿಗಳ ಹಾವಳಿ: ಆಕ್ರೋಶ

Published On :

ಸಿಂಧನೂರು: ಕಳೆದ ಒಂದು ತಿಂಗಳಿನಿಂದ ನಗರದಲ್ಲಿ ಬಿಡಾಡಿ ನಾಯಿಗಳ ಹಾವಳಿ ಮಿತಿಮೀರಿದ್ದು, ನಗರಸಭೆ ಪೌರಾಯುಕ್ತರ ಬೇಜವಾಬ್ದಾರಿತನಕ್ಕೆ ನಾಗರಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಟೇಲವಾಡಿ, ಮಹೆಬೂಬ ಕಾಲೋನಿ, ಶರಣಬಸವೇಶ್ವರ ಕಾಲೋನಿ, ಪ್ರಶಾಂತನಗರ, ಕಾಟಿಬೇಸ್ ಮತ್ತಿತರ ಬಡಾವಣೆಗಳಲ್ಲಿ ಎಗ್ಗಿಲ್ಲದೆ ಓಣಿಗಳಲ್ಲಿ ಓಡಾಡುತ್ತಿರುವ ಬೀದಿ ನಾಯಿಗಳು ಸಾರ್ವಜನಿಕರಲ್ಲಿ ಭೀತಿಯುಂಟು ಮಾಡಿವೆ. ಪಟೇಲವಾಡಿಯಲ್ಲಿ 5ಜನರಿಗೆ ಕಚ್ಚಿದರೆ, ಮಹೆಬೂಬ ಕಾಲೋನಿಯಲ್ಲಿ ಹತ್ತು ಜನರಿಗೆ ಕಚ್ಚಿರುವ ಪ್ರಕರಣಗಳು ಬೆಳಕಿಗೆ ಬಂದಿವೆ.
ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರತಿನಿತ್ಯ ಆರೇಳು ಜನರು ನಾಯಿ ಕಚ್ಚಿದ ಗಾಯಕ್ಕೆ ಚಿಕಿತ್ಸೆ ಪಡೆದಿರುವ ದಾಖಲೆಗಳಿವೆ. ಯಾವುದು ಹುಚ್ಚು ನಾಯಿ, ಯಾವುದು ಆರೋಗ್ಯವಂತ ನಾಯಿ ಎನ್ನುವುದು ಗೊತ್ತಾಗದೆ ನಾಗರಿಕರು ತೀವ್ರ ಆತಂಕ ಎದುರಿಸುತ್ತಿದ್ದಾರೆ. ಶಾಲಾ ಮಕ್ಕಳನ್ನು ಶಾಲೆಗೆ ಕಳುಹಿಸಲು ಪಾಲಕರು ಹೆದರುವಂತಾಗಿದೆ. ಶಾಲೆಗೆ ಹೋಗಿದ್ದ ಮಕ್ಕಳು ಸುರಕ್ಷಿತವಾಗಿ ಮನೆಗೆ ಬರುತ್ತಾರೋ ಇಲ್ಲವೋ ಎನ್ನುವ ಆತಂಕದಲ್ಲಿ ಪಾಲಕ ಸಮುದಾಯ ಚಿಂತೆಗೀಡಾಗಿದೆ.
ಕ್ರಮ ಶೂನ್ಯ: ಹಳೇ ಬಜಾರನ ಮಹ್ಮದ್ ಹಣಗಿಕಟ್ಟಿ ಸೇರಿದಂತೆ ಹಲವಾರು ನಾಗರಿಕರು ನಗರಸಭೆ ಪೌರಾಯುಕ್ತರಿಗೆ ದೂರು ಸಲ್ಲಿಸಿ ಬೀದಿ ನಾಯಿಗಳಿಂದ ತೊಂದರೆಯಲ್ಲಿರುವ ನಾಗರಿಕರನ್ನು ರಕ್ಷಿಸುವಂತೆ ಮನವಿ ಮಾಡಿಕೊಂಡಿದ್ದರೂ ಪೌರಾಯುಕ್ತರು ಯಾವುದೇ ಕ್ರಮಕೈಗೊಳ್ಳದಿರುವ ಬಗ್ಗೆ ಅಲ್ಲಿನ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.