ರಾಯಚೂರು

ಶೌಚಾಲಯ ಸಮಸ್ಯೆ; ಪ್ರತಿಭಟನೆ

Published On :

ಮಸ್ಕಿ: ಪಟ್ಟಣದ ಕುರುಬರ ಬಡಾವಣೆಯ 12ನೇ ವಾರ್ಡಿನಲ್ಲಿರುವ ಮಹಿಳಾ ಶೌಚಾಲಯದ ಪಕ್ಕದಲ್ಲಿ ಖಾಸಗಿ ವ್ಯಕ್ತಿಯೊಬ್ಬರು ಕಟ್ಟಡ ನಿರ್ಮಾಣ ಮಾಡುತ್ತಿರುವುದನ್ನು ನಿಲ್ಲಿಸುವಂತೆ ಮಹಿಳೆಯರು ಗ್ರಾಪಂ ಕಾರ್ಯಾಲಯದ ಮುಂದೆ ಪ್ರತಿಭಟನೆ ಬುಧವಾರ ನಡೆಸಿದರು.
ಸುದ್ದಿ ತಿಳಿದು ಗ್ರಾಪಂ ಅಧ್ಯಕ್ಷ ಎಂ.ಅಮರೇಶ ಸ್ಥಳಕ್ಕೆ ಧಾವಿಸುತ್ತಿದ್ದಂತೆಯೇ ಮಹಿಳೆಯರು ಸುತ್ತುವರಿದು ಮನೆ ನಿರ್ಮಾಣಕ್ಕೆ ಅವಕಾಶ ನೀಡದಂತೆ ಆಗ್ರಹಿಸಿದರು. ಶೌಚಾಲಯದ ಸುತ್ತ ತಿಪ್ಪೆ ಹಾಗೂ ಮುಳ್ಳಿನ ಗಿಡಕಂಟೆಗಳು ಬೆಳೆದಿದ್ದು, ಶೌಚಾಲಯಕ್ಕೆ ತೆರಳುವ ಮಹಿಳೆಯರು ವಿಷ ಜಂತುಗಳ ಭಯದಲ್ಲಿಯೇ ತೆರಳುವಂತಾಗಿದೆ ಎಂದು ಆರೋಪಿಸಿ, ಕೂಡಲೇ ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ಶೌಚಾಲಯ ಸ್ವಚ್ಛತೆ ನಿರ್ಲಕ್ಷ್ಯ(ದೇವದುರ್ಗ ವರದಿ) ಸ್ಥಳೀಯ ಪುರಸಭೆಯು ಪಟ್ಟಣದ ಸ್ವಚ್ಛತೆಯ ಬಗ್ಗೆ ನಿರ್ಲಕ್ಷ್ಯ ತಾಳಿದೆ. ಅದರಿಂದ ಮಹಿಳೆಯರ ಶೌಚಾಲಯಗಳು ಸ್ವಚ್ಛತೆಯಿಲ್ಲದೇ ತೊಂದರೆ ಅನುಭವಿಸುತ್ತಿದ್ದಾರೆ ಎಂದು ವಾರ್ಡ್ 9ರ ಪುರಸಭೆ ಸದಸ್ಯ ಚಂದ್ರಶೇಖರ ಚಲುವಾದಿ ಆರೋಪಿಸಿದ್ದಾರೆ.
ಈ ಕುರಿತು ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿರುವ ಅವರು, ಪುರಸಭೆ ವ್ಯಾಪ್ತಿಯ ಗೌತಮ ಓಣಿ, ಅಶೋಕ ಓಣಿ ಹಾಗೂ ಸಿದ್ದರಾಮೇಶ್ವರ ವಾರ್ಡುಗಳಲ್ಲಿ ಮಹಿಳೆಯರ ಶೌಚಾಲಯಗಳಿದ್ದು, ನಿರ್ವಹಣೆ ಮತ್ತು ಸ್ವಚ್ಛತೆಯಿಲ್ಲದ್ದರಿಂದ ಮಹಿಳೆಯರು ತೊಂದರೆಗೆ ಸಿಲುಕಿದ್ದಾರೆಂದು ದೂರಿದ್ದಾರೆ.
ಶೌಚಾಲಯ ಸ್ವಚ್ಛಗೊಳಿಸುವ ವಾಹನವು ಕಳೆದ ಎರಡು ಮೂರು ತಿಂಗಳಿನಿಂದ ದುರಸ್ತಿಗೀಡಾಗಿದ್ದು ಅದರಿಂದ ಸ್ವಚ್ಛತೆ ಕಾರ್ಯ ಸ್ಥಗಿತಗೊಂಡಿದೆ. ವಾಹನದ ದುರಸ್ತಿಗೆ ಅಧಿಕಾರಿಗಳು ಮುಂದಾಗಿಲ್ಲ. ಕೂಡಲೇ ಕ್ರಮ ತೆಗೆದುಕೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.