ರಾಯಚೂರು

ಮಳಿಗೆ: ಟೆಂಡರ್ ಕರೆಯಲು ಆಗ್ರಹ

Published On :

ಕನ್ನಡಪ್ರಭ ವಾರ್ತೆ   ಮಸ್ಕಿ   ಜೂ.27
ಮಸ್ಕಿ ಗ್ರಾಮ ಪಂಚಾಯಿತಿ ಮಳಿಗೆಗಳನ್ನು ಕಡಿಮೆ ಬಾಡಿಗೆಯಲ್ಲಿ ನೀಡುತ್ತಿದ್ದು ಹೆಚ್ಚಿನ ದರಕ್ಕೆ ಬಾಡಿಗೆ ನೀಡಲು ವರ್ತಕರು ಸಿದ್ಧರಿದ್ದರೂ ಟೆಂಡರ್ ಕರೆಯದೇ ಕಡಿಮೆ ದರದಲ್ಲಿ ನೀಡುತ್ತಿರುವ ಗ್ರಾಪಂ ಆಡಳಿತದ ಕ್ರಮವನ್ನು ಗ್ರಾಪಂ ಸದಸ್ಯ ಮಲ್ಲಿಕಾರ್ಜುನ ಕಾಸ್ಲೆ ವಿರೋಧಿಸಿದರು.
ಪಟ್ಟಣದ ಕೇಂದ್ರ ಶಾಲೆಯ ಶತಮಾನೋತ್ಸವ ಭವನದಲ್ಲಿ ಗುರುವಾರ ನಡೆದ ಗ್ರಾಪಂ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಕೂಡಲೇ ಟೆಂಡರ್ ಮೂಲಕ ಮಳಿಗೆಗಳನ್ನು ಹೆಚ್ಚಿನ ಬಾಡಿಗೆಗೆ ನೀಡುವ ಮೂಲಕ ಆದಾಯ ಹೆಚ್ಚಿಸಲು ಒತ್ತಾಯಿಸಿದರು.
ಅಂಗನನಾಡಿ ಕಟ್ಟಡಕ್ಕೆ ಅನುಮೋದನೆ ನೀಡಿ: 1ನೇ ವಾರ್ಡಿನಲ್ಲಿ ಬಿಆರ್ಜಿಎಫ್ ಯೋಜನೆ ಅಡಿ ಅಂಗನವಾಡಿ ಕಟ್ಟಡವನ್ನು ನಿರ್ಮಿಸುವಂತೆ ಗ್ರಾಪಂ ಸದಸ್ಯ ವೀರೇಶ ಹೂವಿನಭಾವಿ ಸಭೆಯಲ್ಲಿ ಒತ್ತಾಯಿಸಿದರು. 13ನೇ ಹಣಕಾಸು ಯೋಜನೆ ಅಡಿ 7, 11, 14ನೇ ವಾರ್ಡಗಳಲ್ಲಿ ಅಂಗನವಾಡಿ ಕಟ್ಟಡಗಳಿಗೆ ಅನುಮೋದನೆ ನೀಡುವಂತೆ ಗ್ರಾಪಂ ಸದಸ್ಯ ಮಲ್ಲಯ್ಯ ಕುರುಬರ, ರವಿ ಮಡಿವಾಳರ ಒತ್ತಾಯಿಸಿದರು.
12ನೇ ಹಣಕಾಸು ಯೋಜನೆ ಅಡಿ ಕಾಲೇಜು ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳ ಖರೀದಿಗಾಗಿ ಪಿಯಸಿ ವಿದ್ಯಾರ್ಥಿಗಳಿಗೆ 1 ಸಾವಿರ ಹಾಗೂ ಪದವಿ ವಿದ್ಯಾರ್ಥಿಗಳಿಗೆ ಒಂದೂವರೆ ಸಾವಿರ ನೀಡಲಾಗುವುದೆಂದು ಗ್ರಾಪಂ ಅಭಿವೃದ್ಧಿ ಅಧಿಕಾರಿ ಹನುಮೇಶ ಕುಲಕರ್ಣಿ ಸಭೆಗೆ ತಿಳಿಸಿದರು.
ಸ್ಥಾಯಿ ಸಮಿತಿಗಳನ್ನು ರಚಿಸುವಂತೆ ಗ್ರಾಪಂ ಸದಸ್ಯರಾದ ವೀರೇಶ ಹೂವಿನಭಾವಿ, ಅಶೋಕ ನಾಯಕ, ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ಅಧ್ಯಕ್ಷ ಎಂ.ಅಮರೇಶ ಸಮಿತಿಗಳನ್ನು ಶೀಘ್ರವಾಗಿ ನೇಮಿಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಗಾಪಂ ಉಪಾಧ್ಯಕ್ಷೆ ನಾಗಮ್ಮ ಚಿಗರಿ, ಗ್ರಾಪಂ ಸದಸ್ಯರಾದ ಮಲ್ಲಯ್ಯ ಮುರಾರಿ, ಮುದಿಯಪ್ಪ ಕುರುಬರ, ಮಲ್ಲಣ್ಣ, ಸಂಗಪ್ಪ ಕುಂಬಾರ, ಮಲ್ಲಯ್ಯ ಮಾಳಿಗಿ, ಶಬ್ಬೀರ್ ಸಾಬ್, ರಿಯಾಜ್ ಸಾಬ್, ಸುನೀತಮ್ಮ, ಲಲಿತಾ ಬಳ್ಳಾ, ಮರಿಯಮ್ಮ ಮುರಾರಿ ಸೇರಿ ಅನೇಕರಿದ್ದರು.
 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.