ರಾಯಚೂರು

ದುದ್ದುಪೂಡಿ: ಉತ್ತಮ ಫಲಿತಾಂಶ

Published On :

ಸಿಂಧನೂರು: ಬಿಜಾಪುರ ಮಹಿಳಾ ವಿಶ್ವವಿದ್ಯಾಲಯದ ಬಿ.ಎಸ್ಸಿ ಮತ್ತು ಬಿ.ಕಾಂ 6ನೇ ಸೆಮಿಸ್ಟರ್ ಫಲಿತಾಂಶ ಪ್ರಕಟಗೊಂಡಿದ್ದು, ನಗರದ ದುದ್ದುಪೂಡಿ ಮಹಿಳಾ ಕಾಲೇಜಿಗೆ ಉತ್ತಮ ಫಲಿತಾಂಶ ಲಭಿಸಿದೆ ಎಂದು ಕಾಲೇಜಿನ ಕಾರ್ಯದರ್ಶಿ ಆರ್.ಸಿ.ಪಾಟೀಲ ತಿಳಿಸಿದ್ದಾರೆ. ಬಿ.ಎಸ್ಸಿ. ಅಂತಿಮ ವರ್ಷದ 25 ವಿದ್ಯಾರ್ಥಿನಿಯರಲ್ಲಿ 19 ವಿದ್ಯಾರ್ಥಿನಿಯರು ಉನ್ನತ ಶ್ರೇಣಿ, 6 ಜನ ಪ್ರಥಮ ಶ್ರೇಣಿ, ಬಿ.ಕಾಂ. ಅಂತಿಮ ವರ್ಷದ 32 ವಿದ್ಯಾರ್ಥಿನಿಯರಲ್ಲಿ 11 ಜನ ಡಿಸ್ಟಿಂಕ್ಷನ್, 19 ಜನ ಪ್ರಥಮ ಶ್ರೇಣಿಯಲ್ಲಿ ಪಾಸಾಗಿದ್ದಾರೆ. ಬಿ.ಎಸ್ಸಿ. ವಿಭಾಗದಲ್ಲಿ ಮಮತ ಕೆ ಶೇ.92, ಮೋನಿಕಾ ಸಿಂಹಾದ್ರಿ ಶೇ.91, ರಶ್ಮಿತಾ ವೈ ಶೇ.90.40, ಹರಿತ ಜಿ ಶೇ.90 ಅಂಕ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಹರಿತಾ ಜಿ. ಗಣಿತ ವಿಷಯದಲ್ಲಿ 300/300, 4 ವಿದ್ಯಾರ್ಥಿನಿಯರು ಗಣಿತದಲ್ಲಿ 299/300 ಅಂಕಗಳನ್ನು ಪಡೆದು ಕಾಲೇಜಿಗೆ ಉತ್ತಮ ಸಾಧನೆ ಮಾಡಿದ್ದಾಳೆ. ಆಡಳಿತ ಮಂಡಳಿಯವರು ಅವರನ್ನು ಅಭಿನಂದಿಸಿದ್ದಾರೆ.
ವಿವೇಕಾನಂದ ರಥಯಾತ್ರೆ ಸಭೆ
ಸಿಂಧನೂರು: ರಾಮಕೃಷ್ಣ ಮಠ ಮತ್ತು ರಾಮಕೃಷ್ಣ ಮಿಷನ್ ಕರ್ನಾಟಕ ಶಾಖೆಗಳು ಹಾಗೂ ರಾಮಕೃಷ್ಣ ಭಾವಪ್ರಚಾರ ಪರಿಷತ್ ಇವರುಗಳ ಸಂಯುಕ್ತಾಶ್ರಯದಲ್ಲಿ ಜುಲೈ 16ರಂದು ನಗರದ ಪ್ರಮುಖ ಬೀದಿಗಳಲ್ಲಿ ವಿವೇಕಾನಂದರ ರಥಯಾತ್ರೆ ಹಾಗೂ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ.
ಜೂ.30 ಬೆಳಿಗ್ಗೆ 10ಕ್ಕೆ ನಗರದ ವಾಸವಿ ಕಲ್ಯಾಣಮಂಟಪದಲ್ಲಿ ಸ್ವಾಮಿ ವಿವೇಕಾನಂದರ 150ನೇ ಜನ್ಮದಿನೋತ್ಸವದ ಅಂಗವಾಗಿ ವಿವೇಕಾನಂದರ ರಥಯಾತ್ರೆಯ ಅಂಗವಾಗಿ ಸ್ವಾಗತ ಸಮಿತಿ ಹಾಗೂ ವಿವಿಧ ಸಮಿತಿಗಳನ್ನು ರಚಿಸಲಾಗುವುದು.  ಅಭಿಮಾನಿಗಳು ಹಾಗೂ ಎಲ್ಲ ಸಮಾಜದ, ಮುಖಂಡರು ಭಾಗವಹಿಸಬೇಕೆಂದು    ಇರೇಶ ಇಲ್ಲೂರು ಮತ್ತಿತರರು ತಿಳಿಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.