ಮಹಿಳಾ ಶೌಚಾಲಯ ಕಾಮಗಾರಿ ವಿಳಂಬ
ಮುದಗಲ್: ಪಟ್ಟಣದಲ್ಲಿ ಸರ್ಕಾರದ ಅನುದಾನದಲ್ಲಿ ನಿರ್ಮಿಸಲಾಗುತ್ತಿರುವ ಸಾರ್ವಜನಿಕ ಮಹಿಳಾ ಶೌಚಾಲಯ ಕಾಮಗಾರಿಗಳು ಅಪೂರ್ಣಗೊಂಡಿವೆ. ಗುತ್ತಿಗೆದಾರರು ನಿಗದಿತ ಸಮಯದಲ್ಲಿ ಪೂರ್ಣಗೊಳಿಸದೇ ಇದ್ದುದರಿಂದ ನೋಟಿಸ್ ನೀಡುವಂತೆ ಮುಖ್ಯಾಧಿಕಾರಿಗೆ ತಹಸೀಲ್ದಾರ್ ಎನ್.ಬಿ. ಪಾಟೀಲ್ ಸೂಚಿಸಿದರು.
ಪಟ್ಟಣದಲ್ಲೇ ಬೀಡು ಬಿಟ್ಟಿದ್ದ ಅವರು ಬೆಳಗ್ಗೆ 6 ಗಂಟೆಯಿಂದಲೇ ವಾರ್ಡ್ ನಂ.6 ಮತ್ತು 1ರಲ್ಲಿ ಮಹಿಳಾ ಶೌಚಾಲಯಗಳು ಅಪೂರ್ಣಗೊಂಡಿರುವುದನ್ನು ಗಮನಿಸಿದರು. ಮಹಿಳೆಯರಿಗೆ ಅನುಕೂಲವಾಗಬೇಕು ಎಂದು ನಿರ್ಮಿಸಲಾಗುತ್ತಿದೆ. ವಾರ್ಡ್ ನಂ. 6ರಲ್ಲಿ ರು. 10 ಲಕ್ಷ, ವಾರ್ಡ್ ನಂ.1ರಲ್ಲಿ ರು. 15 ಲಕ್ಷ ವೆಚ್ಚದಲ್ಲಿ ಶೌಚಾಲಯಗಳನ್ನು ನಿರ್ಮಿಸಲು ಗುತ್ತಿಗೆ ನೀಡಿದ್ದರೂ, ಗುತ್ತಿಗೆದಾರರು ಕಾಮಗಾರಿ ವಿಳಂಬ ಮಾಡುತ್ತಿರುವುದು ಯಾಕೆ ಎಂದು ಪ್ರಶ್ನಿಸಿದರು.
ಸೊಳ್ಳೆ ಕಾಟ: ಬಸ್ ನಿಲ್ದಾಣ, ತರಕಾರಿ ಮಾರುಕಟ್ಟೆ, ಹಳೇಪೇಟೆ, ವೆಂಕಟರಾಯನ ಪೇಟೆ, ಹಳೇಪೇಟೆಯ ವಿವಿಧ ವಾರ್ಡ್ಗಳಿಗೆ ಭೇಟಿ ನೀಡಿ ಚರಂಡಿ ಮತ್ತು ಸ್ವಚ್ಛತೆ ಬಗ್ಗೆ ಪರಿಶೀಲಿಸಿದರು. ನಂತರ ವಾರ್ಡ್ ನಂ. 1ರಲ್ಲಿ ಮುಖ್ಯ ರಸ್ತೆಯಲ್ಲಿರುವ ಚರಂಡಿ ನೀರು ನಿಂತಲ್ಲೆ ನಿಂತು ವಿಪರೀತ ಸೊಳ್ಳೆಗಳು ಹುಟ್ಟಿಕೊಂಡು ಮಲೇರಿಯಾ ರೋಗ ಹರಡಲು ಕಾರಣವಾಗಿದೆ. ಅವೈಜ್ಞಾನಿಕವಾಗಿ ಚರಂಡಿ ನಿರ್ಮಿಸಿದ್ದರಿಂದ ನೀರು ಹರಿಯುತ್ತಿಲ್ಲ ಎಂದು ನಾಗರಿಕರು ತಹಸೀಲ್ದಾರ ಗಮನ ಸೆಳೆದರು. ಸ್ಥಳದಲ್ಲಿದ್ದ ನೈರ್ಮಲ್ಯಾಧಿಕಾರಿಗೆ, ಮುಖ್ಯಾಧಿಕಾರಿಗಳಿಗೆ ಸೂಚನೆ ನೀಡಿ ನೀರು ಹರಿದು ಹೋಗುವಂತೆ ಮಾಡಿಸಲು ಸೂಚಿಸಿದರು.
ತಹಸೀಲ್ದಾರ ಪಟ್ಟಣ ಪರ್ಯಟನೆಯಿಂದ ಪಟ್ಟಣ ಪಂಚಾಯಿತಿ ಸಿಬ್ಬಂದಿ, ದಿನಗೂಲಿ ಕಾರ್ಮಿಕರು, ಪೌರ ಕಾರ್ಮಿಕರಲ್ಲಿ ಸಂಚಲನ ಉಂಟಾಗಿ ಸ್ವಚ್ಛತೆಯಲ್ಲಿ ನಿರತರಾಗಿರುವುದು ಕಂಡು ಬಂತು. ಮುಖ್ಯಾಧಿಕಾರಿ ಎಂ.ವಿಜಯಲಕ್ಷ್ಮೀ, ನೈರ್ಮಲ್ಯಾಧಿಕಾರಿ ಜಿಲಾನಿ ಪಾಷಾ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

