ಈಶ್ವರಪ್ಪ ಸ್ವಯಂ ಘೋಷಿತ ನಾಯಕ
ಕನ್ನಡಪ್ರಭ ವಾರ್ತೆ ಸಿಂಧನೂರು ಮಾ.21
ಬಿಜೆಪಿ ಮುಖಂಡ ಕೆ.ಎಸ್. ಈಶ್ವರಪ್ಪ ಸ್ವಯಂ ಘೋಷಿತ ನಾಯಕರು ಎಂದು ಕರ್ನಾಟಕ ಜನತಾ ಪಕ್ಷದ ಮುಖಂಡ ಹಾಗೂ ಮಾಜಿ ಸಚಿವ ಸಿ.ಎಂ. ಉದಾಸಿ ಲೇವಡಿ ಮಾಡಿದರು.
ಸ್ಥಳೀಯ ಖಾಸಗಿ ಹೊಟೇಲ್‌ನಲ್ಲಿ ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈಶ್ವರಪ್ಪ ತ್ರಿಶಂಕು ಸ್ಥಿತಿಯಲ್ಲಿದ್ದಾರೆ. ಅವರ ರಾಜಿನಾಮೆ ಅಂಗೀಕಾರವಾಗಿಲ್ಲ. ಪುನಃ ಅಧ್ಯಕ್ಷರಾಗಿಯೂ ಮುಂದುವರಿದಿಲ್ಲ. ಇಂತಹ ಸಂದಿಗ್ಧ ಸ್ಥಿತಿಯಲ್ಲಿರುವ ಅವರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಅವರೀಗ ಸ್ವಯಂ ಘೋಷಿತ ನಾಯಕರು ಎಂದು 'ಬಿಜೆಪಿಯಿಂದ ಕೆಜೆಪಿಗೆ ಹೋಗುವರು ಕಸ ಇದ್ದಂತೆ' ಎಂಬ ಈಶ್ವರಪ್ಪ ಟೀಕೆಗೆ ಪ್ರತಿಕ್ರಿಯಿಸಿದರು.
ಆರೋಪ ಸಾಬೀತಾಗುವವರೆಗೆ ಅಪರಾಧಿಯಾಗಲ್ಲ: ರಾಜಕಾರಣದಲ್ಲಿ ಬದ್ಧತೆಯಿಂದ ಕೆಲಸ ಮಾಡಿದವರನ್ನು ಜನ ಗೌರವಿಸುತ್ತಾರೆ. ಪಕ್ಷಕ್ಕಿಂತ ವ್ಯಕ್ತಿ ಮುಖ್ಯ. ಅದರಲ್ಲೂ ನಾಯಕತ್ವ ಹೊಂದಿದವರು ಪ್ರಬಲರಾಗಿರುತ್ತಾರೆ. ಅಂತಹ ಎಲ್ಲ ಗುಣ ಬಿಎಸ್‌ವೈ ಅವರಲ್ಲಿವೆ. ರಾಜ್ಯದಲ್ಲಿ ಕೆಜೆಪಿಯ ಮುಖಂಡರು ನಾಲ್ಕು ತಂಡಗಳಲ್ಲಿ ರಾಜ್ಯಾದ್ಯಂತ ಪ್ರವಾಸ ಆರಂಭಿಸಿದ್ದಾರೆ. ಶೋಭಾ, ಬಿ.ಆರ್. ಪಾಟೀಲ್ ಒಂದು ತಂಡ, ಯಡಿಯೂರಪ್ಪ, ಮುಕಡಪ್ಪ ಮತ್ತೊಂದು ತಂಡ, ಧನಂಜಯಕುಮಾರ, ಶಂಕರಗೌಡ ಮತ್ತು ತಾವು ಲಕ್ಷ್ಮೀನಾರಾಯಣ ಪ್ರವಾಸದಲ್ಲಿದ್ದೇವೆ. ಮತದಾರರು ಬುದ್ಧಿವಂತರಿದ್ದಾರೆ. ಆರೋಪಗಳು ಸಾಬೀತಾಗುವವರೆಗೂ ಯಾರೂ ಅಪರಾಧಿಗಳಲ್ಲ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ಮಸ್ಕಿ ಶಾಸಕ ಪ್ರತಾಪಗೌಡ ಪಾಟೀಲರು ತಾವು ಲೋಕೋಪಯೋಗಿ ಸಚಿವರಾಗಿದ್ದಾಗ ಸುಳ್ಳು ಭರವಸೆಗಳನ್ನು ನೀಡಿ ರಸ್ತೆ ದುರಸ್ತಿಯಾಗದಂತೆ ಮಾಡಿದ್ದರಿಂದ ಬೇಸತ್ತು ಬಿಜೆಪಿಗೆ ಗುಡ್‌ಬೈ ಹೇಳಿದ್ದಾರೆಂದು ಸುದ್ದಿಗಾರರು ಕೇಳಿದಾಗ ದೇವರು ಅವರಿಗೆ ಒಳ್ಳೆಯದನ್ನು ಮಾಡಲಿ ಎಂದಷ್ಟೇ ಚುಟುಕಾಗಿ ಉತ್ತರಿಸಿ ಜಾರಿಕೊಂಡರು. ಮಾಜಿ ಎಂಎಲ್ಸಿ ಎಂ.ಡಿ.ಲಕ್ಷ್ಮೀನಾರಾಯಣ, ಕೆಜೆಪಿ ಜಿಲ್ಲಾ ಸಂಚಾಲಕ ವೆಂಕನಗೌಡ ಮಲ್ಕಾಪುರ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

