ರಾಯಚೂರು

ಸಂಕ್ಷಿಪ್ತ ಸುದ್ದಿ

Published On :

ನಾಳೆ ವಿಶೇಷ ಉಪನ್ಯಾಸ
ರಾಯಚೂರು:
ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನಿಂದ ಮಾ.25ರಂದು ವಿಶೇಷ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕುರಿತು ಪ್ರಕಟಣೆ ನೀಡಿರುವ ಪರಿಷತ್ತು, ಅಂದು ಮಧ್ಯಾಹ್ನ 2.30ಕ್ಕೆ ತಾಲೂಕಿನ ಯರಗೇರಾ ಗ್ರಾಮದ ಸ್ನಾತಕೋತ್ತರ ಕೇಂದ್ರದಲ್ಲಿ ದೋಮಕುಂಟಿ ಹಂಪಮ್ಮ ನಾರಾಯಣಪ್ಪ ಹಾಗೂ ಕೊಂಡಾ ಹನುಮಂತಯ್ಯ ಸರಸ್ವತಮ್ಮ ಫೌಂಡೇಷನ್ ಸ್ಮಾರಕ ದತ್ತಿ ವಿಶೇಷ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಿಜಿ ಸೆಂಟರ್ ವಿಶೇಷಾಧಿಕಾರಿ ಪ್ರೊ. ಭಾಸ್ಕರ್ ವಹಿಸುವರು. ಆ ಭಾಷೆ ಈ ಭಾಷೆಯಂತಲ್ಲ ಈ ಇ-ಭಾಷೆ ಎಂಬ ವಿಶೇಷ ಉಪನ್ಯಾಸವನ್ನು ಲೇಖಕ ಡಾ. ನವೀನ್ ಹಳೆಮನೆ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಚನೂರು ಕೊಂಡಾ ಕೃಷ್ಣಮೂರ್ತಿ, ದೋಮಕುಂಟಿ ಲಕ್ಷ್ಮಿನಾರಾಯಣ, ಜಿಲ್ಲಾ ಗ್ರಂಥಾಲಯಾಧಿಕಾರಿ ಎಂ.ಎಸ್. ರೆಬಿನಾಳ, ಪಿಜಿ ಸೆಂಟರ್‌ನ ಐಟಿ ವಿಭಾಗದ ಮುಖ್ಯಸ್ಥರಾದ ಸಿ.ಎಸ್. ಪಾರ್ವತಿ, ಡಾ. ಮಲ್ಲೇಶ ಚಲವಾದಿ ಮತ್ತಿತರರು ಪಾಲ್ಗೊಳ್ಳಲಿದ್ದಾರೆಂದು ಪ್ರಕಟಣೆ ತಿಳಿಸಿದೆ.

ಪದಾಧಿಕಾರಿಗಳು
ಮುದಗಲ್:
ಪಟ್ಟಣದ ಸಿದ್ಧಾರೂಢ ಮಠ ನಗರ ಘಟಕದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಸಂಚಾಲಕರಾದ ಪ್ರಭುಲಿಂಗ ಮೇಗಳಮನಿ ನೇಮಕಾತಿ ಆದೇಶ ಹೊರಡಿಸಿದ್ದಾರೆ. ಸಂಚಾಲಕ- ರಂಗನಾಥ ಆರ್. ಬಂಕದಮನಿ, ಸಂಘಟನಾ ಸಂಚಾಲಕರಾಗಿ- ವೆಂಕೋಬ ಮೆಗಾಟಿ, ರವಿಚಂದ್ರ ಜಿ. ಬಸವರಾಜ ಟಿ., ಖಜಾಂಚಿ- ಗಣೇಶ ಗುಡಿಸಿಲು ಮನೆ, ಸಲಹಾ ಸಮಿತಿ ಸದಸ್ಯರಾಗಿ ಗೋಪಾಲ ಬಿ., ಶಿವರಾಜ ಜಿ. ಅವರನ್ನು ನೇಮಿಸಿ ಆದೇಶ ಹೊರಡಿಸಿದ್ದಾರೆ.

ಕೊರ್ತಕುಂದಾ; ಆಕಸ್ಮಿಕ ಬೆಂಕಿ ತಗುಲಿ ಒಬ್ಬ ಸಾವು
ರಾಯಚೂರು:
ತಾಲೂಕಿನ ಕೊರ್ತಕುಂದಾ ಗ್ರಾಮದಲ್ಲಿ ಆಕಸ್ಮಿಕ ಬೆಂಕಿ ತಗುಲಿ ವ್ಯಕ್ತಿಯೊಬ್ಬ ಮೃತಪಟ್ಟಿದ್ದಾನೆ. ಮೃತನನ್ನು ತಿಮ್ಮಪ್ಪ ಎಂದು ಗುರುತಿಸಲಾಗಿದೆ. ಈತ ಅಡುಗೆ ಮಾಡುತ್ತಿದ್ದ ವೇಳೆ ಸ್ಟೌ ಸಿಡಿದಿದ್ದರಿಂದ ಬಟ್ಟೆಗೆ ಬೆಂಕಿ ಹೊತ್ತಿಕೊಂಡಿದ್ದರಿಂದ ತೀವ್ರ ಗಾಯಗೊಂಡ ಆತ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಯಾಪಲದಿನ್ನಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗೋನಾಳ; ಬೆಂಕಿ ತಗುಲಿ ಬಾಲಕಿ ಸಾವು
ರಾಯಚೂರು:
ಸಿಂಧನೂರು ತಾಲೂಕಿನ ಗೋನಾಳ ಗ್ರಾಮದಲ್ಲಿ ಬಾಲಕಿಯೊಬ್ಬಳಿಗೆ ಆಕಸ್ಮಿಕ ಬೆಂಕಿ ತಗುಲಿ ಅಸು ನೀಗಿದ್ದಾಳೆ. ಮೃತಳನ್ನು ಸುಷ್ಮಾ(10) ಎಂದು ಗುರುತಿಸಲಾಗಿದೆ. ಈಕೆ ಮನೆಯಲ್ಲಿ ರೊಟ್ಟಿ ಬುಟ್ಟಿ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದಾಗ ಆಕಸ್ಮಿಕವಾಗಿ ಆಕೆ ಧರಿಸಿದ್ದ ಬಟ್ಟೆಗೆ ಬೆಂಕಿ ಹೊತ್ತಿಕೊಂಡು ಸುಟ್ಟ ಗಾಯಗಳಿಂದ ಬಳಲಿದ್ದು ಕೂಡಲೇ ಆಕೆಯನ್ನು ಆಸ್ಪತ್ರೆಗೆ ಸೇರಿಸಿದರೂ ಪ್ರಯೋಜನವಾಗದೇ ಮಣತಪಟ್ಟಿದ್ದಾಳೆಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಬಳಗಾನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.