ಕ್ಷಯ ರೋಗ ಅಪಾಯಕಾರಿ: ಡಾ. ಮನಗೋಳಿ
ಮುದಗಲ್: ಕ್ಷಯ ರೋಗ ಕ್ಯಾನ್ಸರ್ಗಿಂತ ಅಪಾಯಕಾರಿಯಾಗಿದೆ. ಅದನ್ನು ನಿಮೂರ್ಲಲನೆ ಮಾಡಲು ಸಾರ್ವಜನಿಕರ ಸಹಭಾಗಿತ್ವ ಅವಶ್ಯ ಎಂದು ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದ ಮುಖ್ಯ ವೈದ್ಯ ಡಾ. ರಾಜೇಂದ್ರ ಕುಮಾರ ಮನಗೋಳಿ ಹೇಳಿದರು.
ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವಿಶ್ವ ಕ್ಷಯ ರೋಗ ದಿನಾಚರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ಕ್ಷಯರೋಗ ಒಂದು ಸಾಂಕ್ರಾಮಿಕ ರೋಗವಾಗಿದೆ. ಒಬ್ಬರಿಂದ ಒಬ್ಬರಿಗೆ ಹರಡುವ ಮೂಲಕ ಹಣದ ಜೊತೆಗೆ ಕುಟುಂಬವನ್ನು ನಾಶ ಮಾಡುತ್ತದೆ ಎಂದರು.
ಮೂರು ವಾರಗಳಿಗಿಂತ ಹೆಚ್ಚು ದಿನಗಳಲ್ಲಿ ಕೆಮ್ಮು ಇದ್ದರೆ ಅಂಥವರು ಮೊದಲು ಕಫ ಪರೀಕ್ಷೆ ಮಾಡಿಸಿಕೊಂಡು ರೋಗದ ಬಗ್ಗೆ ಖಚಿತ ಪಡಿಸಿಕೊಳ್ಳಬೇಕು. ದೇಶದಲ್ಲಿ ಒಂದೂವರೆ ನಿಮಿಷಕ್ಕೆ ಒಬ್ಬ ವ್ಯಕ್ತಿ ಕ್ಷಯರೋಗದಿಂದ ನರಳಿ ಸಾಯುತ್ತಾನೆ ಮತ್ತು ಕಫದಲ್ಲಿ ಕ್ಷಯ ರೋಗ ಕ್ರಿಮಿಗಳಿರುವ ವ್ಯಕ್ತಿಯಿಂದ ವರ್ಷದಲ್ಲಿ ಸುಮಾರು 10ರಿಂದ 15 ಆರೋಗ್ಯವಂತರಿಗೆ ಕ್ಷಯರೋಗ ಹರಡುತ್ತದೆ. ಪರಿಷ್ಕೃತ ರಾಷ್ಟ್ರೀಯ ಕ್ಷಯ ರೋಗ ನಿಯಂತ್ರಣ ಕಾರ್ಯಕ್ರಮ ಇದಾಗಿದೆ ಎಂದರು.
ಮೈಕೋ ಬ್ಯಾಕ್ಟೇರಿಯಂ ಟ್ಯುಬರ್ ಕ್ಯುಲೋಸಿಸ್ ರೋಗಿಗಳು ಕೆಮ್ಮುವಾಗ, ಸೀನುವಾಗ ಆ ಕ್ರಿಮಿಗಳು ಆರೋಗ್ಯವಂತ ಮನುಷ್ಯನ ದೇಹ ಸೇರುತ್ತವೆ ಎಂದು ತಿಳಿಸಿದರು.
ಕ್ಷಯರೋಗ ಜಾಗೃತಿ ಜಾಥಾವನ್ನು ಖ್ಯಾತ ಕ್ಷಯ ರೋಗ ತಜ್ಞ ಲಿಂಗಸ್ಗೂರು ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ. ಎಂ.ವಿ. ಜೋಷಿ ರಿಬ್ಬಿನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಪಟ್ಟಣದ ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಸಹಾಯಕಿಯರು, ಆಶಾ ಕಾರ್ಯಕರ್ತರು, ಎನ್.ಎಂ. ಕೋರ್ಸಿನ ವಿದ್ಯಾರ್ಥಿಗಳು, ಸಿಬ್ಬಂದಿ ಶಂಕ್ರಯ್ಯ ಹಿರೇಮಠ, ವೀರಯ್ಯ, ಖಾಜಾಹುಸೇನ ಇತರರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

