ನೂತನ ಸದಸ್ಯರಿಗೆ ಸನ್ಮಾನ
ಚಿಂಚೋಳಿ: ಸ್ಥಳೀಯ ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ಗೆಲವು ಸಾಧಿಸಿದ ನೂತನ ಸದಸ್ಯರಿಗೆ ಹಾರಕೂಡ ಚಿಂಚೋಳಿ ಪೀಠಾಧಿಪತಿ ಚೆನ್ನವೀರ ಶಿವಾಚಾರ್ಯರು ಶಾಲು ಹೊದಿಸಿ ಸನ್ಮಾನಿಸಿದರು. ಪಟ್ಟಣದ ಹಾರಕೂಡ ಚಿಂಚೋಳಿ ಚೆನ್ನಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಹೋಳಿ ಹಬ್ಬದ ನಿಮಿತ್ತವಾಗಿ ಏರ್ಪಡಿಸಿದ ಸನ್ಮಾನ ಸಮಾರಂಭದಲ್ಲಿ ನೂತನ ಸದಸ್ಯರಾದ ರವಿಕಾಂತ ಹೊಸಬಾಯಿ, ಮೊಗಲಪ್ಪ ಕರಕಟ್ಟಿ, ಮಹಾದೇವಿ ಗಡಂತಿ, ಮಲ್ಲೇಶ್ವರಿ ಜಾಬಶೆಟ್ಟಿ, ಶಂಕರಗೌಡ ಅಲ್ಲಾಪುರ ಮುಂತಾದವರಿಗೆ ಸನ್ಮಾನಿಸಲಾಯಿತು. ಸುಭಾಷ ಸೀಳಿನ್, ಚೆನ್ನಬಸಪ್ಪ ನಾವದಗಿ, ಸಂತೋಷ ಗಡಂತಿ, ಸಂತೋಷ ಕೆ.ಕೆ. ರಾಜಶೇಖರ ಮಜ್ಜಗಿ, ಶಿವಬಸಪ್ಪ, ಸಂಗಯ್ಯ ಸ್ವಾಮಿ, ಮಲ್ಲಿಕಾರ್ಜುನ ಅಲ್ಲಾಪುರ, ಜಗನ್ನಾಥ ಗುತ್ತೇದಾರ ಗುಂಡಯ್ಯ ಸ್ವಾಮಿ ಇತರರು ಉಪಸ್ಥಿತರಿದ್ದರು.
31ರಂದು ಕವನ ಸಂಕಲನ ಬಿಡುಗಡೆ
ಚಿತ್ತಾಪುರ: ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ತಾಲೂಕು ಹಿಂದುಳಿದ ನೌಕರರ ಸಂಘದ ಸಂಯುಕ್ತಾಶ್ರಾಯದಲ್ಲಿ ಮಾ.31 ರಂದು ದಿಗ್ಗಾಂವ ಕಸಾಪ ವಲಯ ಗೌರವ ಕಾರ್ಯದರ್ಶಿ ಹಾಗೂ ಶಿಕ್ಷಕ ಮಾಲತೇಶ ಬಬ್ಬಜ್ಜಿ ಅವರ ಮಿಂಚುಹುಳು ಪ್ರಥಮ ಕವನ ಸಂಕಲನ ಬಿಡುಗಡೆ ಸಮಾರಂಭವನ್ನು ಅಕ್ಕಮಾಹಾದೇವಿ ಮಂದಿರದಲ್ಲಿ ಬೆಳಗ್ಗೆ 10.30ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಕಸಾಪ ಗೌರವ ಕಾರ್ಯದರ್ಶಿ ವೀರಸಂಗಪ್ಪ ಸುಲೇಗಾಂವ ಹಾಗೂ ಕಾಶಿನಾಥ ಗುತ್ತೇದಾರ ತಿಳಿಸಿದ್ದಾರೆ. ಹಿರಿಯ ಸಾಹಿತಿ ಎ.ಕೆ. ರಾಮೇಶ್ವರ ಅವರು ಕೃತಿ ಲೋಕಾರ್ಪಣೆ ಮಾಡುವರು. ಶಾಹಾಪುರದ ಮಕ್ಕಳ ಸಾಹಿತಿ ಚಂದ್ರಕಾಂತ ಕರದಳ್ಳಿ ಪುಸ್ತಕ ಕುರಿತು ಪರಿಚಯ ಮಾಡುವರು. ಜಿಲ್ಲಾ ಕಸಾಪ ಅಧ್ಯಕ್ಷ ಮಹಿಪಾಲರಡ್ಡಿ ಮೂನ್ನೂರ, ಕ್ಷೇತ್ರ ಶಿಕ್ಷಣಾಧಿಕಾರಿ ಜೆ. ಚವ್ಹಾಣಶೆಟ್ಟಿ, ಜೇವರ್ಗಿ ಕ್ಷೇತ್ರ ಶಿಕ್ಷಣಾಧಿಕಾರಿ ಗುರಣ್ಣ ಗುಂಡಗುರ್ತಿ, ತಾಲೂಕು ಹಿಂದುಳಿದ ವರ್ಗಗಳ ನೌಕರರ ಸಂಘದ ಅಧ್ಯಕ್ಷ ಅಮರಪ್ಪ ಹುಸನಗೋಳ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ತಾಲೂಕು ಕಸಾಪ ಅಧ್ಯಕ್ಷ ನಾಗಯ್ಯ ಸ್ವಾಮಿ ಅಲ್ಲೂರ ಅಧ್ಯಕ್ಷತೆ ವಹಿಸಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

