ಚಿನ್ನದ ಹುಡುಗರ ಸಾಧನೆ
ರಾಯಚೂರು: ಸತತ ಪರಿಶ್ರಮ, ನಿರಂತರ ಅಧ್ಯಯನದಿಂದ ಉನ್ನತವಾದದ್ದು ಸಾಧಿಸುವುದು ಕಷ್ಟವಾಗದು. ವಿದ್ಯಾರ್ಥಿಗಳು ನಿರ್ದಿಷ್ಟ ಗುರಿಯೊಂದಿಗೆ ಮುಂದುವರಿದಲ್ಲಿ ಸಾಧನೆ ತೀರಾ ಸರಳ.
- ನಗರದಲ್ಲಿ ಶನಿವಾರ ನಡೆದ ರಾಯಚೂರು ಕೃಷಿ ವಿವಿ ಮೂರನೇ ಘಟಿಕೋತ್ಸವದಲ್ಲಿ ಚಿನ್ನದ ಪದಕ ಗಳಿಸಿದ ವಿದ್ಯಾರ್ಥಿಗಳಾದ ಸಂತೋಷ ಕುಮಾರ್ ತಿವಾರಿ ಮತ್ತು ದುಶ್ಶಂತ್ ಕುಮಾರ್ ಅನಿಸಿಕೆಯಿದು.
ದೂರದ ಉತ್ತರ ಪ್ರದೇಶದ ಬನಿಯಾ ಜಿಲ್ಲೆಯ ದುಶ್ಶಂತ್ ಕುಮಾರ್ ಕೃಷಿ ತಾಂತ್ರಿಕ ಪದವಿಯಲ್ಲಿ 4 ಚಿನ್ನದ ಪದಕ ಪಡೆದಿದ್ದಾರೆ. ಸದ್ಯ ಐಐಟಿ ರೂರ್ಕೆಲಾದಲ್ಲಿ ಎಂ.ಟೆಕ್ ಅಧ್ಯಯನ ಮಾಡುತ್ತಿದ್ದಾರೆ. ತೋಟಗಾರಿಕೆ ಅಚ್ಚುಮೆಚ್ಚಿನ ವಿಷಯ. ಹೀಗಾಗಿ ಅದೇ ವಿಷಯಕ್ಕೆ ಸಂಬಂಧಿಸಿ ಎಂ.ಟೆಕ್ ಮಾಡುತ್ತಿದ್ದಾರೆ.
ಇನ್ನು ಝಾರ್ಖಂಡ್ ಮೂಲದ ಸಂತೋಷ ಕುಮಾರ್ ತಿವಾರಿ ಸಹ ಕೃಷಿ ಪದವಿಯಲ್ಲಿ ನಾಲ್ಕು ಚಿನ್ನದ ಪದಕ ಗಳಿಸಿದ್ದಾರೆ.
ತಂದೆ ಹೋಮಿಯೋಪಥಿ ವೈದ್ಯರು. ಕುಟುಂಬದವರು ಕೃಷಿ ಕ್ಷೇತ್ರಕ್ಕೆ ಯಾವುದೇ ರೀತಿಯಿಂದ ಸಂಬಂಧವಿಲ್ಲದಿದ್ದರೂ ಕೃಷಿಯಲ್ಲಿಯೇ ಆಸಕ್ತಿ ಬೆಳೆಸಿಕೊಂಡ ಇವರು ಸದ್ಯ ಗುಜರಾತ್ನ ವಿವಿಯೊಂದರಲ್ಲಿ ಬೀಜೋತ್ಪಾದನೆ ಸಂಬಂಧಿ ಅಧ್ಯಯನದಲ್ಲಿ ತೊಡಗಿದ್ದಾರೆ.
ಕೃಷಿ ವಿಷಯಗಳಲ್ಲಿನ ಆಸಕ್ತಿಯೇ ಅಧ್ಯಯನಕ್ಕೆ ನೆರವಾಯಿತು. ಕಠಿಣ ಪರಿಶ್ರಮ, ಸತತ ಅಧ್ಯಯನದಿಂದ ವಿದ್ಯಾರ್ಥಿಗಳಿಗೆ ಯಾವ ಪದವಿ, ಸಾಧನೆ ಕಷ್ಟವಾಗದು ಎಂದು ಅವರು ಸಲಹೆ ನೀಡುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

