ಎಸ್ಸೆಸ್ಸೆಲ್ಸಿ, ಪಿಯುಸಿ
ಕನ್ನಡಪ್ರಭ ವಾರ್ತೆ, ರಾಯಚೂರು , ಮೇ 7
ಜಿಲ್ಲೆಯ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸಾಧನೆ ಉತ್ತಮವಾಗಿದ್ದರೆ, ಪಿಯುಸಿ ದ್ವಿತೀಯ ವರ್ಷದಲ್ಲಿ ಉತ್ತೀರ , ತೆ ಪ್ರಮಾಣ ಹೆಚ್ಚಿದರೂ ಜಿಲ್ಲೆ ಒಂದು ಸ್ಥಾನ ಕೆಳಕ್ಕಿಳಿದಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 14ನೇ ಸ್ಥಾನಕ್ಕೆ(ಕಳೆದ ವರ್ಷ 23ನೇ ಸ್ಥಾನ) ಜಿಗಿದ ಸಂಭ್ರಮ ಒಂದೆಡೆಯಾದರೆ, ಪಿಯುಸಿ ದ್ವಿತೀಯ ಪರೀಕ್ಷೆಯಲ್ಲಿ 27ರಿಂದ 28ನೇ ಸ್ಥಾನಕ್ಕೆ ಕುಸಿದ ಆತಂಕ ಇನ್ನೊಂದೆಡೆ.
ಇತ್ತೀಚೆಗೆ ನಡೆದ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ನಗರ ಸೇರಿದಂತೆ ಜಿಲ್ಲಾದ್ಯಂತ ಹೊರಬಿದ್ದಿದ್ದು, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಸಾಧನೆ ಶೇ. 82.42ರಷ್ಟಾಗುವ ಮೂಲಕ(ಕಳೆದ ವರ್ಷ ಶೇ.79.09ರಷ್ಟಾಗಿತ್ತು) ಸುಧಾರಣೆ ಕಂಡಿದೆ. ಆದರೆ ದ್ವಿತೀಯ ಪಿಯುಸಿಯಲ್ಲಿ ವಿದ್ಯಾರ್ಥಿಗಳು ಕಳೆದ ಬಾರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಉತ್ತೀರ , ರಾಗಿದ್ದರೂ ಇನ್ನುಳಿದ ಜಿಲ್ಲೆಗಳವರ ಉತ್ತಮ ಸಾಧನೆಯಿಂದಾಗಿ ಶೇಕಡಾವಾರು ಪ್ರಮಾಣ ಕುಸಿತ ಕಂಡಿದೆ.
ಮಧುಶ್ರೀ ಜಿಲ್ಲೆಗೆ ಪ್ರಥಮ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮೆರೆದಿದ್ದಾರೆ. ಜಿಲ್ಲೆಯ ಒಟ್ಟು ಉತ್ತೀರ , ತೆಯ ಪ್ರಮಾಣ ಶೇ. 82.42 ಆಗಿದೆ. ನಗರದ ಸೇಂಟ್ ಮೇರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಮಧುಶ್ರೀ 615 ಅಂಕ ಪಡೆಯುವ ಮೂಲಕ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಈಕೆ ಪಡೆದ ಅಂಕಗಳ ಪ್ರಮಾಣ ಶೇ. 98.40.
ಅದೇ ರೀತಿ ನಗರದ ಆದರ್ಶ ರೆಸಿಡೆನ್ಶಿಯಲ್ ಶಾಲೆಯ ವಿದ್ಯಾರ್ಥಿನಿ ನವ್ಯಶ್ರೀ 610 ಅಂಕ(ಶೇ.97.60) ಪಡೆದು ದ್ವಿತೀಯ ಸ್ಥಾನ ಹಾಗೂ ಶಕ್ತಿನಗರದ ಆರ್ಟಿಪಿಎಸ್ ಶಾಲೆಯ ವಿದ್ಯಾರ್ಥಿನಿ ಭಾರ್ಗವಿ 607 ಅಂಕ(ಶೇ.97.12) ಗಳಿಸುವ ಮೂಲಕ ತೃತೀಯ ಸ್ಥಾನ ಪಡೆದಿದ್ದಾರೆ.
67 ಶಾಲೆ ಶೇ.100 ಫಲಿತಾಂಶ: ಈ ಬಾರಿಯ ಫಲಿತಾಂಶದಲ್ಲಿ ಜಿಲ್ಲೆಯ 67 ಶಾಲೆಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.100ಕ್ಕೆ ನೂರು ಶೇಕಡಾ ಫಲಿತಾಂಶ ಪಡೆದಿವೆ. ಇದರಲ್ಲಿ 29 ಸರ್ಕಾರಿ ಪ್ರೌಢಶಾಲೆಗಳು, 1 ಅನುದಾನಿತ ಹಾಗೂ 37 ಅನುದಾನ ರಹಿತ ಶಾಲೆಗಳು ಸೇರಿವೆ ಎಂದು ಡಿಡಿಪಿಐ ಪರಮೇಶ್ ತಿಳಿಸಿದ್ದಾರೆ.
2012ರ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 35 ಶಾಲೆಗಳು ನೂರಕ್ಕೆ ನೂರರಷ್ಟು ಫಲಿತಾಂಶ ಪಡೆದಿದ್ದು ಈ ಬಾರಿ ಈ ಪ್ರಮಾಣ ಗಣನೀಯವಾಗಿ ಏರಿಕೆ ಕಂಡಿದೆ. ಜಿಲ್ಲೆಯ 502 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 5,653 ವಿದ್ಯಾರ್ಥಿಗಳು ಪ್ರಥಮ ದರ್ಜೆ, 4,053 ವಿದ್ಯಾರ್ಥಿಗಳು ದ್ವಿತೀಯ ದರ್ಜೆ ಹಾಗೂ 6,326 ವಿದ್ಯಾರ್ಥಿಗಳು ಸಾಮಾನ್ಯ ದರ್ಜೆಯಲ್ಲಿ ಪಾಸಾಗಿದ್ದಾರೆ.
ಪ್ರಸಕ್ತ ವರ್ಷ ಪರೀಕ್ಷೆಗೆ 20,134 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅವರಲ್ಲಿ 16,594 ವಿದ್ಯಾರ್ಥಿಗಳು ಉತ್ತೀರ , ರಾಗಿದ್ದಾರೆ. 3,540 ವಿದ್ಯಾರ್ಥಿಗಳು ಅನುತ್ತೀರ , ರಾಗಿದ್ದಾರೆಂದು ಡಿಡಿಪಿಐ ಪರಮೇಶ್ ತಿಳಿಸಿದ್ದಾರೆ.
ಪಿಯುಸಿಯಲ್ಲಿ ಒಂದು ಸ್ಥಾನ ಕುಸಿತ
ಜಿಲ್ಲೆಯಲ್ಲಿ ಈಚೆಗೆ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರಾಗಿದ್ದ 9,676 ವಿದ್ಯಾರ್ಥಿಗಳ ಪೈಕಿ 5,322 ವಿದ್ಯಾರ್ಥಿಗಳು ಉತ್ತೀರ , ರಾಗುವ ಮೂಲಕ ಜಿಲ್ಲೆಗೆ ಶೇ. 55ರಷ್ಟು ಫಲಿತಾಂಶ ತಂದಿದ್ದಾರೆ. ಆದರೆ ರಾಜ್ಯ ಮಟ್ಟದಲ್ಲಿ ಜಿಲ್ಲೆಯ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ತಂದುಕೊಡುವಲ್ಲಿ ವಿಫಲರಾಗಿದ್ದಾರೆ.
ಕಳೆದ ವರ್ಷ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶದಲ್ಲಿ ಜಿಲ್ಲೆಯು 27ನೇ ಸ್ಥಾನದಲ್ಲಿತ್ತು. ಅಂದರೆ ಶೇ. 41.23ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದರು. ಪ್ರಸಕ್ತ ವರ್ಷದ ಫಲಿತಾಂಶದಲ್ಲಿ 28ನೇ ಸ್ಥಾನಕ್ಕೆ ಕುಸಿದಿದೆ. ಆದರೆ ಶೇಕಡಾವಾರು ತೇರ್ಗಡೆ ಪ್ರಮಾಣ ಮಾತ್ರ 55ಕ್ಕೆ ಏರಿಕೆಯಾಗಿದೆ. ರಾಜ್ಯದ ಇನ್ನುಳಿದ ಜಿಲ್ಲೆಗಳಲ್ಲಿ ಉತ್ತೀರ , ತೆಯ ಪ್ರಮಾಣ ಹೆಚ್ಚಾಗಿದ್ದು, ಜಿಲ್ಲೆ ಹಿನ್ನಡೆ ಅನುಭವಿಸಿದೆ.
ಜಿಲ್ಲೆಯಲ್ಲಿ ವಿಜ್ಞಾನ ವಿಭಾಗದಲ್ಲಿ 1,712 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅವರಲ್ಲಿ 896 ವಿದ್ಯಾರ್ಥಿಗಳು ಉತ್ತೀರ , ರಾಗಿದ್ದಾರೆ. ಅದೇ ರೀತಿ ವಾಣಿಜ್ಯ ವಿಭಾಗದಲ್ಲಿ 2,350 ವಿದ್ಯಾರ್ಥಿಗಳ ಪೈಕಿ 1,544 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಹಾಗೆಯೇ ಕಲಾ ವಿಭಾಗದಲ್ಲಿ 5,614 ವಿದ್ಯಾರ್ಥಿಗಳಲ್ಲಿ 2,882 ವಿದ್ಯಾರ್ಥಿಗಳು ಉತ್ತೀರ , ರಾಗಿದ್ದಾರೆಂದು ಡಿಡಿಪಿಯು ಶರಣಪ್ಪ ತಿಳಿಸಿದ್ದಾರೆ.
ನಗರ ಪ್ರದೇಶದಿಂದ ಪರೀಕ್ಷೆ ಬರೆದಿದ್ದ 7,858 ವಿದ್ಯಾರ್ಥಿಗಳಲ್ಲಿ 4,283 ವಿದ್ಯಾರ್ಥಿಗಳು ಪಾಸಾಗಿದ್ದರೆ, ಗ್ರಾಮೀಣ ಪ್ರದೇಶದ 1,818 ವಿದ್ಯಾರ್ಥಿಗಳಲ್ಲಿ 1,039 ವಿದ್ಯಾರ್ಥಿಗಳು ಉತ್ತೀರ , ರಾಗಿದ್ದಾರೆ.
ದಿವ್ಯಾ ಜಿಲ್ಲೆಗೆ ಪ್ರಥಮ: ವಿಜ್ಞಾನ ವಿಭಾಗದಲ್ಲಿ ನಗರದ ಪ್ರಮಾಣ ಕಾಲೇಜಿನ ವಿದ್ಯಾರ್ಥಿನಿ ದಿವ್ಯಾ 579 ಅಂಕ ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಅದೇ ಕಾಲೇಜಿನ ವಿದ್ಯಾರ್ಥಿನಿ ವೈಭವಿ ಜಹಾಗೀರದಾರ್ 578 ಅಂಕ ಗಳಿಸಿ ದ್ವಿತೀಯ ಸ್ಥಾನ, ಸಿಂಧನೂರಿನ ಎಸ್ಎಂಜೆ ಕಾಲೇಜು ವಿದ್ಯಾರ್ಥಿ ಅಯೂಬ್ ಬಾಷಾ 576 ಅಂಕ ಗಳಿಸಿ 3ನೇ ಸ್ಥಾನ ಗಳಿಸಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಲಿಂಗಸ್ಗೂರು ನಗರದ ಬಸವೇಶ್ವರ ಕಾಲೇಜಿನ ವಿದ್ಯಾರ್ಥಿ ಸೋಮನಾಥ 566 ಅಂಕ ಗಳಿಸಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಅದೇ ಕಾಲೇಜಿನ ಲಿಂಗಪ್ಪ 558 ಅಂಕ ಪಡೆದು ದ್ವಿತೀಯ ಸ್ಥಾನ ಮತ್ತು ರಾಯಚೂರಿನ ಎಸ್ಆರ್ಪಿಎಸ್ ಕಾಲೇಜಿನ ಅಂಕಿತಾ ಬೊಹರಾ 558 ಅಂಕಗಳಿಸುವ ಮೂಲಕ ಮೂರನೇ ಸ್ಥಾನ ಪಡೆದಿದ್ದಾರೆಂದು ಡಿಡಿಪಿಯು ಶರಣಪ್ಪ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಪ್ರಸಕ್ತ ವರ್ಷದ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ 157 ಡಿಸ್ಟಿಂಕ್ಷನ್ ಬಂದಿದ್ದು, ರಾಯಚೂರು ತಾಲೂಕು- 63, ಮಾನವಿ- 09, ದೇವದುರ್ಗ- 2, ಸಿಂಧನೂರು- 59 ಹಾಗೂ ಲಿಂಗಸ್ಗೂರು ತಾಲೂಕಿನ 24 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದಿದ್ದಾರೆಂದು ತಿಳಿಸಿದ್ದಾರೆ.
ಎಸ್ಎಂಜಿ ಕಾಲೇಜು ಸಾಧನೆ: ಸಿಂಧನೂರಿನ ಎಸ್ಎಂಜಿ ಪದವಿ ಕಾಲೇಜು ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಶೇ.92.83 ರಷ್ಟು ಅಂಕ ಪಡೆದು ಪ್ರಥಮ ಸ್ಥಾನದಲ್ಲಿದ್ದು, ನಗರದ ಪ್ರಮಾಣ ಕಾಲೇಜು ಎರಡನೇ ಸ್ಥಾನದಲ್ಲಿದ್ದು, ಶೇ. 90.10 ರಷ್ಟು ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಸಿಂಧನೂರಿನ ಇ.ಜೆ. ಹೊಸಳ್ಳಿ ಕ್ಯಾಂಪಿನ ಶ್ರೀಕೃಷ , ದೇವರಾಯ ಕಾಲೇಜಿನ ವಿಜ್ಞಾನ ಮತ್ತು ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆ ಬರೆದಿದ್ದ 65 ವಿದ್ಯಾರ್ಥಿಗಳೂ ಉತ್ತೀರ , ರಾಗುವ ಮೂಲಕ ಸಾಧನೆ ಮೆರೆದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

