ಆಲ್ದಾಳರ ಬದುಕು, ಬರಹ; ಉಪನ್ಯಾಸ
ಗುಲ್ಬರ್ಗ: ರಂಗಕರ್ಮಿ ಎಲ್.ಬಿ.ಕೆ. ಅಲ್ದಾಳರು ಸಾಹೇಬರಾಗಿ ಹುಟ್ಟಿ ಶರಣರಂತೆ ಬದುಕು ಸಾಗಿಸಿ ಭಾವೈಕ್ಯತೆ ಮೆರೆದು ಸಾಧು, ಸೂಫಿ, ಸಂತ, ಶರಣ ಹೀಗೆ ಎಲ್ಲರನ್ನು ಅವರಲ್ಲಿ ಕಾಣಬಹುದು ಎಂದು ಹಿರಿಯ ಪತ್ರಕರ್ತ ಎಸ್.ಆರ್. ಮಣ್ಣೂರ್ ಅಭಿಪ್ರಾಯಪಟ್ಟರು.
ನಗರದ ಇನಾಮದಾರ ಎಂಎಸ್ಡಬ್ಲ್ಯೂ ಕಾಲೇಜಿನ ಸಭಾಂಗಣದಲ್ಲಿ ವಿಶ್ವಜ್ಯೋತಿ ಪ್ರತಿಷ್ಠಾನ ಆಯೋಜಿಸಿದ್ದ ನಾಟಕ ಲೋಕದಿ... ರಂಗಭೂಮಿ ಶೃಂಗದ 4ನೇ ಮಾಲಿಕೆಯಡಿಯಲ್ಲಿ ಹಿರಿಯ ರಂಗಕರ್ಮಿ, ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತ ಎಲ್ಬಿಕೆ ಆಲ್ದಾಳರ ಬದುಕು- ಬರಹದ ಕುರಿತು ನಡೆದ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹಿರಿಯ ಸಾಹಿತಿ ಗವೀಶ ಹಿರೇಮಠ ಉಪನ್ಯಾಸ ನೀಡುತ್ತ, ಆಲ್ದಾಳ ಕವಿಗಳು ರಂಗಭೂಮಿಯನ್ನೇ ನಂಬಿ ಬದುಕು ನಡೆಸಿದವರು, ಸಮಾಜದಲ್ಲಿ ಸಾಮರಸ್ಯ ಮೂಡಿಸಲು ಹಗಲಿರುಳು ಶ್ರಮಿಸಿದ್ದಾರೆ ಎಂದರು.
ನಾಟಕಕಾರ ಎಲ್ಬಿಕೆ ಆಲ್ದಾಳ, ಇನಾಮದಾರ ವಿದ್ಯಾಸಂಸ್ಥೆಯ ಸಂಸ್ಥಾಪಕ ಡಾ. ಕ್ಯೂ.ಎಂ. ಇನಾಮದಾರ, ಶ್ರೀಕಾಂತಗೌಡ ತಿಳಗೂಳ ಮಾತನಾಡಿದರು. ಹಿರಿಯ ಸಾಹಿತಿ ಡಾ. ಸ್ವಾಮಿರಾವ ಕುಲಕರ್ಣಿ, ಈಶ್ವರಪ್ಪ ಫರಹತಾಬಾದ್, ಅಮರಪ್ರಿಯ ಹಿರೇಮಠ, ಗುಂಡಣ್ಣ ಡಿಗ್ಗಿ, ರಾಜಶೇಖರ ಯಾಳಗಿ, ಸುಭಾಶ್ಚಂದ್ರ ಕಶೆಟ್ಟಿ, ಮಹಾಂತೇಶ ಸಾಲೇಗಾಂವ, ರಾಜಶೇಖರ ಸ್ವಾಮಿ ಇತರರು ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಚಾರ್ಯ ಡಾ. ಬಿ.ಎಸ್. ಗುಳಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪ್ರತಿಷ್ಠಾನದ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರತಿಭಾ ಅಂಗಡಿ ಕಾರ್ಯಕ್ರಮ ನಿರೂಪಿಸಿದರು. ರೇಣುಕಾ ಪ್ರಾರ್ಥನೆ ಗೀತೆ ಹಾಡಿದರು. ಪದ್ಮಾವತಿ ಸ್ವಾಗತಿಸಿದರು. ಪೀರಪ್ಪ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

