ಮರೀಚಿಕೆಯಾದ ಮೂಲ ಸೌಕರ್ಯ
ಶಹಾಪುರ: ನಿತ್ಯ ಕುಡಿಯುವ ನೀರಿಗಾಗಿ ಕಿಮೀ ಗಟ್ಟಲೆ ಅಲೆಯಬೇಕಾದ ಸ್ಥಿತಿಯಿದ್ದು, ಸ್ಥಳೀಯ ಪುರಸಭೆ ಪಟ್ಟಣದ ಕೆಲವು ಬಡಾವಣೆಗಳತ್ತ ನೀರು ಸರಬರಾಜು ಮಾಡದೇ ಮೂಲ ಸೌಕರ್ಯದಿಂದ ವಂಚಿತರನ್ನಾಗಿ ಮಾಡಿದೆ ಎಂದು 17ನೇ ವಾರ್ಡ್ನ ಜನತೆ ಕುಡಿಯುವ ನೀರಿನ ಭವಣೆಯಿಂದ ಪರಿತಪಿಸುತ್ತಿದ್ದಾರೆ. ದಿನನಿತ್ಯ ಮೋಟಾರು ಸೈಕಲ್, ಸೈಕಲ್ ಮತ್ತು ರಿಕ್ಷಾದಲ್ಲಿ ಎಲ್ಲಿ ನೀರು ಸಿಗುತ್ತವೆಯೋ ಅಲ್ಲಿಗೆ ಹೋಗಿ ಗಂಟೆಗಟ್ಟಲೇ ಕಾಯ್ದು ನಾಲ್ಕಾರು ಕೊಡ ನೀರು ತರಬೇಕು. ಬಡಾವಣೆಯಲ್ಲಿ ಕೊಳವೆ ಬಾವಿ ಕೊರೆಸಿದರು. ಕೇವಲ ಬಳಕೆಗೆ ಬರುತ್ತಿದ್ದು ಕುಡಿಯಲು ಸಾಧ್ಯವಾಗುತ್ತಿಲ್ಲ. ಪುರಸಭೆ ತಕ್ಷಣವೇ ಕಾಳಜಿವಹಿಸಿ ಓವರಹೆಡ್ ಟ್ಯಾಂಕಿನಿಂದ ಪೈಪ್ಲೈನ್ ಹಾಕಿ ಕುಡಿವ ನೀರು ಸರಬರಾಜು ಮಾಡಬೇಕೆಂದು 17,18 ನೇ ವಾರ್ಡ್ನ ನಾಗರಿಕರ ಆಗ್ರಹವಾಗಿದೆ.
ಸಾಮೂಹಿಕ ವಿವಾಹ
ಶಹಾಪುರ: ಬುದ್ಧ, ಬಸವ, ಅಂಬೇಡ್ಕರ ಜಯಂತಿ ನಿಮಿತ್ತ ಪಟ್ಟಣದ ಸಿಪಿಎಸ್ ಶಾಲಾ ಮೈದಾನದಲ್ಲಿ ಬರುವ 25 ರಂದು ಕರ್ನಾಟಕ ಪ್ರದೇಶ ಛಲವಾದಿಗರ ಮತ್ತು ಮಾದಿಗರ ಸಂಘದ ಆಶ್ರಯದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕಾರ್ಯಕ್ರಮ ಉದ್ಘಾಟನೆಯನ್ನು ನೂತನ ಶಾಸಕರಾದ ಗುರುಪಾಟೀಲ ಶಿರವಾಳ ನೆರವೇರಿಸಲಿದ್ದು, ಸಾನಿಧ್ಯವನ್ನು ಉರಿಲಿಂಗ ಪೆದ್ದಿ ಸಂಸ್ಥಾನ ಮಠದ ಜ್ಞಾನಪ್ರಕಾಶ ಸ್ವಾಮೀಜಿ ವಹಿಸಲಿದ್ದು, ಅಧ್ಯಕ್ಷತೆ ನಿಂಗಣ್ಣಾ ಬಿ.ಕದರಾಪುರ, ಜಿಲ್ಲಾಕಾರ್ಯಧ್ಯಕ್ಷ ಶರಣರಡ್ಡಿ ಪ್ರಸ್ತಾವಿಕ ಮಾತನಾಡಲಿದ್ದಾರೆ. ಜನಪ್ರತಿನಿಧಿಗಳು, ಮುಖಂಡರು ಬಾಗವಹಿಸಲಿದ್ದು ಸರ್ವರು ಪಾಲ್ಗೊಳ್ಳುವಂತೆ ಸಮಿತಿ ಮನವಿ ಮಾಡಿದೆ.
ಮುನ್ನೆಚ್ಚರಿಕೆ ಕ್ರಮ ಅಗತ್ಯ: ಬಿರಾದಾರ
ಶಹಾಪುರ: ಬೀಜ, ಗೊಬ್ಬರ ಖರೀದಿಸುವಾಗ ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಜಾಗ್ರತೆ ವಹಿಸಬೇಕು. ಇತ್ತೀಚೆಗೆ ನಡೆಯುತ್ತಿರುವ ನಕಲಿ ಹತ್ತಿ ಬೀಜ ಮಾರಾಟವಾಗುತ್ತಿದ್ದು, ರೈತರು ಎಚ್ಚರ ವಹಿಸಬೇಕಾಗಿ ದೆ ಎಂದು ರೈತ ಸಂಪರ್ಕ ಕೇಂದ್ರದ ಮುಖ್ಯಸ್ಥ ಎಸ್.ಎಂ. ಬಿರಾದರ ತಿಳಿಸಿದರು. ತಾಲೂಕಿನ ಅಣಬಿ ಗ್ರಾಮದಲ್ಲಿ 2013-14ನೇ ಸಾಲಿನ ಕೃಷಿ ಇಲಾಖೆಯ ಭೂಚೇತನ ಯೋಜನೆ ಅಡಿಯಲ್ಲಿ ರೈತರಿಗೆ ತರಬೇತಿ ಹಾಗು ಬೀಜೋಪಚಾರದ ಆದೋಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದ ಸಮಾರಂಭದಲ್ಲಿ ಮಾತನಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

