ಮಳಿಗೆ ವಶ; ಕ್ರಮಕ್ಕೆ ಒತ್ತಾಯ
ಸಿಂಧನೂರು: ಸಿಂಧನೂರು ನಗರಸಭೆ ವ್ಯಾಪ್ತಿಯಲ್ಲಿ ಬರುವ ದೇವರಾಜ ಅರಸು ಮಾರುಕಟ್ಟೆಯ ಐಡಿಎಸ್ಎಂಟಿ ಮಳಿಗೆಗಳನ್ನು ಕೆಲ ರಾಜಕಾರಣಿಗಳ ಹಿಂಬಾಲಕರು ಅನಧಿಕೃತವಾಗಿ ಕಬ್ಜಾ ಮಾಡಿಕೊಂಡಿದ್ದಾರೆ. ಅವರ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಬೇಕೆಂದು ಸಮಾಜ ಸುಧಾರಣಾ ವೇದಿಕೆ ತಾಲೂಕಾಧ್ಯಕ್ಷ ಸೋಮನಾಥ ಸೂಲಂಗಿ, ಕಾರ್ಯದರ್ಶಿ ಅಮೀನ ನದಾಫ್ ಒತ್ತಾಯಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಆಂಜನೇಯ ಶೆಟ್ಟಿ ಹಾಗೂ ಇತರ ಅನೇಕರು ಮಳಿಗೆಗಳನ್ನು ಕಬ್ಜಾ ಮಾಡಿಕೊಂಡಿದ್ದಾರೆ. ಇದಲ್ಲದೆ ಅನೇಕ ಮಳಿಗೆಗಳು ಕಸದ ತೊಟ್ಟಿಗಳಾಗಿವೆ, ಹಂದಿ-ನಾಯಿ-ಕತ್ತೆಗಳ ಆವಾಸಸ್ಥಾನವಾಗಿದೆ. ಈ ಬಗ್ಗೆ ನಗರಸಭೆ ಅಧಿಕಾರಿಗಳು ಜಾಣ ಕಿವುಡರಂತೆ ವರ್ತಿಸುತ್ತಿದ್ದಾರೆ. ಮಳಿಗೆಗಳನ್ನು ಟೆಂಡರ್ ಮೂಲಕ ಹರಾಜು ಹಾಕಿ ಫಲಾನುಭವಿಗಳಿಗೆ ಸ್ವಚ್ಚಗೊಳಿಸಿ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಅದ್ಧೂರಿ ನರಸಿಂಹ ಜಯಂತಿ
ಸಿಂಧನೂರು: ತಾಲೂಕಿನ ತುರ್ವಿಹಾಳ ಗ್ರಾಮದ ರಾಘವೇಂದ್ರಸ್ವಾಮಿಗಳ ಮಠದಲ್ಲಿ ಗುರುವಾರ ಅದ್ಧೂರಿಯಾಗಿ ನರಸಿಂಹ ಜಯಂತಿ ಉತ್ಸವವು ಜರುಗಿತು. ಜಯಂತಿ ಅಂಗವಾಗಿ ಗುರುರಾಯರಿಗೆ ವಿಶೇಷ ಪೂಜೆ, ಅಲಂಕಾರ ಹಾಗೂ ಪಲ್ಲಕ್ಕಿ ಸೇವೆಗಳು ಜರುಗಿದವು. ಸಂಗೀತಗಾರರಾದ ವಾಸುದೇವಚಾರ್ ಉಪ್ಪಳಕರ್, ಕೃಷ್ಣ ಮಲಕಸಮುದ್ರ ಸಂಗೀತ ಸೇವೆ ಮಾಡಿದರು. ಗುರುರಾಜ ಸೇವಾ ಸಮಿತಿಯ ಅಧ್ಯಕ್ಷ ಶೇಷಗಿರಿರಾವ್ ಕುಲ್ಕರ್ಣಿ, ಕಾರ್ಯದರ್ಶಿ ಅನಂತರಾವ್ ಧಡೇಸ್ಗೂರು, ಕೃಷ್ಣ ಕಾನಿಹಾಳ, ಹನುಮಂತರಾವ್ ಕಾನಿಹಾಳ, ಶ್ರೀಧರ ಕುಲ್ಕರ್ಣಿ, ರಾಘವೇಂದ್ರರಾವ್, ನವಲಿ ಭೀಮಾಚಾರ್ ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

