ಸಪ್ತಪದಿ ತುಳಿದ 51 ಜೋಡಿ
ಕನ್ನಡಪ್ರಭ ವಾರ್ತೆ, ರಾಯಚೂರು, ಮೇ 26
ಮಾನವಿ ತಾಲೂಕಿನ ಬಲ್ಲಟಗಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಶ್ರೀ ಬಸವ ಪುರಾಣ ಪ್ರವಚನ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮಗಳು ಶ್ರೀಮಠದ ಬಸವರಾಜಯ್ಯ ಸ್ವಾಮಿಗಳ ನೇತೃತ್ವದಲ್ಲಿ ಭಾನುವಾರ ಜರುಗಿದವು.
ಗ್ರಾಮದ ನೂತನ ಹಿರೇಮಠದ ಲಿಂ. ಚನ್ನಬಸಮ್ಮ ಅಮ್ಮನವರ ಪುಣ್ಯತಿಥಿ ಅಂಗವಾಗಿ ಹಾಗೂ ಶ್ರೀಮಠದ ಭಕ್ತ ಲಿಂ. ಭೀಮನಗೌಡ್ರು ಹಳೇಮನಿ ನುಗಡೋಣಿ ಇವರ ಸವಿನೆನಪಿಗಾಗಿ ಏ. 26ರಿಂದ ಮೇ 26 ರವರೆಗೆ ಶ್ರೀ ಬಸವ ಪುರಾಣ ಪ್ರವಚನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
51 ಜೋಡಿ ಸಾಮೂಹಿಕ ವಿವಾಹ: ಪುರಾಣ ಮಂಗಲ ಕಾರ್ಯಕ್ರಮದ ಅಂಗವಾಗಿ ನವಲಕಲ್ ಬೃಹನ್ಮಠದ ಅಭಿನವ ಸೋಮನಾಥ ಶಿವಾಚಾರ್ಯ ಸ್ವಾಮೀಜಿ ಹಾಗೂ ಶ್ರೀಮಠದ ಬಸವರಾಜಯ್ಯ ಸ್ವಾಮೀಜಿ ಹಾಗೂ ಗುರುಬಸಯ್ಯ ಸ್ವಾಮೀಜಿ ನೇತೃತ್ವದಲ್ಲಿ ಮೇ 26ರಂದು ಬೆಳಗ್ಗೆ ಕರ್ತೃ ಗದ್ದುಗೆಗೆ ರುದ್ರಾಭಿಷೇಕ, ಮಧ್ಯಾಹ್ನ 51 ಜೋಡಿ ಸಾಮೂಹಿಕ ವಿವಾಹ ಹಾಗೂ ಪ್ರಸಾದ ವಿತರಣೆ ಕಾರ್ಯಕ್ರಮಗಳು ಜರುಗಿದವು.
ಕಾರ್ಯಕ್ರಮದಲ್ಲಿ ಪ್ರವಚನಕಾರರಾದ ಸೂಳೇಕಲ್ ರಾಜರಾಜೇಶ್ವರಿ ಬೃಹನ್ಮಠದ ಬಸಯ್ಯ ಸ್ವಾಮೀಜಿ, ಸಿದ್ಧಾಪುರದ ಶಿವಶಕ್ತಿ ಹಿರೇಮಠದ ಮಾತೋಶ್ರೀ ನೀಲಮ್ಮ ತಾಯಿಯವರು, ಜಂಗಮ ಸಮಾಜದ ತಾಲೂಕು ಕಾರ್ಯದರ್ಶಿ ಕಿಡಿಗಣ್ಣಯ್ಯ ಸ್ವಾಮೀಜಿ, ಶ್ರೀಮಠದ ಲಿಂಗಾನಂದಸ್ವಾಮೀಜಿ, ಬಸಯ್ಯ ಸ್ವಾಮೀಜಿ, ಅಮರೇಶಸ್ವಾಮಿ ಸಗರಮಠ, ಮಹಾಂತೇಶ ಸ್ವಾಮೀಜಿ, ಗ್ರಾಮದ ಹಿರಿಯ ಮುಖಂಡರಾದ ಮಲ್ಲಣ್ಣ ಸಾಹುಕಾರ, ಮುದ್ದಪ್ಪ ಸಾಹುಕಾರ, ಹನುಮಯ್ಯ ದಿನ್ನಿ, ತಾಪಂ ಸದಸ್ಯ ಅರ್ಜುನಪ್ಪ ಬಲ್ಲಟಗಿ, ಗ್ರಾಪಂ ಅಧ್ಯಕ್ಷ ಶಿವು ಮುತ್ತಲ, ಉಪಾಧ್ಯಕ್ಷ ರಾಜಶೇಖರ ಯಕ್ಸಿಂತಿ, ಸದಸ್ಯರಾದ ಗೂಳಪ್ಪ ಸಾಹುಕಾರ, ಗ್ರಾಪಂ ಮಾಜಿ ಅಧ್ಯಕ್ಷ ತಾಯಣ್ಣ, ಅರುಣಕುಮಾರ ಯಕ್ಸಿಂತಿ, ಸಂದೀಪ ಕುಮಾರ ಸೇರಿದಂತೆ ಸಾವಿರಾರು ಜನ ಭಕ್ತರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

