ರಾಯಚೂರು

ಕಲ್ಯಾಣ ಮಂಟಪಕ್ಕೆ ಶಿಲಾನ್ಯಾಸ

Published On :

ಮುದಗಲ್: ಸ್ಥಳೀಯ ಪಟ್ಟಣದ ವೆಂಕಟರಾಯನ ಪೇಟೆಯಲ್ಲಿ ಬುಧವಾರ ರಾಮಗಿರಿ ಮಠದ ಕಲ್ಯಾಣ ಮಂಟಪಕ್ಕೆ ಸಜ್ಜಲಗುಡ್ಡದ ದೊಡ್ಡಬಸವಾರ್ಯ ತಾತನವರು ಶಿಲಾನ್ಯಾಸ ನೆರವೇರಿಸಿದರು.
ರುದ್ರಮ್ಮ ಶಿವಯೋಗಯ್ಯ ಹಿರೆಮಠರವರ ಸ್ಮರಣಾರ್ಥವಾಗಿ ಸುಮಾರು 1 ಕೋಟಿ ವೆಚ್ಚದಲ್ಲಿ ಗುರುಲಿಂಗಯ್ಯ ರಾಮಗಿರಿ ಮಠ ಅವರು ಕಲ್ಯಾಣ ಮಂಟಪ ನಿರ್ಮಾಣದ ಮಾಡಲು ಉದ್ದೇಶಿಸಿದ್ದಾರೆ. ಕಾರ್ಯಕ್ರಮದಲ್ಲಿ ಅಮರೇಗೌಡ ಮಟ್ಟೂರು, ಅಮರಣ್ಣ ಗುಡಿಹಾಳ, ಬಸವಲಿಂಗಯ್ಯ ಹಿರೆಮಠ, ವಿಜಯ ಕುಮಾರ, ಡಾ. ರಾಜಕುಮಾರ ಹಿರೇಮಠ, ನಿಲಕಂಠಪ್ಪ ಸುಂಕದ, ಗುರುಬಸಪ್ಪ ಸಜ್ಜನ್, ಶಶಿಧರ ಕಂಚಿಮಠ, ಶಂಕರಯ್ಯ ಹಿರೇಮಠ, ಸಿದ್ದನಗೌಡ, ನಾಗರಾಜ ದಫೆದಾರ, ಡಾ. ಭಮ್ಮಸಾಗರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

ಇಂದು ಎಂಆರ್ಎಚ್ಎಸ್ ಸಭೆ
ರಾಯಚೂರು: ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಜಿಲ್ಲಾ ಘಟಕದಿಂದ ಮೇ 30ರಂದು ನಗರದಲ್ಲಿ ಮಹತ್ವದ ಸಭೆ ಕರೆಯಲಾಗಿದೆ. ಅಂದು ಬೆಳಗ್ಗೆ 10ಕ್ಕೆ ನಗರದ ಸರ್ಕಾರಿ ನೌಕರರ ಭವನದಲ್ಲಿ ಸಭೆ ನಡೆಯಲಿದ್ದು, ಸಂಘಟನೆಯ ಸ್ಥಿತಿ ಸುಧಾರಣೆ ಜತೆಗೆ ದಿ. ಆರ್.ಶಿವಪುತ್ರಪ್ಪ ಭೇರಿಯವರ ಧ್ಯೇಯೋದ್ದೇಶದಂತೆ ಸಮಾಜದವರಿಗೆ ಹೋರಾಟದ ಮೂಲಕ ಹಕ್ಕು ಪಡೆಯುವ ನಿಟ್ಟಿನಲ್ಲಿ ಹೋರಾಟ ರೂಪಿಸಲು ಸಭೆಯಲ್ಲಿ ಚರ್ಚಿಸಲಾಗುತ್ತದೆ. ಸಂಘಟನೆಯ ಪುನಶ್ಚೇತನ ಮತ್ತು ಪದಾಧಿಕಾರಿಗಳ ಆಯ್ಕೆಯ ಹಿನ್ನೆಲೆ ಸಭೆ ಕರೆದಿದ್ದು ಎಲ್ಲ ಸಮಾನಮನಸ್ಕರು ಈ ಸಭೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಸಂಘಟನೆಯ ಜಿಲ್ಲಾ ಕಾರ್ಯಾಧ್ಯಕ್ಷ ಜೆ.ಶರಣಬಸವ ಮತ್ತಿತರರು ಮನವಿ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.