ರಾಯಚೂರು

ಇಂದು ಆಯುಷ್ ತಪಾಸಣೆ ಶಿಬಿರ

Published On :

ರಾಯಚೂರು: ಜಿಲ್ಲಾ ಸರ್ಕಾರಿ ಆಯುರ್ವೇದ ಮತ್ತು ಯುನಾನಿ ಆಸ್ಪತ್ರೆಯಲ್ಲಿ ನ.7ರಂದು ಉಚಿತ ಆಯುಷ್ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ಆಯೋಜಿಸಲಾಗಿದೆ. ಅಂದು ಬೆಳಗ್ಗೆ 10ರಿಂದ ಸಂಜೆ 5 ರವರೆಗೆ ಶಿಬಿರದಲ್ಲಿ ತಜ್ಞ ವೈದ್ಯರು ರೋಗಿಗಳ ಆರೋಗ್ಯದ ತಪಾಸಣೆ ನಡೆಸಲಿದ್ದು, ಸಾರ್ವಜನಿಕರು ಶಿಬಿರದ ಸದುಪಯೋಗ ಪಡೆಯಲು ಜಿಲ್ಲಾ ಆಯುಷ್ ಅಧಿಕಾರಿ ಡಾ. ಜೀಡಿ ಅಮರಗುಂಡಪ್ಪ ಕೋರಿದ್ದಾರೆ.
ಅಪರಿಚಿತ ವೃದ್ಧ ಸಾವು
ಗುಲ್ಬರ್ಗ:   ನಗರದ ಹಳೆಯ ಎಸ್ಪಿ ಕಚೇರಿ ರಸ್ತೆಯ ಕುಳಗೇರಿ ಕ್ರಾಸ್ ಬಳಿ 65-70 ವರ್ಷದ ಅಪರಿಚಿತ ವಯೋವೃದ್ಧನ ಶವ ಪತ್ತೆಯಾಗಿದೆ. ಶವದ ಎಡಗಾಲ ಪಾದ ಪೂರ್ತಿಯಾಗಿ ಕೊಳೆತಿದೆ. ಬಲ ಕಾಲಿನ ಪಾದದ ಮೇಲೆ ಕೂಡ ಹಳೆಯ ಗಾಯಗಳು ಇವೆ. ಶವದ ಮೈಮೇಲೆ ಒಂದು ಬಿಳಿ ಬಣ್ಣದ ಗೆರೆಯುಳ್ಳ ಶರ್ಟ್, ಬಿಳಿ ಬಣ್ಣದ ಧೋತರವಿದೆ. ಯಾವುದೋ ಕಾಯಿಲೆಯಿಂದ ಮರಣ ಹೊಂದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಬ್ರಹ್ಮಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.