ಶೀಘ್ರವೇ ರಸ್ತೆ ಡಾಂಬರೀಕರಣ
ಸಿಂಧನೂರು: ನಗರಾದ್ಯಂತ ಧೂಳು ಎಲ್ಲೆಡೆ ಆವರಿಸಿರುವುದು ಮನವರಿಕೆಯಾಗಿದೆ. ಕೂಡಲೇ ಮಹಾತ್ಮ ಗಾಂಧಿ ವೃತ್ತದಿಂದ ಎಪಿಎಂಸಿವರೆಗಿನ ರಸ್ತೆ ಡಾಂಬರೀಕರಣ ಗೊಳಿಸಲಾಗುವುದು ಎಂದು ಶಾಸಕ ಹಂಪನಗೌಡ ಬಾದರ್ಲಿ ಭರವಸೆ ನೀಡಿದರು.
ನಗರಾಭಿವೃದ್ಧಿ ಹೋರಾಟ ಸಮಿತಿಯವರು ಶನಿವಾರ ಬೃಹತ್ ಪ್ರತಿಭಟನೆ ನಡೆಸಿ ಧೂಳು ನಿರ್ಮೂಲನೆಗೆ ಕ್ರಮ ಕೈಗೊಳ್ಳದಿದ್ದರೆ ನ.21ರಂದು ಸಿಂಧನೂರ ಬಂದ್ಗೆ ಕರೆ ನೀಡಿದ ಹಿನ್ನೆಲೆಯಲ್ಲಿ ನಗರಸಭೆ ಸಭಾಂಗಣದಲ್ಲಿ ಕರೆದಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹೆಚ್ಚುವರಿ ಬಡಾವಣೆಗಳಲ್ಲಿ ಧೂಳು ರಹಿತ ಮರಂ ಹಾಕುವ ಕೆಲಸವನ್ನು ನಾಳೆಯಿಂದಲೇ ಪ್ರಾರಂಭಿಸುವುದಾಗಿ ಹೇಳಿದರು.
ಶಾಶ್ವತ ಪರಿಹಾರಗಳು: ಕನ್ನಾರಿ ಕ್ವಾರಿಯಿಂದಲೇ ಮರಂ ತರುವಂತೆ ನಗರಾಭಿವೃದ್ಧಿ ಹೋರಾಟ ಸಮಿತಿಯ ಪ್ರಧಾನ ಸಂಚಾಲಕ ಹನುಮನಗೌಡ ಬೆಳಗುರ್ಕಿ, ಸಂಚಾಲಕರಾದ ಡಿ.ಎಚ್. ಪೂಜಾರ, ಎಚ್.ಎನ್. ಬಡಿಗೇರ ಮತ್ತಿತರ ಮುಖಂಡರು ಒತ್ತಾಯಿಸಿದಾಗ ಅದೇ ಮರಂನ್ನು ಹಾಕಿಸುವುದಾಗಿ ಮತ್ತು ನಗರಾಭಿವೃದ್ಧಿಗೆ ಕೈಗೊಳ್ಳಬಹುದಾದ ಶಾಶ್ವತ ಪರಿಹಾರಗಳ ಕುರಿತು ಬಾದರ್ಲಿ ಸಭೆಗೆ ವಿವರಿಸಿದರು.
ಸೂಚನೆ: ರಾಯಚೂರು- ಗಂಗಾವತಿ ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚಲು ನಾಳೆಯಿಂದಲೇ ಕ್ರಮಕೈಗೊಳ್ಳುವಂತೆ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ನಾಗರಾಜರಿಗೆ ಸಭೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾಧಿಕಾರಿ ಎಸ್.ಎಂ. ನಾಗರಾಜ ಸೂಚಿಸಿದರು.
ಹಳೆಬಜಾರ ರಸ್ತೆ ಸುಧಾರಣೆಗೆ ಈಗಾಗಲೇ ಟೆಂಡರ್ ಕರೆಯಲಾಗಿದ್ದು, ಡಿ.3ರಿಂದ ಕಾಮಗಾರಿ ಆರಂಭವಾಗಲಿದೆ ಎಂದು ನಗರಸಭೆ ಅಧ್ಯಕ್ಷ ಸೈಯದ್ ಜಾಫರ್ ಅಲಿ ಜಾಗೀರದಾರ ಭರವಸೆ ನೀಡಿದರು. ಕುಷ್ಟಗಿ, ರಾಯಚೂರು- ಗಂಗಾವತಿ ಮುಖ್ಯರಸ್ತೆಗಳಲ್ಲಿ ಮೂತ್ರಾಲಯಗಳನ್ನು ಕಟ್ಟಿಸಲು ತೀರ್ಮಾನಿಸಲಾಗಿದ್ದು, ಜಿಲ್ಲಾಧಿಕಾರಿ ಸಹ ಅನುಮತಿ ನೀಡಿದ್ದಾರೆ. ಇಷ್ಟರಲ್ಲೇ ಕೆಲಸಗಳು ಆರಂಭಗೊಳ್ಳುವವು ಎಂದು ಜಾಫರ್ ವಿವರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

