'ಕನಕದಾಸರ ಮೌಲ್ಯ ದಾರಿದೀಪ'
ಸಿಂಧನೂರು: ಮಹಾನ್ ಮಾನವತಾವಾದಿ ಸಂತ ಕನಕದಾಸರು ಈ ನಾಡು ಕಂಡ ಮಹಾತ್ಮರು. ಜಾತಿಯ ವಿಷ ವರ್ತುಲದಲ್ಲಿ ಮುಳುಗಿರುವ ಇಂದಿನ ಸಮಾಜಕ್ಕೆ ಅವರ ತತ್ವ ಮತ್ತು ಆದರ್ಶಗಳು ದಾರಿದೀಪ ಎಂದು ಗುಲ್ಬರ್ಗ ವಿಭಾಗದ ಎನ್ನೆಸ್ಸೆಸ್ ಸಂಯೋಜನಾಧಿಕಾರಿ, ಪ್ರಾಚಾರ್ಯ ಎಸ್.ಶಿವರಾಜ್ ಹೇಳಿದರು.
ಜವಳಗೇರಾದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕನಕದಾಸ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನಕದಾಸರು ಸಮಾಜದ ಓರೆ ಕೋರೆಗಳನ್ನು ತಿದ್ದಿದ ಅವರ ಕೀರ್ತನೆಗಳು 5 ಶತಮಾನಗಳು ಕಳೆದಿದ್ದರೂ ಇಂದಿಗೂ ಪ್ರಸ್ತುತವಾಗಿವೆ ಎಂದರು.
ಡಾ.ನಾರಾಯಣ ಉಪನ್ಯಾಸ ನೀಡಿದರು. ಕಾಲೇಜು ಅಭಿವದ್ಧಿ ಸಮಿತಿ ಉಪಾಧ್ಯಕ್ಷ ಮಲ್ಲಿಕಾರ್ಜುನಗೌಡ, ಪ್ರೌಢಶಾಲೆಯ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ನಾಸೀರ್ಸಾಬ ಅತಿಥಿಗಳಾಗಿ ಭಾಗವಹಿಸಿದ್ದರು.
ಉಪನ್ಯಾಸಕರಾದ ಬಸವಲಿಂಗಯ್ಯಸ್ವಾಮಿ, ಶಂಕ್ರಪ್ಪ ಯಾಳ್ಗಿ, ಇಂದುಮತಿ ಮತ್ತು ಶೀಲಾ ಡಿ.ಎನ್. ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಶಿವಪ್ಪ, ತಿಮ್ಮಣ್ಣ, ಕರಿಯಮ್ಮ ಮತ್ತು ಬಸೀರಾಬೇಗಂ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮುನೀರಾಬೇಗಂ ಸ್ವಾಗತಿಸಿ, ಅಶ್ವಿನಿ ನಿರೂಪಿಸಿ, ಶಾಲಿನಿ ವಂದಿಸಿದಳು.
ನಿಸರ್ಗ ಜನಶಕ್ತಿ: ನಗರದ ಎಪಿಎಂಸಿ ಸಭಾಂಗಣದಲ್ಲಿ ನಿಸರ್ಗ ಜನಶಕ್ತಿ ಆಗ್ರೋಟಿಕ್ನಿಂದ ಹಮ್ಮಿಕೊಂಡಿದ್ದ ಕನಕದಾಸ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ನಿಸರ್ಗ ಜನಶಕ್ತಿ ಆಗ್ರೋಟೆಕ್ ಸಂಸ್ಥಾಪಕ ಜಿ.ಎಸ್. ಹೂಗಾರ ಮಾತನಾಡಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಆಗ್ರೋಟೆಕ್ನ ಹಿರಿಯ ನಿರ್ದೇಶಕ ಎಂ.ತಿಪ್ಪೇಸ್ವಾಮಿ ಪಾಲ್ಗೊಂಡಿದ್ದರು. ಕೆ.ಪ್ರಭಾವತಿ, ನಾಗರತ್ನಮ್ಮ, ಗಿರಿಜಮ್ಮ, ಡಾ.ಕನಕಪ್ಪ ಆಗ್ರೋಟೆಕ್ನ ವ್ಯವಸ್ಥಾಪಕ ಮುಜಾವರ, ಕ್ಲರ್ಕ್ ಬೂದೇಶ, ದೇವರಾರಾಜ, ರಾಜಾಸಾಬ ಭಾಗವಹಿಸಿದ್ದರು. ಅಂದಾನಮ್ಮ ಪ್ರಾರ್ಥಿಸಿದರು. ಮುರುಗೇಶ ಹಿರೇಮಠ ಸ್ವಾಗತಿಸಿದರು. ದೀಪಾ ಸಾಲಿಮಠ ನಿರೂಪಿಸಿದರು.
ಅನಿಕೇತನ ಕಾಲೇಜು: ನಗರದ ಅನಿಕೇತನ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ದಾಸಶ್ರೇಷ್ಠ ಕನಕ ಜಯಂತಿಯನ್ನು ಆಚರಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಡಿ.ಎಚ್. ಕಂಬಳಿ ಮಾತನಾಡಿದರು. ಮುಖ್ಯ ಅತಿಥಿಯಾಗಿ ಡಾ. ತಾಹೀರ್ ಅಲಿ ಭಾಗವ ಹಿಸಿದ್ದರು. ಈ ವೇಳೆ ಕಾಲೇಜು ಪ್ರಾಚಾರ್ಯ ವೈ.ಎಚ್. ರಕ್ಕಸಗಿ, ಉಪನ್ಯಾಸಕರಾದ ಬಸವರಾಜ ಜವಳಗೇರಾ, ಹನುಮೇಶ, ಪ್ರವೀಣ, ವಿದ್ಯಾರ್ಥಿಗಳಾದ ರಮೇಶ, ಶಿವಗಂಗಮ್ಮ ಮಾತನಾಡಿದರು. ವಿದ್ಯಾರ್ಥಿಗಳು ಭಾಗವಹಿಸಿದ್ದರು.
--
ಹೊನ್ನಳ್ಳಿ ಪಿಡಿಒ ವಿರುದ್ಧ ದೂರು
ಲಿಂಗಸ್ಗೂರು: ತಾಲೂಕಿನ ಹೊನ್ನಳ್ಳಿ ಗ್ರಾಪಂ ವ್ಯಾಪ್ತಿಯ ಯರಡೋಣಿಯಲ್ಲಿ ಕೂಲಿಕಾರರಿಗೆ ಕೂಲಿ ಕೆಲಸ ನೀಡುವಲ್ಲಿ ಪಿಡಿಒ ಸುಳ್ಳು ಹೇಳುತ್ತಾ ವಿಳಂಬ ಮಾಡುತ್ತಿದ್ದು, ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಮುಖಂಡರು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಮನವಿ ಮಾಡಿದ್ದಾರೆ.
ಯರಡೋಣಿ ಗ್ರಾಮದಲ್ಲಿ ಸುಮಾರು 90 ಜನ ಉದ್ಯೋಗಕ್ಕಾಗಿ ಅ.9ರಂದು ಗ್ರಾಪಂಗೆ ಅರ್ಜಿ ಸಲ್ಲಿಸಿದ್ದು, ದಲಿತ ಕೂಲಿಕಾರರು ಕೆಲಸವಿಲ್ಲದೆ ವಲಸೆ ಹೋಗುವಂತಾಗಿದೆ. ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನೀಡುವಲ್ಲಿ ಗ್ರಾಪಂ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಈ ಕುರಿತು ಕೂಲಿಕಾರ್ಮಿಕರು ತಾಪಂ ಅಧಿಕಾರಿಗಳಿಗೆ ಮನವಿ ಮಾಡಿದರೂ ಗಮನ ಹರಿಸಿಲ್ಲ. ಗ್ರಾಪಂ ರಾಜಕೀಯ ಪ್ರಭಾವಿ ವ್ಯಕ್ತಿಗಳಿಗೆ ಕೆಲಸ ಕೊಟ್ಟು ಯಂತ್ರದ ಮೂಲಕ ಕೆಲಸ ನಿರ್ವಹಿಸುತ್ತಿದ್ದಾರೆ.
ಕೇಂದ್ರ ಸರ್ಕಾರ ಕೂಲಿ ಕಾರ್ಮಿಕರು ಗುಳೆ ಹೋಗುವುದನ್ನು ತಪ್ಪಿಸಲು ಉದ್ಯೋಗ ಖಾತ್ರಿ ಯೋಜನೆ ಜಾರಿಗೆ ತಂದಿದ್ದು, ಆದರೆ ಅಧಿಕಾರಿಗಳು ಸರಿಯಾದ ರೀತಿಯಲ್ಲಿ ಬಳಕೆ ಮಾಡದ ಪರಿಣಾಮ ಕೂಲಿಕಾರರು ಗುಳೆ ಹೋಗುತ್ತಿದ್ದಾರೆ. ಕಾರಣ ಗ್ರಾಪಂ ಪಿಡಿಒ ವಿರುದ್ಧ ಕೂಡಲೇ ಕ್ರಮ ಜರುಗಿಸಿ ಕೂಲಿಕಾರ್ಮಿಕರಿಗೆ ಕೆಲಸ ನೀಡಲು ಕ್ರಮ ಕೈಗೊಳ್ಳಬೇಕೆಂದು ದಸಂಸ ಮುಖಂಡರಾದ ಹುಲಗಪ್ಪ ಕುಣಿಕಲ್ಲೂರ, ದುರುಗಪ್ಪ ಡಬ್ಬೇರಮಡು, ಅಂಬಣ್ಣ ಬೆನಕನಾಳ, ಅಮರೇಶ ಗುಡಿಹಾಳ, ನಾಗಪ್ಪ ನೀರಲಕೇರಿ, ಬೈಲಪ್ಪ ತೆರಬಾವಿ ಸೇರಿದಂತೆ ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

