ರಾಜ್ಯೋತ್ಸವಕ್ಕೆ ತೊಂದರೆ; ಕರವೇ ತೀವ್ರ ಆಕ್ರೋಶ
ಮುದಗಲ್: ಪಟ್ಟಣದಲ್ಲಿ ರಾಜ್ಯೋತ್ಸವ ಆಚರಣೆಗೆ ಕರವೇ ಸಂಘಟನೆಯು ನ.28ರ ದಿನಾಂಕ ನಿಗದಿಪಡಿಸಿ ಪಪಂ ಕಾರ್ಯಾಲಯಕ್ಕೆ ಮಾಹಿತಿ ನೀಡಿದ್ದರೂ ಆಡಳಿತ ವರ್ಗದವರು ಪೆಂಡಾಲ್ ಸಾಮಗ್ರಿಗಳನ್ನು ಅಡ್ಡಲಾಗಿ ಹಾಕುವ ಮೂಲಕ ಅಡ್ಡಿಪಡಿಸಿ ಕರವೇ ಘಟಕದ ಕೆಂಗಣ್ಣಿಗೆ ಗುರಿಯಾದ ಘಟನೆ ಗುರುವಾರ ನಡೆಯಿತು.
ಶಾಲಾ ಮಕ್ಕಳು, ಜನಪ್ರತಿನಿಧಿಗಳು ಹಾಗೂ ಪ್ರಗತಿಪರ ಸಂಘಟನೆಗಳ ಜೊತೆಗೂಡಿ ರಾಜ್ಯೋತ್ಸವದ ಆಚರಣೆಗೆ ಕರವೇ ಪಪಂ ಸಭಾಂಗಣದ ಬಳಕೆಗಾಗಿ ಮನವಿ ಮಾಡಿತ್ತು. ಆದರೂ ಡಿ.1ರಂದು ಲಿಂಗಸ್ಗೂರು ಶಾಸಕ ಮಾನಪ್ಪ ವಜ್ಜಲ್ ಅವರಿಗೆ ಪೌರ ಸನ್ಮಾನ ಕಾರ್ಯಕ್ರಮಕ್ಕಾಗಿ ವೇದಿಕೆ ಸಿದ್ಧಗೊಳಿಸಲು ಪೆಂಡಾಲ್ಗಳನ್ನು ಕರವೇ ನಿರ್ಮಾಣ ಮಾಡಿದ ಧ್ವಜ ಸ್ತಂಭದ ಹತ್ತಿರ ಹಾಕುವುದರ ಮೂಲಕ ರಾಜ್ಯೋತ್ಸವಕ್ಕೆ ತೊಂದರೆ ಮಾಡಿದ್ದಾರೆಂದು ಕರವೇ ಅಧ್ಯಕ್ಷ ಎಸ್.ಎ. ನಯೀಮ್ ಆರೋಪಿಸಿದ್ದಾರೆ.
ಅಧಿಕಾರಿಗಳಿಗೆ ತರಾಟೆ: ಮೆರವಣಿಗೆ ಮೂಲಕ ಪಪಂ ಸಭಾಂಗಣದೊಳಗೆ ಪ್ರವೇಶಿಸುತ್ತಿದ್ದಂತೆ ಪೆಂಡಾಲ್ ಸಾಮಗ್ರಿಗಳನ್ನು ನೋಡಿದ ಕರವೇ ಕಾರ್ಯಕರ್ತರು ಕೂಡಲೇ ಪಪಂ.ಗೆ ಮುತ್ತಿಗೆ ಹಾಕಿ ಆಡಳಿತ ಮಂಡಳಿಗೆ ಹಿಡಿಶಾಪ ಹಾಕಿ ಮನಬಂದಂತೆ ತರಾಟೆಗೆ ತೆಗೆದುಕೊಂಡರು.
ನನಗಾವುದೂ ಗೊತ್ತಿಲ್ಲ, ಪೆಂಡಾಲ್ಗೂ ನನಗೂ ಯಾವುದೇ ರೀತಿ ಸಂಬಂಧವಿಲ್ಲವೆಂಬಂತೆ ಹಾರಿಕೆ ಉತ್ತರ ನೀಡಿ ಜಾರಿಕೊಂಡರು. ನಂತರ ಪಪಂ ಸಿಬ್ಬಂದಿ ವರ್ಗದವರು ಪೆಂಡಾಲ್ ಸಾಮಾಗ್ರಿಗಳನ್ನು ಬೇರೆಡೆ ಸ್ಥಳಾಂತರಗೊಳಿಸಿ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಅನುಕೂಲ ಮಾಡಿಕೊಟ್ಟರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

