ಪ್ರಭಾರಿ ಪಿಡಿಒ ಮುಂದುವರಿಸಿ
0ಲಿಂಗಸ್ಗೂರು: ತಾಲೂಕಿನ ದೇವರಭೂಪೂರ ಗ್ರಾಪಂ ಪ್ರಭಾರಿ ಅಭಿವೃದ್ಧಿ ಅಧಿಕಾರಿಗಳನ್ನು ಮುಂದುವರಿಸಬೇಕೆಂದು ಒತ್ತಾಯಿಸಿ ಗ್ರಾಮಸ್ಥರು ಶನಿವಾರ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ವೀರಭದ್ರಪ್ಪ ಅವರಿಗೆ ಮನವಿ ಸಲ್ಲಿಸಿದರು.
ಗ್ರಾಪಂ ಪಿಡಿಒ ನಾಗರತ್ನ ಚಲುವಾದಿ ಅವರನ್ನು ಕೆಲ ಪಟ್ಟಭದ್ರ ಹಿತಾಸಕ್ತಿಗಳ ಮನವಿ ಮೇರೆಗೆ ಶೋಭಾರಾಣಿ ಅವರನ್ನು ಅಭಿವೃದ್ಧಿ ಅಧಿಕಾರಿಯನ್ನಾಗಿ ನೇಮಿಸಿದ್ದು, ಶೋಭಾರಾಣಿ ಅವರು ಬೇರೆ ಗ್ರಾಪಂ.ಗೆ ಬೇಡವಾಗಿದ್ದಾರೆ. ಅಂಥವರನ್ನು ದೇವರಭೂಪೂರ ಗ್ರಾಪಂಗೆ ನೇಮಕ ಮಾಡಿದರೆ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಳ್ಳಲಿವೆ. ಗ್ರಾಪಂ ಕಾರ್ಯದರ್ಶಿ ಹಾಗೂ ಪ್ರಭಾರಿ ಪಿಡಿಒ ನಾಗರತ್ನ ಚಲುವಾದಿ ಅವರು ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮತ್ತು ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ. ಕಾರಣ ಶೋಭಾರಾಣಿ ಅವರ ನೇಮಕ ರದ್ದುಗೊಳಿಸಿ ಸದರಿ ಪ್ರಭಾರಿ ಪಿಡಿಒ ಅವರನ್ನು ಮುಂದುವರಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಈ ವೇಳೆ ಗ್ರಾಪಂ ಅಧ್ಯಕ್ಷೆ ಹುಲಗಮ್ಮ, ಉಪಾಧ್ಯಕ್ಷ ಬಸವರಾಜ ಆದನಗೌಡ, ಸದಸ್ಯರಾದ ಮುದುಕಪ್ಪ, ಸಿದ್ದಯ್ಯಸ್ವಾಮಿ, ಅಮರೇಶ, ತಿಮ್ಮಯ್ಯ, ಚನ್ನವೀರಪ್ಪ, ಜಯಲಕ್ಷ್ಮೀ ಸಂಜೀವಪ್ಪ, ಬಾಲಮ್ಮ ಶರಣಪ್ಪ, ದುರುಗಪ್ಪ, ಮಹಾದೇವಪ್ಪ, ಅಮರಪ್ಪ, ಪ್ರಭುದೇವಪ್ಪ, ಹನುಮವ್ವ ಹುಲಗಪ್ಪ, ಮಲ್ಲಮ್ಮ ಯಂಕಪ್ಪ ಸೇರಿದಂತೆ ಗ್ರಾಮಸ್ಥರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

