ರಾಯಚೂರು

ಧಾರ್ಮಿಕ ಕಾರ್ಯದಿಂದ ನೆಮ್ಮದಿ

Published On :

ಸಿಂಧನೂರು: ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವುದರಿಂದ ನಮ್ಮಲ್ಲಿರುವ ಸಣ್ಣ-ಪುಟ್ಟ ದ್ವೇಷ, ಅಸೂಯೆಗಳನ್ನು ಮರೆತು ಭಾವೈಕ್ಯತೆಯಿಂದ ಬಾಳಲು ಸಹಕಾರಿ. ಇದರಿಂದ ನೆಮ್ಮದಿ ದೊರಕುವುದು ಎಂದು ಮಸ್ಕಿ ಶಾಸಕ ಪ್ರತಾಪಗೌಡ ಪಾಟೀಲ್ ಹೇಳಿದರು.
ತಾಲೂಕಿನ ವೆಂಕಟಗಿರಿಕ್ಯಾಂಪಿನಲ್ಲಿ ಭಕ್ತ ಸದನ ಉದ್ಘಾಟನೆ, ಗಣೇಶ ಗಾಯತ್ರಿ ಶ್ರೀದೇವಿ ಉತ್ಸವ,ಧರ್ಮಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಧಾರ್ಮಿಕ ಕಾರ್ಯಗಳಿಗೆ ಅನುಕೂಲಕ್ಕಾಗಿ 10 ಲಕ್ಷದಲ್ಲಿ ಭಕ್ತ ಸದನ ನಿರ್ಮಾಣವಾಗಿರುವುದು ಈ ಭಾಗದ ಭಕ್ತರಿಗೆ ಅನುಕೂಲವಾಗಲಿದೆ. ಸತತವಾಗಿ ಧಾರ್ಮಿಕ ಕಾರ್ಯಗಳು ನಡೆಯುವುದರಿಂದ ಮಾನಸಿಕ ಶಾಂತಿ ದೊರೆಯಲಿದೆ ಎಂದರು.
ಯುವಕಾಂಗ್ರೆಸ್ ತಾಲೂಕ ಉಪಾಧ್ಯಕ್ಷ ಬಸವರಾಜ ಹಿರೇಗೌಡ್ರು ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಅತ್ಯುನ್ನತ ಸ್ಥಾನವಿದೆ. ಮಠ- ಮಾನ್ಯಗಳು ಜನತೆಯಲ್ಲಿ ಬೆಸುಗೆ ಬೆಳೆಸುವಂತಹ ಕಾರ್ಯ ಮಾಡುತ್ತಿವೆ. ಭಕ್ತಿ ಇರುವುದರಿಂದ ಇನ್ನೂ ನಮ್ಮಲ್ಲಿ ದೇವರ ಬಗ್ಗೆ ಭಯವಿದೆ. ಮಠ ಮಾನ್ಯಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತೇವೆ. ಜೀವನದಲ್ಲಿ ಜಂಜಾಟಗಳಿಂದ ದೂರವಾಗಲು ಮಠ- ಮಾನ್ಯಗಳ ಮೊರೆ ಹೋಗುತ್ತಿದ್ದೇವೆ ಎಂದರು.
ಕರಿಬಸವ ನಗರದ ಸೋಮನಾಥ ಶಿವಾಚಾರ್ಯರು, ಶಾಂತಮಲ್ಲ ಶಿವಾಚಾರ್ಯರು ಮಾತನಾಡಿದರು. ಜೆಡಿಎಸ್ ಬಳ್ಳಾರಿ ಜಿಲ್ಲಾಧ್ಯಕ್ಷ ನಾರಾ ಸೂರ್ಯನಾರಾಯಣರೆಡ್ಡಿ, ಮಾಜಿ ಶಾಸಕ ವೆಂಕಟರಾವ ನಾಡಗೌಡ, ಕೆಜೆಪಿ ಮುಖಂಡ ಬಸವರಾಜ ದಡೇಸ್ಗೂರು, ಕಾಂಗ್ರೆಸ್ ಮುಖಂಡ ಪಂಪನಗೌಡ ಬಾದರ್ಲಿ, ನೀಲಕಂಠಯ್ಯ ತಾತನವರು, ದೊಡ್ಡಬಸವಚಾರ್ಯ ತಾತನವರು, ಶರಣಯ್ಯ ತಾತನವರು, ನಂಜುಂಡಯ್ಯ, ಸಂಗಯ್ಯಸ್ವಾಮಿ ಸರಗಣಾಧೀಶ್ವರಮಠ, ಶಾಶ್ವತಸ್ವಾಮಿ ಮುಕ್ಕುಂದಿಮಠ, ವಿಶ್ವನಾಥಯ್ಯ ಸ್ವಾಮಿ ಹಾಗೂ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.