'ಶಾಸಕರಿಂದ ಏಕಪಕ್ಷೀಯ ನಿರ್ಧಾರ'
ಸಿಂಧನೂರು: ಕಾಡಾ ಇಲಾಖೆಯಿಂದ ತಾಲೂಕಿನ ರಸ್ತೆಗಳ ಅಭಿವೃದ್ಧಿಗೆ 2 ಕೋಟಿ 90ಲಕ್ಷ ಮಂಜೂರಾಗಿದ್ದು ಕಾಂಗ್ರೆಸ್ ಪಕ್ಷದ ನೀರು ಬಳಕೆದಾರರ ಸಂಘಗಳಿಗೆ ಮಾತ್ರ ಕಾಮಗಾರಿಗಳನ್ನು ನೀಡಲಾಗಿದೆ ಎಂದು ಜೆಡಿಎಸ್ ವಕ್ತಾರ ಬಸವರಾಜ ನಾಡಗೌಡ ಆರೋಪಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ತಾಲೂಕಿನಲ್ಲಿ 90 ಅರ್ಹ ನೀರು ಬಳಕೆದಾರರ ಸಂಘಗಳಿವೆ. ಆದರೆ ತಮಗೆ ಬೇಕಾದ ಹಾಗೂ ತಮ್ಮ ಕಾರ್ಯಕರ್ತರಿರುವ ಸುಮಾರು 65 ನೀರು ಬಳಕೆದಾರರ ಸಂಘಗಳಿಗೆ 2.65 ಲಕ್ಷ ಹಣದ ಕಾಮಗಾರಿಯನ್ನು ಶಾಸಕರ ಅಣತೆಯಂತೆ ಕಾಡಾ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ರಮೇಶ ನೀಡಿದ್ದಾರೆ.
ಕಾಮಗಾರಿ ಕೆಲಸದ ಆದೇಶ: ಈ ಕುರಿತು ಅವರನ್ನು ಕೇಳಿದರೆ ಶಾಸಕ ಹಂಪನಗೌಡ ಬಾದರ್ಲಿ ಸೂಚನೆಯಂತೆ ಕಾಮಗಾರಿಗಳನ್ನು ನೀಡಲು ತೀರ್ಮಾನಿಸಲಾಗಿದೆ. ಮುನಿರಾಬಾದ್ ಕಾಡಾ ಕಚೇರಿಯ ಅಂತಿಮ ನಿರ್ಣಯದ ನಂತರ ಕಾಮಗಾರಿ ಕೆಲಸದ ಆದೇಶಗಳನ್ನು ನೀಡಲಾಗುವುದು ಎಂದು ಹೇಳುತ್ತಾರೆ. ಈ ರೀತಿ ಶಾಸಕರು ಏಕಪಕ್ಷೀಯವಾಗಿ ಕಾಮಗಾರಿಗಳನ್ನು ವಹಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
20 ಲಕ್ಷ ಉಳಿಕೆ: ರಾಮತ್ನಾಳ ನೀರು ಬಳಕೆದಾರರ ಸಂಘದವರಿಗೆ ಬಾದರ್ಲಿ ಹೋಬಳಿಯ ಕೆಲಸವನ್ನು ನಿರ್ವಹಿಸಲು ಪಟ್ಟಿ ತಯಾರಿಸಿದ್ದಾರೆ. ತಮಗೆ ಬೇಕಾದ ಸಂಘಗಳಿಗೆ ನಾಲ್ಕೈದು ಕೆಲಸಗಳನ್ನು ನೀಡಿದ್ದಾರೆ. ಅರ್ಹ 90 ಸಂಘಗಳಿಗೆ ತಲಾ 3 ಲಕ್ಷದಂತೆ ಆಯ್ಕೆ ರಸ್ತೆ ಕಾಮಗಾರಿ ನೀಡಿದರೂ 2.70 ಲಕ್ಷ ವಿನಿಯೋಗಿಸಬಹುದಾಗಿದೆ. 20 ಲಕ್ಷ ಉಳಿಯುತ್ತದೆ. ಎಲ್ಲಾ ಸಂಘಗಳಿಗೂ ಕೆಲಸ ನೀಡಿದಂತಾಗುತ್ತದೆ. ಆದರೆ ಶಾಸಕರು ತಮ್ಮ ಇಚ್ಛೆಯಂತೆ ಕಾರ್ಯಕರ್ತರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಕಾಮಗಾರಿ ನಿರ್ವಹಿಸಲು ಪಟ್ಟಿ ತಯಾರಿಸಿರುವುದು ಸರಿಯಲ್ಲ. ಪಟ್ಟಿ ರದ್ದುಪಡಿಸದಿದ್ದರೆ ಕಾಡಾ ಕಚೇರಿ ಮುಂದೆ ಜೆಡಿಎಸ್ ಕಾರ್ಯಕರ್ತರು ಧರಣಿ ಸತ್ಯಾಗ್ರಹ ನಡೆಸುತ್ತಾರೆ ಎಂದು ಎಚ್ಚರಿಸಿದರು.
ವಿವಿಧ ಗ್ರಾಮಗಳ ನೀರು ಬಳಕೆದಾರರ ಸಂಘಗಳ ಅಧ್ಯಕ್ಷರುಗಳಾದ ಅಮರೇಗೌಡ ಜವಳಗೇರಾ, ಕೃಷ್ಣಮೂರ್ತಿ ಗೊರೇಬಾಳ, ದೇವೇಂದ್ರಪ್ಪ ಯಾಪಲಪರ್ವಿ, ಅಯ್ಯನಗೌಡ ಆಯನೂರು ಸೇರಿದಂತೆ ಸುಮಾರು 20 ಸಂಘಗಳ ಅಧ್ಯಕ್ಷರುಗಳು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

