ಮತ್ತೆ ರದ್ದಾದ ಯುಜಿಡಿ ಟೆಂಡರ್
ಕನ್ನಡಪ್ರಭ ವಾರ್ತೆ , ಸಿಂಧನೂರು , ಸೆ.20
ನಗರದ ಜನತೆಯ ಬಹುನಿರೀಕ್ಷಿತ, ಅಪೇಕ್ಷಿತ ಯೋಜನೆ ಒಳಚರಂಡಿ ಕಾಮಗಾರಿಗೆ ಟೆಂಡರ್ ಬಿಡ್ದಾರರು ಬರಲಿಲ್ಲವೆಂದು ಮತ್ತೆ ರದ್ದಾಗಿ ನಾಗರಿಕರಲ್ಲಿ ತೀವ್ರ ನಿರಾಸೆ ಮೂಡಿಸಿದೆ.
ಪರಿಸರ ನೈರ್ಮಲ್ಯ ಮತ್ತು ಶುದ್ಧ ಕುಡಿವ ನೀರೊದಗಿಸುವ ಹಿನ್ನೆಲೆಯಲ್ಲಿ ರಾಜಕೀಯ ಮುಖಂಡರು ತಮ್ಮ ತಮ್ಮ ಅಧಿಕಾರದಲ್ಲಿ ಒಳಚರಂಡಿ ಮತ್ತು ಶುದ್ಧ ಕುಡಿವ ನೀರಿನ ಕಾಮಗಾರಿಗೆ ಮಂಜೂರು ಪಡೆದು ಐದಾರು ವರ್ಷಗಳೇ ಗತಿಸಿವೆ. ಆದರೆ ಕಾಮಗಾರಿ ಪ್ರಾರಂಭಿಸಲು ಕಳೆದ ವರ್ಷದಿಂದ ಮೂರು ಬಾರಿ ಟೆಂಡರ್ ಕರೆದಿದ್ದರೂ ಒಮ್ಮೆಯೂ ಟೆಂಡರ್ ಸ್ವೀಕಾರವಾಗಿಲ್ಲ. ಇದು ನಾಗರಿಕರು ಮತ್ತು ಸಣ್ಣಪುಟ್ಟ ಗುತ್ತಿಗೆದಾರರಲ್ಲಿ ಅಚ್ಚರಿ ಮೂಡಿಸಿದೆ.
ಮತ್ತೆ 15 ದಿನ ಕಾಲಾವಕಾಶ: ವೆಂಕಟರಾವ್ ನಾಡಗೌಡ ಶಾಸಕರಾಗಿದ್ದಾಗ ಎರಡು ಬಾರಿ ಟೆಂಡರ್ ಕರೆಯಲಾಗಿತ್ತು. ಒಂದು ಬಾರಿ ಇಬ್ಬರು ಟೆಂಡರ್ ಹಾಕಿದ್ದರು. ಅಧಿಕ ಪ್ರಮಾಣದ ಮೊತ್ತ ನಮೂದಿಸಿ ಟೆಂಡರ್ ಹಾಕಿದ ಕಾರಣ ರದ್ದುಪಡಿಸಿ ಪುನಃ ಎರಡನೇ ಟೆಂಡರ್ ಕರೆದಿದ್ದರು. ಪುನಃ ಟೆಂಡರ್ ಹಾಕಲಿಲ್ಲ. ಸೆ.16ರಂದು ಕೊನೆಯ ದಿನ ನಿಗದಿಪಡಿಸಿ ನಗರಸಭೆ ಪೌರಾಯುಕ್ತರು 33 ಕೋಟಿ ಮೊತ್ತದಲ್ಲಿ ನಿರ್ವಹಿಸಬಹುದಾದ ಕಾಮಗಾರಿಯ ಟೆಂಡರ್ ಕರೆದಿದ್ದರು. ಆದರೆ ಐವರು ತಲಾ 20 ಸಾವಿರ ಠೇವಣಿ ಕಟ್ಟಿ ಅರ್ಜಿ ಪಡೆದಿದ್ದರು. ಆದರೆ ಒಬ್ಬರೂ ಟೆಂಡರ್ ಅರ್ಜಿಗಳನ್ನು ಭರ್ತಿ ಮಾಡಿ ಕೊನೆಯ ದಿನಾಂಕದೊಳಗೆ ಸಲ್ಲಿಸಿಲ್ಲ. ಹೀಗಾಗಿ ಮತ್ತೆ 15 ದಿನಗಳ ಕಾಲಾವಕಾಶ ನೀಡಲಾಗಿದೆ.
ಈಗಲೇ ಎಚ್ಚೆತ್ತುಕೊಳ್ಳಿ: ಯುಜಿಡಿ ಕಾಮಗಾರಿ ಪ್ರಾರಂಭಿಸುವ ಹಿನ್ನೆಲೆಯಲ್ಲಿ ಪ್ರತಿಯೊಂದು ವಾರ್ಡ್ನ ಓಣಿಗಳಲ್ಲಿ ನಾಗರಿಕರು ನಿತ್ಯ ಸಂಚರಿಸಲು ನರಕಯಾತನೆ ಅನುಭವಿಸುತ್ತಿದ್ದು, ಶಾಸಕ ಹಂಪನಗೌಡ ಬಾದರ್ಲಿ ತೀವ್ರ ನಿರ್ಲಕ್ಷಿಸುತ್ತಿದ್ದಾರೆ. ಅದಕ್ಕಾಗಿ ಜನತೆ, “«ÛsÚVèsÚÁÚß ಯುಜಿಡಿ ಯೋಜನೆ ಹೆಸರೇಳುತ್ತಾ ನಗರದಲ್ಲಿ ಏನೊಂದೂ ಅಭಿವೃದ್ಧಿ ಕಾಮಗಾರಿ ಕೈಗೊಳ್ಳದ ಕಾರಣ ಅವರನ್ನು ಸೋಲಿಸಿದ್ದೇವೆ. ಹಂಪನಗೌಡರು ಇದೇ ಮಾತನ್ನು ಹೇಳಿದರೆ ಅವರು ಕೂಡ ಮುಂದಿನ ದಿನಗಳಲ್ಲಿ ಕಹಿ ಅನುಭವ Dy·æÞOÛVÚß}Ú¡¥æ’ ಎಂದು ನಿಷ್ಠುರವಾಗಿಯೇ ಹೇಳುತ್ತಿದ್ದಾರೆ.
ನಗರ ಪ್ರದಕ್ಷಿಣೆ ಹಾಕಲಿ: ನಗರದ ಕೋರ್ಟ್ ಪಕ್ಕದಲ್ಲಿ ವಿಶೇಷವಾಗಿ ನ್ಯಾಯಾಧೀಶರ ಮನೆಯ ಮುಂಭಾಗದ ರಸ್ತೆ ಕಳೆದ ತಿಂಗಳಿಂದ ಕೆಸರುಗದ್ದೆಯಾಗಿದೆ. ಮಹೆಬೂಬಿಯಾ ಕಾಲೋನಿ, ಆದರ್ಶ ಕಾಲೋನಿ ರಸ್ತೆಗಳಲ್ಲಿ ಪಾದಾಚಾರಿಗಳು ನರಕಯಾತನೆ ಅನುಭವಿಸುತ್ತಿದ್ದಾರೆ. ಕೆಲವರು ಮನೆಯಿಂದ ಹೊರಗೆ ಬರುವುದನ್ನೇ ಬಿಟ್ಟಿದ್ದಾರೆ. ಗಂಗಾನಗರ, ಬಸವನಗರ, ಎ.ಕೆ.ಗೋಪಾಲ ನಗರ, ಜನತಾ ಕಾಲೋನಿ, ಸುಕಾಲಪೇಟೆಯಲ್ಲಿ ಶಾಸಕರು ಪ್ರದಕ್ಷಿಣೆ ಹಾಕಿ ವೀಕ್ಷಿಸಲಿ ಎಂದು ನಗರಸಭೆ ಸದಸ್ಯರು ಸೇರಿದಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಯುಜಿಡಿ ಯೋಜನೆಗೆ ಕಾಯಬೇಡಿ: ಕಾಂಗ್ರೆಸ್ ಮುಖಂಡರಾದ ಎಚ್.ರಾಮನಗೌಡ, ಲೋಕನಗೌಡ, ಜವಳಗೇರಾ ರುದ್ರಗೌಡ ಮತ್ತಿತರರು ಮಾತನಾಡಿ, ಶಾಸಕರು ಯುಜಿಡಿ ಯೋಜನೆಗೆ ಕಾಯದೇ ತಕ್ಷಣ ಹೆಚ್ಚುವರಿ ಬಡಾವಣೆಗಳಲ್ಲಿ ಮರಂ ಹಾಕುವ ಕೆಲಸವನ್ನು ಪ್ರಾರಂಭಿಸುವಂತೆ ಮನವಿ ಮಾಡಿದ್ದಾರೆ.
ಶಾಸಕರು, ಮಾಜಿ ಶಾಸಕರು, ಮಾಜಿ ಸಂಸದರು, ನಗರಸಭೆ ಅಧ್ಯಕ್ಷರು ಟೆಂಡರ್ ಹಾಕುವ ಗುತ್ತೇದಾರರಿಗೆ ಟೆಂಡರ್ ಹಾಕುವ ಪೂರ್ವ ಕರೆದ ಸಭೆಯಲ್ಲಿ ಭಾಗವಹಿಸಿ ಅವರಿಗೆ ವಿಶ್ವಾಸ ಬರುವಂತೆ ಉತ್ತಮ ಕೆಲಸ ಮಾಡಿದರೆ ಸಹಕಾರ ಕೊಡುವುದಾಗಿ ಭರವಸೆ ನೀಡಿದರೆ, ಗುತ್ತಿಗೆದಾರರು ಟೆಂಡರ್ ಹಾಕಲು ಬರಬಹುದಾಗಿತ್ತು ಎಂದು ಹೆಸರೇಳಲಿಚ್ಛಿಸದ ಗುತ್ತಿಗೆದಾರರೊಬ್ಬರು ಹೇಳಿದರು.
ರಸ್ತೆ, ಚರಂಡಿ ಕಾಮಗಾರಿ ಕೈಗೊಳ್ಳಿ: ಕಳೆದ ಐದಾರು ತಿಂಗಳ ಹಿಂದೆ 2012- 13ನೇ ಸಾಲಿನ ಎಸ್ಎಫ್ಸಿ ಯೋಜನೆಯಡಿಯಲ್ಲಿ 60 ಲಕ್ಷದ ಕೆಲಸಕ್ಕೆ ಜಿಲ್ಲಾಧಿಕಾರಿಗಳು ಅನುಮತಿ ನೀಡಿದ್ದು, ಪ್ರಸ್ತುತ ತಟಸ್ಥಗೊಳಿಸಲಾಗಿದೆ. ನಗರದ 24ನೇ ವಾರ್ಡ್, 11, 7, 1, 2, 21, 22, 13, 26 ಮತ್ತಿತರ ವಾರ್ಡ್ಗಳಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕೆ ಕ್ರಿಯಾಯೋಜನೆ ತಯಾರಿಸಲಾಗಿದ್ದು, ಅದನ್ನು ತಕ್ಷಣ ಅನುಷ್ಠಾನಗೊಳಿಸಿದರೆ ಕೆಸರಿನಲ್ಲಿ ಓಡಾಡುವ ಜನರಿಗೆ ಸ್ವಲ್ಪಮಟ್ಟಿಗೆ ಸಮಾಧಾನ ಸಿಗಬಹುದು. ಶಾಸಕರು ಮತ್ತು ನಗರಸಭೆ ಅಧ್ಯಕ್ಷರು ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಎಂದು ನಗರಸಭೆ ಪ್ರತಿಪಕ್ಷದ ನಾಯಕ ಚಂದ್ರಶೇಖರ ಮೈಲಾರ ಒತ್ತಾಯಿಸಿದ್ದಾರೆ.
ಪ್ರಹ್ಲಾದ ಗುಡಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

