ರಾಯಚೂರು

ಆಯುಷ್ ಅರಿವು ಮನೆಮದ್ದು

Published On :

ಲಿಂಗಸ್ಗೂರು: ತಾಲೂಕಿನ ಗೊರೇಬಾಳ ಗ್ರಾಮದಲ್ಲಿ ಜಿಲ್ಲಾ ಆಯುಷ್ ಇಲಾಖೆ ಹಾಗೂ ಸರಕಾರಿ ಆಯುರ್ವೇದ ಚಿಕಿತ್ಸಾಲಯದಿಂದ ಇತ್ತೀಚೆಗೆ ಹಮ್ಮಿಕೊಂಡಿದ್ದ ಆಯುಷ್ ಅರಿವು ಮನೆಮದ್ದು ಕಾರ್ಯಕ್ರಮವನ್ನು ಗ್ರಾಪಂ ಅಧ್ಯಕ್ಷೆ ಅಮರಮ್ಮ ಹರಿಜನ ಉದ್ಘಾಟಿಸಿದರು.
ಸಂಪನ್ಮೂಲವ್ಯಕ್ತಿ ಡಾ. ಚಂದ್ರಶೇಖರ ಸುವರ್ಣಗಿರಿಮಠ ಬಾಗಲವಾಡ, ಮನೆ ಅಂಗಳದಲ್ಲಿ ಸಿಗುವ ತುಳಸಿ, ಅಮೃತಬಳ್ಳಿ, ಲೋಳೆರಸ ಮುಂತಾದ ಔಷಧಿ ಸಸ್ಯಗಳ ಉಪಯೋಗದ ಕುರಿತು ಪರಿಚಸಿದರು ಹಾಗೂ ಅರಿಶಿಣ, ಬೆಳ್ಳೊಳ್ಳಿ, ಹಸಿಶುಂಠಿಗಳಿಂದ ಪಿತ್ತಗಂದೆ, ರಕ್ತದೊತ್ತಡ, ಕೊಲೆಸ್ಟ್ರಾಲ್, ಹುಳಿತೇಗು, ಕೆಮ್ಮು, ನೆಗಡಿಗೆ ಪ್ರಯೋಜನಕಾರಿ ಎಂದರು.
ಆಯುಷ್ ಅಧಿಕಾರಿ ಡಾ.ಬಸವರಾಜ, ವೈದ್ಯಾಧಿಕಾರಿ ಡಾ.ಡಿ.ಎಚ್. ಹುಲ್ಲೂರ, ಅಂಗನವಾಡಿ ಕಾರ್ಯಕರ್ತೆ ಗಿರಿಜಮ್ಮ, ಸೇವಕಿ ಸಜ್ಜಮ್ಮ, ಗ್ರಾಮದ ಸಲೀಂಸಾಬ, ಪ್ರವೀಣಕುಮಾರ, ಅಮರೇಶ ಹಾಲ ಇದ್ದರು.
---

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.