ರಾಯಚೂರು

ಸಂಘದ ಸಭೆ ರದ್ದತಿಗೆ ಒತ್ತಾಯ

Published On :

ರಾಯಚೂರು: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ನೌಕರರ ಪತ್ತಿನ ಸಹಕಾರ ಸಂಘದ ಸೆ.22ರ ಸಭೆಗೆ ಸಂಬಂಧಿಸಿ ಮಾಹಿತಿ ನೀಡದಿರುವುದು ಸೇರಿ ವಿವಿಧ ಕಾರಣಗಳಿಗೆ ನೌಕರರ ಸಂಘದ ಸ್ಥಳೀಯ ಸಮಿತಿ ಪ್ರಮುಖರು ಸಭೆ ಬಹಿಷ್ಕರಿಸಿದ ಪ್ರಸಂಗ ಭಾನುವಾರ ನಡೆಯಿತು.
ಈ ಕುರಿತು ಸಹಕಾರ ಸಂಘದ ಅಧ್ಯಕ್ಷರಿಗೆ ಮನವಿ ಸಲ್ಲಿಸಿರುವ ಸಂಘದ ಪ್ರಮುಖರು, ನಗರದ ಕೆಪಿಟಿಸಿಎಲ್ ಮುಖ್ಯ ಕಚೇರಿಯಲ್ಲಿ ಕರೆದಿದ್ದ ನೌಕರರ ಪತ್ತಿನ ಸಹಕಾರ ಸಂಘದ ಮಹಾಸಭೆ ಕರೆದ ಬಗ್ಗೆ ಸಂಘದ ಸದಸ್ಯರಿಗೆ ಪೂರ್ವ ಮಾಹಿತಿ ನೀಡಿಲ್ಲ ಎಂದಿದ್ದಾರೆ.
ಮನ ಬಂದಂತೆ ಸಾಲ: ಸಂಘದ ಬೈಲಾ ಪ್ರಕಾರ ಪ್ರತಿಯೊಬ್ಬ ಸದಸ್ಯರಿಗೆ ಮಹಾಸಭೆಯನ್ನು ನಡೆಸುತ್ತಿರುವ ಬಗ್ಗೆ 15ದಿನಗಳ ಮುಂಚಿತವಾಗಿ ಮಾಹಿತಿ ನೀಡಬೇಕು ಎಂದಿದೆ. ಅಂಥ ನಿಯಮ ಪಾಲಿಸಿಲ್ಲ. ಸಂಘದ ನಿರ್ದೇಶಕರು ತಮ್ಮ ಮನ ಬಂದಂತೆ ಸಾಲ ನೀಡಿದ್ದಾರೆ. ಸಹಕಾರ ಸಂಘದಲ್ಲಿ ಅವ್ಯವಹಾರಗಳು ನಡೆದಿದ್ದು, ಸಹಕಾರ ಸಂಘಗಳ ನಿಬಂಧಕರಿಗೆ ಈಗಾಗಲೇ ದೂರಲಾಗಿದೆ ಎಂದು ತಿಳಿಸಿದ್ದಾರೆ.
ಸಂಘಕ್ಕೆ ಸ್ವಂತ ಕಟ್ಟಡವಿಲ್ಲ. ಸಂಘದ ಸದಸ್ಯರಿಗೆ ಸಾಲ ನೀಡುವ ವೇಳೆ ಜೇಷ್ಠತಾ ಪಟ್ಟಿ ಸಿದ್ಧಪಡಿಸುತ್ತಿಲ್ಲ. ಸಂಘದವರು ಬೆಂಬಲಿಗರಿಗೆ ಸಾಲ ನೀಡುವ ಕಾರ್ಯ ಮಾಡುತ್ತಿದ್ದಾರೆ. ಸಾಲದ ಮಿತಿಯು ರು. 2ಲಕ್ಷ ಆಗಿದ್ದರೂ, ಅದಕ್ಕೆ ಮೀರಿ ಸಾಲ ಮಂಜೂರು ಮಾಡಲಾಗಿದೆ ಎಂದು ಆರೋಪಿಸಿ, ಈ ಹಿನ್ನೆಲೆಯಲ್ಲಿ ಸಂಘದ ಮಹಾಸಭೆಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಸಂಘದ ಲಿಂಗಪ್ಪ, ಹುಲಿರಾಜ್, ಬಸವರಾಜ್, ಯಲ್ಲಪ್ಪ, ಪಂಪಣ್ಣ, ಜಿ.ಎಲ್.ಗೋಪಿ ಸೇರಿ ಅನೇಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.