ಮುದಗಲ್ನಲ್ಲಿ ಶೇ.62 ಜನ'ಮತ'
ಕ.ಪ್ರ. ವಾರ್ತೆ ್ಣ ಮುದಗಲ್ ್ಣ ಏ.17
ಪಟ್ಟಣದಲ್ಲಿ ಶಾಂತಿಯುತವಾಗಿ ಶೇ.62ರಷ್ಟು ಮತದಾನವಾಗಿದ್ದು, ಗ್ರಾಮೀಣ ಪ್ರದೇಶದಲ್ಲಿ ನೀರಸವಾಗಿತ್ತು.
ಬೆಳಗ್ಗೆ 7ರಿಂದ ಆರಂಭವಾದ ಮತದಾನ ಸಂಜೆ 6ರ ಗಂಟೆಯಾದರೂ ಮತದಾರ ಮಾತ್ರ ಆಸಕ್ತಿ ತೋರಲಿಲ್ಲ. ಮ.12ರವರೆಗೆ ಕೇವಲ ಶೇ.30 ಮತ ಚಲಾವಣೆಯಾಗಿದ್ದವು.
ಉರಿ ಬಿಸಿಲಿಗೆ ತತ್ತರಿಸಿದ ವೃದ್ಧರು, ಮಹಿಳೆಯರು ಮತಗಟ್ಟೆಗೆ ಬರಲು ಹಿಂದೇಟು ಹಾಕುತ್ತಿದ್ದರು. ಅನೇಕ ಗ್ರಾಮಗಳಲ್ಲಿ ರಾಜಕೀಯ ಪಕ್ಷಗಳ ಮುಖಂಡರು ಹೋಗಿ ಮತ ಹಾಕುವಂತೆ ಕೇಳಿದರೂ ಮತದಾರರು ಮಾತ್ರ ಜಪ್ಪಯ್ಯ ಎನ್ನಲಿಲ್ಲ.
ನಾಗರಹಾಳ: ಈ ಭಾಗದಲ್ಲಿ ಉತ್ತಮ ಮತದಾನವಾಗಿದೆ. ಆದರೆ ರಾಜಕೀಯ ಪಕ್ಷಗಳ ಮುಖಂಡರು ಮತದಾರರನ್ನು ಕರೆತರುವ ವಾಹನಗಳನ್ನು ಮತಗಟ್ಟೆ ಮುಂಭಾಗಕ್ಕೆ ಬಿಡುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು. ನಿರಾಕರಿಸಿದರೆ ಅಂಗವಿಕಲರು ಇದ್ದಾರೆ ಎಂದು ನೆಪ ಹೇಳಿ ವಾಹನಗಳನ್ನು ಮತಕೇಂದ್ರದವರೆಗೂ ತಂದಿದ್ದರು.
ಮಳೆ ಅಡ್ಡಿ: ಮತದಾನ ಇನ್ನೇನು ತುರುಸಿನಿಂದ ನಡೆಯುವ ಹಂತಕ್ಕೆ ತಲುಪುತ್ತಿದ್ದಂತೆ ಮಳೆ- ಗಾಳಿ ಶುರುವಾಗಿ ಮತ ಹಾಕಲು ಬರುವವರು ದಿಕ್ಕಾಪಾಲಾದ ಘಟನೆ ಆಶಿಹಾಳ, ಆಶಿಹಾಳ ತಾಂಡಾದಲ್ಲಿ ಜರುಗಿತು. ಮಳೆ ಆಗಮನದಿಂದ ಮತಗಟ್ಟೆಯಲ್ಲಿ ಮತ ಹಾಕಲು ಬಂದವರು ಶಾಲಾ ಆವರಣದಲ್ಲಿ ಮಳೆಯಿಂದ ರಕ್ಷಣೆ ಪಡೆದರು.
ಶಾಂತಿಯುತ: ಪಟ್ಟಣದ 17 ಮತಗಟ್ಟೆಗಳಲ್ಲಿ ಶಾಂತಿಯುತ ಮತದಾನ ನಡೆಯಿತು. ಪೊಲೀಸ್ ಬಿಗಿಬಂದೋಬಸ್ತ್ನಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ನಿಗಾ ವಹಿಸಲಾಗಿತ್ತು. ಸರ್ಕಾರಿ ಪಪೂ ಕಾಲೇಜಿನ 4 ಮತ ಕೇಂದ್ರ, ಸರ್ಕಾರಿ ಕೇಂದ್ರ ಶಾಲೆ ಮತಗಟ್ಟೆಗಳನ್ನು ಅತಿ ಸೂಕ್ಷ್ಮ ಮತ ಕೇಂದ್ರಗಳೆಂದು ಗುರುತಿಸಿದ್ದರಿಂದ ಇಲ್ಲಿ ಪ್ಯಾರಾ ಮಿಲಿಟರಿ ಸಿಬ್ಬಂದಿ ಸೂಕ್ತ ಭದ್ರತೆ ಒದಗಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

