ರಾಯಚೂರು

ವಿಶ್ವ ಪುಸ್ತಕ ದಿನಾಚರಣೆ

Published On :

ಗುಲ್ಬರ್ಗ: ಪುಸ್ತಕಗಳು ನಮ್ಮ ಸಂಗಾತಿಯಿದ್ದಂತೆ, ಒಳ್ಳೆಯ ನಾಗರಿಕರಾಗಲು ಹಾಗೂ ಒಳ್ಳೆಯ ವ್ಯಕ್ತಿತ್ವ ರೂಪಿಸಿಕೊಳ್ಳಲು ಪುಸ್ತಕಗಳು ಸಹಕಾರಿ ಎಂದು ಇತ್ತೀಚೆಗೆ ನಗರ ಕೇಂದ್ರ ಗ್ರಂಥಾಲಯದಲ್ಲಿ ವಿಶ್ವ ಪುಸ್ತಕ ದಿನಾಚರಣೆ ಅಂಗವಾಗಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಗ್ರಂಥಾಲಯ ಪ್ರಾಧಿಕಾರ ಸದಸ್ಯ ಅಪ್ಪಾರಾವ್ ಅಕ್ಕೋಣಿ ಮಾತನಾಡಿದರು.
ಗುವಿಗು ಉಪ ಗ್ರಂಥಪಾಲಕ ಖೇಮಣ್ಣ ಅಲ್ದಿ, ಪುಸ್ತಕಗಳು ಇಲ್ಲದಿದ್ದರೆ ಇತಿಹಾಸ ಸೃಷ್ಟಿಯಾಗಲು ಸಾಧ್ಯವಾಗುತ್ತಿರಲಿಲ್ಲ. ನಮ್ಮ ವಿಚಾರಗಳನ್ನು ಬದಲಾಯಿಸಲು ಪುಸ್ತಕದಿಂದ ಮಾತ್ರ ಸಾಧ್ಯ ಎಂದು ಪುಸ್ತಕಗಳ ಕುರಿತು ಮಾತನಾಡಿದರು.
ಪುಸ್ತಕಗಳಿಂದ ಜೀವನದಲ್ಲಿ ಶಾಂತಿ, ನೆಮ್ಮದಿ, ಸ್ಥೈರ್ಯ, ಆತ್ಮವಿಶ್ವಾಸ ಇವು ಎಲ್ಲವುಗಳು ಹೆಚ್ಚಲು ಪುಸ್ತಕಗಳು ಸಹಕಾರಿ ಎಂದು ಅಧ್ಯಕ್ಷತೆ ವಹಿಸಿದ್ದ ಕೇಂದ್ರ ಗ್ರಂಥಾಲಯ ಉಪ ನಿರ್ದೇಶಕ ಡಿ.ಎಚ್. ಕೇಸರಿ ಮಾತನಾಡಿದರು. ಜಿಲ್ಲಾ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಮಂಜುನಾಥ ನಾಲವರ್ ಅತಿಥಿಯಾಗಿ ಆಗಮಿಸಿದರು.
ದೀಪಕ ಎಂ.ಕಮತರ ನಿರೂಪಿಸಿದರು, ಸುನೀಲ ಮುದಗಲ್ಲ ವಂದಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.