ವೀರಭದ್ರೇಶ್ವರ ರಥೋತ್ಸವ
ಮುದಗಲ್: ಪಟ್ಟಣ ಸಮೀಪದ ತಲೇಖಾನ ಗ್ರಾಮದ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಅತ್ಯಂತ ಅದ್ಧೂರಿಯಿಂದ ಜರುಗಿತು. ಜಾತ್ರೆ ಅಂಗವಾಗಿ ಸಂಜೆ 6 ಗಂಟೆಗೆ ಗ್ರಾ.ಪಂ. ಕಾರ್ಯಲಯದ ಮುಂದಿನ ರಸ್ತೆಯಲ್ಲಿ ಮಹಾರಥೋತ್ಸವ ಏಳೆಯಲಾಯಿತು.
ಜಾತ್ರೆ ಅಂಗವಾಗಿ ಬೆಳಗಿನ ಜಾವ ಸುಮಂಗಲೆಯರಿಂದ ಕಳಸ, ವೀರಭದ್ರೇಶ್ವರ ದೇವರ ಭಾವಚಿತ್ರ ಮೆರವಣಿಗೆ ನಂತರ ಪಲ್ಲಕಿ ಉತ್ಸವ ಹಾಗೂ ದೇಗುಲಕ್ಕೆ ಕಳಸಾರೋಹಣದ ಬಳಿಕ ದೇವರಿಗೆ ರುದ್ರಾಭಿಷೇಕ, ವಿಶೇಷ ಪೂಜೆ, ಬಿಲ್ವಾರ್ಚನೆ ಕಾರ್ಯಕ್ರಮ ನಡೆಯಿತು. ದೇವರ ದರ್ಶನಕ್ಕೆ ಬಂದ ಸುತ್ತಲಿನ ಸಾವಿರಾರು ಭಕ್ತರು ಕಾಯಿ-ಕರ್ಪೂರ, ಹೂವು, ಹಣ್ಣು ಸೇರಿದಂತೆ ಸಿಹಿ ಅಡುಗೆ ಅರ್ಪಿಸಿ, ವೀರಭದ್ರೇಶ್ವರ ದೇವರಿಗೆ ಬೇಡಿಕೆ ಸಮರ್ಪಿಸಿದರು. ಇನ್ನು ಕೆಲವರು ಮುಡಿಪು, ದೀಡ್ ನಮಸ್ಕಾರ ಹಾಕಿ ಭಕ್ತಿ ಪರಕಾಷ್ಠೆ ಮೆರೆದರು. ಸಂಜೆ 6 ಗಂಟೆ ಸುಮಾರಿಗೆ ಶ್ರೀ ಬಸವರಾಜೇಂದ್ರ ಮಹಾಸ್ವಾಮಿ ಸಾನ್ನಿಧ್ಯದಲ್ಲಿ ಮಹಾ ರಥೋತ್ಸವ ಜರುಗಿತು.
ರಥೋತ್ಸವದಲ್ಲಿ ತಾಪಂ ಸದಸ್ಯ ತಿಮ್ಮಣ್ಣ ನಾಯಕ, ಗ್ರಾ.ಪಂ. ಅಧ್ಯಕ್ಷ ಹನುಮಂತಪ್ಪ ನಾಯ್ಕ, ಮರಿಬಸ್ಸಲಿಂಗೇಗೌಡ, ಶೇಖರಪ್ಪ ಧರ್ಮತಿ, ವೀರಪ್ಪ, ಭೀಮನಗೌಡ ಪಾಟೀಲ್, ವೀರೇಶ, ಯಂಕನಗೌಡ, ಬಸನಗೌಡ, ಪಿಡಿಒಗಳಾದ ಚನ್ನಮಲ್ಲಯ್ಯ ಸ್ವಾಮಿ, ನಾಗೇಶ, ಕಾರ್ಯದರ್ಶಿ ಜೆ. ಮಲ್ಲಿಕಾರ್ಜುನ ಸಾಹುಕಾರ, ಮುದಗಲ್ಲ ಪ.ಪಂ. ಸ್ಥಾಯಿಸಮಿತಿ ಅಧ್ಯಕ್ಷ ಹೇಮಂತ ನಾಗಲಾಪುರ, ಗ್ರಾ.ಪಂ. ಸದಸ್ಯರಾದ ಹನುಮಂತ ಗೊಲ್ಲರ, ಅಮರೇಶ ಹಡಗಲಿ, ಹನುಮಂತಪ್ಪ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

