ಕಾಲುವೆ ರೈತರ ತಪ್ಪದ ಗೋಳು
ವಿಶೇಷ ವರದಿ
ಕನ್ನಡಪ್ರಭ ವಾರ್ತೆ ರಾಯಚೂರು ಫೆ.16
ಬೇಸಿಗೆ ಆರಂಭಕ್ಕೂ ಮುನ್ನವೇ ತುಂಗಭದ್ರಾ ಎಡದಂಡೆ ಕಾಲುವೆಯ ಕಡೆಯ ರೈತರ ಬೆಳೆಗೆ ನೀರು ಹರಿಯುತ್ತಿಲ್ಲ. ಜಲಾಶಯದಲ್ಲಿ ನೀರಿದ್ದರೂ ಕೊಟ್ಟ ಮಾತಿನಂತೆ ನಡೆಯದ ಜಲ ಸಂಪನ್ಮೂಲ ಇಲಾಖೆ ಅಧಿಕಾರಿಗಳಿಂದ ಬೆಳೆ ಹಾನಿಯಷ್ಟೇ ಅಲ್ಲ. ಮುಂದೆ ಕುಡಿವ ನೀರಿಗೂ ಪರದಾಡಬೇಕಾದ ಆತಂಕ ಎದುರಾಗಿದೆ.
ಈಗಾಗಲೇ ಕಳೆದ ವಾರ ನಡೆಸಿದ ರಸ್ತೆ ತಡೆ ವೇಳೆ ನೀರಾವರಿ ಅಧಿಕಾರಿಗಳು ನೀಡಿದ್ದ ಭರವಸೆ ಮತ್ತೊಮ್ಮೆ ಹುಸಿಯಾಗಿದೆ. ಇದು ರೈತರ ತಾಳ್ಮೆಗೆಡಿಸಿರುವುದೂ ಸತ್ಯ. ಕಾಲುವೆಯ 104ನೇ ಮೈಲ್ ಕೆಳಭಾಗದಲ್ಲಿ ರೈತರ ಒಟ್ಟು 1.20 ಲಕ್ಷ ಎಕರೆ ಪ್ರದೇಶದಲ್ಲಿ ನೀರಾವರಿ ಸೌಲಭ್ಯವಿದೆ. ಆದರೆ ನೀರಾವರಿಯಾಗಿರುವುದು ದಾಖಲೆಗಳಲ್ಲಿ ಮಾತ್ರ. ವಾಸ್ತವದಲ್ಲಿ ನೀರು ದೊರೆಯುವುದು ವಿರಳ. ಮೊದಲ ಹಂಗಾಮಿಗೆ ಆಗೊಮ್ಮೆ ಈಗೊಮ್ಮೆ ದೊರೆಯುವ ನೀರು ನಂತರದಲ್ಲಿ ಹೋರಾಡಿದರೂ ನಿಷ್ಪ್ರಯೋಜಕವಾಗಿದೆ.
ಕಳೆದ ತಿಂಗಳಿಂದ ನೀರಿಲ್ಲ: ಪ್ರಸಕ್ತ ವರ್ಷ ರೈತರು 10 ಸಾವಿರ ಎಕರೆಯಲ್ಲಿ ಬತ್ತ ಇನ್ನುಳಿದಂತೆ ಮೆಣಸಿನಕಾಯಿ, ಹತ್ತಿ, ಜೋಳ ಬೆಳೆದಿದ್ದಾರೆ. ಬತ್ತ ಹೊರತುಪಡಿಸಿ ಇನ್ನುಳಿದ ಬೆಳೆಗೀಗ ನೀರಿನ ಅವಶ್ಯಕತೆಯಿದೆ. ಆದರೆ ಒಂದು ತಿಂಗಳಿಗೂ ಅಧಿಕ ಸಮಯದಿಂದ ಬೆಳೆಗೆ ನೀರಿಲ್ಲದ ಸ್ಥಿತಿ.
ಕಾಲುವೆಯ ಮೇಲ್ಭಾಗದ ರೈತರ ಬತ್ತದ ಗದ್ದೆಗಳು ಹಚ್ಚಹಸಿರಿನಿಂದ ಕಂಗೊಳಿಸುತ್ತಿದ್ದರೆ ಕಾಲುವೆಯ ಕಡೆಯಲ್ಲಿ ಬರದ ಛಾಯೆ ಕಾಣಸಿಗುತ್ತಿದೆ. ಎಡದಂಡೆಯಲ್ಲಿ ನೀರಿನ ಮಟ್ಟ ಕಾಯ್ದುಕೊಳ್ಳುವಲ್ಲಿ ಅಧಿಕಾರಿಗಳು ವಿಫಲರಾಗಿರುವುದು ಸ್ಪಷ್ಟ. ಸದ್ಯ ಕಾಲುವೆಯ ಕಡೆಯ ಭಾಗದ 104ನೇ ಮೈಲ್ನಲ್ಲಿ ಒಂದು ಅಡಿಗೂ ಕಡಿಮೆ ನೀರಿದೆ ಎಂದು ಮೂಲಗಳು ತಿಳಿಸಿವೆ.
ಹುಸಿ ಭರವಸೆ: ಕಳೆದ ವಾರ ರೈತರು ಗ್ರಾಮೀಣ ಶಾಸಕ ತಿಪ್ಪರಾಜು ಸೇರಿದಂತೆ ವಿವಿಧ ರೈತಪರ ಸಂಘಟನೆಗಳ ಜತೆಗೂಡಿ 7 ಮೈಲ್ ಕ್ರಾಸ್ ಬಳಿ ನಡೆಸಿದ ರಸ್ತೆ ತಡೆ ವೇಳೆ ನೀರಾವರಿ ಇಲಾಖೆಯ ಮುನಿರಾಬಾದ್ನ ಹಿರಿಯ ಎಂಜಿನಿಯರ್ ಮಲ್ಲಿಕಾರ್ಜುನ್ ಸ್ಥಳಕ್ಕೆ ಭೇಟಿ ನೀಡಿ ಕಾಲುವೆಯಲ್ಲಿ ನೀರಿನ ಹರಿವು ಹೆಚ್ಚಿಸಲಾಗುತ್ತದೆ. ಕಾಲುವೆಯ ಕಡೆಯ ರೈತರಿಗೆ ಎರಡು ದಿನದಲ್ಲಿ ನೀರೊದಗಿಸಲಾಗುತ್ತದೆ ಎಂದಿದ್ದರು. ಆದರೆ 15 ದಿನ ಕಳೆದರೂ ಇದು ಸಾಧ್ಯವಾಗಿಲ್ಲ.
ಈ ಕುರಿತು “OÚ«ÚsÚ®ÚúڒOæQ ಪ್ರತಿಕ್ರಿಯಿಸಿದ ಗ್ರಾಮೀಣ ಶಾಸಕ ತಿಪ್ಪರಾಜು ಹವಾಲ್ದಾರ್, ಕಾಲುವೆಯ ಕಡೆಯ ರೈತರಿಗೆ ಅಧಿಕಾರಿಗಳು ನೀಡಿದ ಭರವಸೆಯಂತೆ ನೀರು ದೊರೆತಿಲ್ಲ. ಈ ಸಮಸ್ಯೆಗೆ ಸಂಬಂಧಿಸಿ ಫೆ.17ರಂದು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ರೈತರಿಗೆ ನೀರು ದೊರಕಿಸಲು ಶಾಶ್ವತ ಮಾರ್ಗೋಪಾಯ ಕಂಡುಹಿಡಿಯಲು ಚರ್ಚಿಸುವುದಾಗಿ ಅವರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

