24x7 ನೀರು ಸರಬರಾಜು ಜಾಗೃತಿ
ಸಿಂಧನೂರು: ಏಷಿಯನ್ ಅಭಿವೃದ್ಧಿ ಬ್ಯಾಂಕ್ ನೆರವಿನ ಉತ್ತರ ಕರ್ನಾಟಕ ನಗರ ವಲಯ ಬಂಡವಾಳ ಹೂಡಿಕಾ ಕಾರ್ಯಕ್ರಮದ(ಎನ್ಕೆಯುಎಸ್ಐಪಿ) ಸಮುದಾಯ ಅಭಿವೃದ್ಧಿ ವಿಭಾಗದ ಅನುಷ್ಠಾನ ಸಂಸ್ಥೆಯಾದ ವಿಶ್ವ ಸೇವಾ ಮಿಷನ್, ಸಿಂಧನೂರು ಮತ್ತು ನಗರಸಭೆಯ ಸಂಯುಕ್ತಾಶ್ರಯದಲ್ಲಿ 4ನೇ ವಾರ್ಡ್ನ ಬಡಿಬೇಸ್ನ ಫಾತಿಮಾ ಫಂಕ್ಷನ್ ಹಾಲ್ನಲ್ಲಿ 24್ಗ7 ನೀರು ಸರಬರಾಜು ವಾರ್ಡ್ ಮಟ್ಟದ ತಿಳಿವಳಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಗರಸಭೆ ಅಧ್ಯಕ್ಷ ಸೈಯದ್ ಜಾಫರ ಅಲಿ ಜಾಗೀರದಾರ, 24್ಗ7 ನಿರಂತರ ನೀರು ಸರಬರಾಜು ಮತ್ತು ಒಳಚರಂಡಿ ವ್ಯವಸ್ಥೆಯಿಂದಾಗಿ ನಗರದಲ್ಲಿ ಮುಂದಿನ ದಿನಮಾನಗಳಲ್ಲಿ ಆಗುವಂತಹ ಕಾಮಗಾರಿಗಳ ಕುರಿತಾಗಿ ಹಾಗೂ ಯೋಜನೆಗಳ ಉಪಯುಕ್ತತೆಯ ಬಗ್ಗೆ ಹೇಳಿದರು.
ಆರೋಗ್ಯ ಜಾಗೃತಿ: ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನನವರ ಮಾತನಾಡಿ, ಆರೋಗ್ಯದ ಕುರಿತಾಗಿ ಹಾಗೂ ಶುದ್ಧ ಕುಡಿಯುವ ನೀರಿನ ಮಹತ್ವ ಹಾಗೂ ಸುತ್ತಮುತ್ತಲಿನಲ್ಲಿರುವ ಪರಿಸರ ಸ್ವಚ್ಛತೆ ಬಗ್ಗೆ ಕೈಗೊಳ್ಳಬೇಕಾದ ಮುಂಜಾಗ್ರತೆ ಕ್ರಮಗಳು ಹಾಗೂ ಮಾಹಿತಿ ನೀಡಿ ಜನರಲ್ಲಿ ಜಾಗೃತಿ ಮೂಡಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕಾರ್ಯಕ್ರಮದ ಸಂಯೋಜಕ ಮೊಯೀನ್ ಪಾಷ ಎನ್ಕೆಎಸ್ಯುಎಸ್ಐಪಿ ಯೋಜನೆ(ಸಿಡಿಪಿ) ಇವರು 24್ಗ7 ನಿರಂತರ ನೀರು ಸರಬರಾಜು ಮತ್ತು ಒಳಚರಂಡಿ ವ್ಯವಸ್ಥೆಯಿಂದಾಗಿ ನಗರದಲ್ಲಿರುವ ಪ್ರತಿಯೊಬ್ಬರಿಗೂ ಇರುವ ನೀರಿನ ಮಹತ್ವ ಹಾಗೂ ದೈನಂದಿನವಾಗಿ ನಗರದಲ್ಲಿ ನೀರಿನ ಸಮಸ್ಯೆಗಳ ಬಗ್ಗೆ ಹಾಗೂ ಯೋಜನೆಯ ಅಭಿವೃದ್ಧಿ ಹೊಂದುತ್ತಿರುವ ಸಿಂಧನೂರು ನಗರಕ್ಕೆ ಎನ್ಕೆಎಸ್ಯುಎಸ್ಐಪಿ ಯೋಜನೆಯ ಅವಶ್ಯಕತೆ ಕುರಿತಾಗಿ ವಿವರಿಸಿದರು.
ಇದೇ ವೇಳೆ ನಗರಸಭೆ ಸದಸ್ಯ ನಬೀಸಾಬ, ಎಸ್ಜೆಎಸ್ಆರ್ವೈ ಸಂಘದ ಉಪಾಧ್ಯಕ್ಷೆ ಅನುಸೂಯಮ್ಮ, ಮುಖಂಡರಾದ ಸಮದಾನಿ, ಫಿರೋಜಪಾಷ, ಹುಸೇನಸಾಬ, ಖಾಜಾಸಾಬರವರು ಉಪಸ್ಥಿತರಿದ್ದರು.
ಎನ್ಕೆಎಸ್ಯುಎಸ್ಐಪಿ ಯೋಜನೆಯ ಸಿಬ್ಬಂದಿಗ ಬಸಮ್ಮ, ಹನುಮಂತಪ್ಪ.ಎಂ., ಅಶೋಕ ಬಾಲಿ ಹಾಗೂ ಬಡಿಬೇಸ್ನ ನಾಗರೀಕರು ಭಾಗವಹಿಸಿದ್ದರು. ಶಾಂತಮುತ್ತಯ್ಯ ಗುರುವಿನ್ ನಿರೂಪಿಸಿದರು. ಸೈಯದ್ ಜಾವೀದ್ ಪಾಷ ಸ್ವಾಗತಿಸಿದರು. ಬಸವರಾಜ ಭಂಗಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

