9ರಿಂದ ನೌಕರರ ಕ್ರೀಡಾಕೂಟ
ರಾಯಚೂರು: 2012- 2013ನೇ ಸಾಲಿನ ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾಕೂಟ ಜ.18ರಿಂದ ಹಾಗೂ ಜಿಲ್ಲಾ ಮಟ್ಟದ ಕ್ರೀಡಾಕೂಟಗಳು ಜ.9 ಮತ್ತು 10ರಂದು ನಡೆಯಲಿವೆ.
ಬೆಂಗಳೂರಿನಲ್ಲಿ ಜ.18ರಿಂದ 20ರವರೆಗೆ ಕ್ರೀಡಾಕೂಟ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲಾ ಮಟ್ಟದ ಕ್ರೀಡಾಕೂಟಗಳು ಜಿಲ್ಲಾ ಕ್ರೀಡಾಂಗಣದಲ್ಲಿ ಜ.9 ಮತ್ತು 10ರಂದು ನಗರದಲ್ಲಿ ಆಯೋಜಿಸಲಾಗಿದೆ. ಪುರುಷರಿಗಾಗಿ ಪುಟ್ಬಾಲ್, ಹಾಕಿ, ವಾಲಿಬಾಲ್, ಕ್ರಿಕೆಟ್ ಹಾಗೂ ಮಹಿಳೆಯರಿಗೆ ಬ್ಯಾಡ್ಮಿಂಟನ್, ಟೇಬಲ್ ಟೆನ್ನಿಸ್, ಕೇರಂ, ಥ್ರೋಬಾಲ್ ಕ್ರೀಡೆ ಆಯೋಜಿಸಲಾಗಿದೆ. ಅದೇ ರೀತಿ 45 ವರ್ಷ ಮೇಲ್ಪಟ್ಟ ಪುರುಷ ಹಾಗೂ 40 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಈಜು ಸ್ಪರ್ಧೆ ಆಯೋಜಿಸಿದ್ದು, ಅಥ್ಲೆಟಿಕ್ಸ್ ಸ್ಪರ್ಧೆಗಳು ಪುರುಷ ಹಾಗೂ ಮಹಿಳೆಯರಿಗೆ ನಡೆಸಲಾಗುತ್ತದೆ. ಪುರುಷರಿಗಾಗಿ ಕುಸ್ತಿ, ಪವರ ಲಿಫ್ಟಿಂಗ್ ಸ್ಪರ್ಧೆಯಿದ್ದು ಸಂಗೀತ, ವಾದ್ಯ ಸಂಗೀತ ಸ್ಪರ್ಧೆಗಳನ್ನೂ ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಎಲ್ಲ ಸ್ಪರ್ಧಿಗಳು ಸಂಬಂಧಿಸಿದ ಕಚೇರಿಯ ಮುಖ್ಯಸ್ಥರಿಂದ ತಮ್ಮ ಗುರುತಿನ ಚೀಟಿ ತರಬೇಕು. ಶಿಸ್ತು ಗಮನಿಸಬೇಕು. ಅಶಿಸ್ತನ್ನು ಮೇಲಾಧಿಕಾರಿಗಳಿಗೆ ವರದಿ ಮಾಡಲಾಗುವುದು. ಸ್ಪರ್ಧೆಗಳಲ್ಲಿ ಭಾಗವಹಿಸುವವರು ಎರಡು ದಿನಗಳಿಗಾಗಿ ತಮ್ಮ ಇಲಾಖೆಗಳಿಂದ ಪ್ರಯಾಣ ಭತ್ಯೆ, ದಿನಭತ್ಯೆ ಪಡೆಯಬಹುದು. ಊಟ, ವಸತಿ ಸ್ಪರ್ಧಾಳುಗಳೇ ವಹಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗೆ ಜಿಲ್ಲಾ ಮಹಾತ್ಮಗಾಂಧಿ ಕ್ರೀಡಾಂಗಣ ರಾಯಚೂರು ಇವರಲ್ಲಿ ಸಂಪರ್ಕಿಸಲು ಜಿಲ್ಲಾ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿ ತಿಳಿಸಿದೆ.
--
ಪೌರಾಯುಕ್ತ ಸೈಯದ್ ನಾಸೀರ್ ಅಲಿಗೆ ಸನ್ಮಾನ
ಸಿಂಧನೂರು: ಸಿಂಧನೂರಿನ ನಗರಸಭೆಯಲ್ಲಿ ಪೌರಾಯುಕ್ತ ಸೈಯದ್ ನಾಸೀರ್ ಅಲಿರವರ ವಯೋನಿವೃತ್ತಿಯ ನಿಮಿತ್ತ ಅವರಿಗೆ ಎನ್ಕೆಯುಎಸ್ಐಪಿ ಕೋಶದ ವತಿಯಿಂದ ಸನ್ಮಾನ ಸಮಾರಂಭ ಆಯೋಜಿಸಲಾಗಿತ್ತು.
ಸಮಾರಂಭದ ಅಧ್ಯಕ್ಷತೆಯನ್ನು ನಗರಸಭಾಧ್ಯಕ್ಷರಾದ ಸೈಯದ್ ಜಾಫರ್ ಅಲಿ ಜಾಗೀರದಾರ ವಹಿಸಿದ್ದರು. ನಗರಸಭಾ ಸದಸ್ಯ ಚಂದ್ರಶೇಖರ ಮೈಲಾರ ನಗರಸಭೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಗಂಗಾಧರ ಎಂ, ಕಂದಾಯ ಅಧಿಕಾರಿ ಗುಂಡಪ್ಪ ಸಾಲಗುಂದಾ, ಪೌರಕಾರ್ಮಿಕರ ಸಂಘದ ಅಧ್ಯಕ್ಷ ದುರುಗಪ್ಪ ಹಸಮಕಲ್, ಎನ್ಕೆಯುಎಸ್ಐಪಿ ಕೋಶದ ಸಹಾಯಕ ಅಭಿಯಂತರ ಶರಣಬಸವರಾಜ, ಸ್ಥಾನಿಕ ಅಭಿಯಂತರ ದುರುಗಪ್ಪ, ಯೋಜನಾಧಿಕಾರಿ ಸಿ.ನಾಗರಾಜ, ಕಾರ್ಯಕ್ರಮ ಸಂಯೋಜಕ ಹನುಮಂತಪ್ಪ ಎ., ಲೆಕ್ಕಿಗ ಸೈಯದ್ ಜಾವೀದ್ ಪಾಷ, ಸಮುದಾಯ ಸಂಘಟಕ ಶಾಂತಮುತ್ತಯ್ಯ, ಹನುಮಂತಪ್ಪ.ಎಂ, ಬಸಮ್ಮ, ಬಸವರಾಜ ಭಂಗಿ,ಅಶೋಕ ಬಾಲಿ, ಚೆನ್ನಬಸವ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

