ರಾಯಚೂರು

ನಿತ್ಯಾಭಿಷೇಕಕ್ಕೆ ಚಾಲನೆ

Published On :

ಸಿಂಧನೂರು: ಕಾಳಿಕಾ ಮಾತೆಯ ಪೂಜೆಯಿಂದ ಸಂಕಲ್ಪ ಈಡೇರುತ್ತವೆ, ನೆಮ್ಮದಿ ದೊರಕುತ್ತದೆ. ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಂಡು ಪಾವನರಾಗಬೇಕೆಂದು ವಿಶ್ವಕರ್ಮ ಸಮಾಜದ ಅಧ್ಯಕ್ಷ ಮಾನಯ್ಯ ಆಚಾರ್ಯ ಹೇಳಿದರು.
ಬಳಗಾನೂರು ಕಾಳಿಕಾ ದೇವಸ್ಥಾನದಲ್ಲಿ ವಿಶ್ವಕರ್ಮ ಸಮಾಜ ನಿತ್ಯಾಭಿಷೇಕ ಸಮಿತಿ ವತಿಯಿಂದ ಜರುಗಿದ ಕಾಳಿಕಾದೇವಿಗೆ ನಿತ್ಯಾಭಿಷೇಕ ಆರಂಭ ಕಾರ್ಯಕ್ರಮ ಮತ್ತು ಅಮರಶಿಲ್ಪಿ ಜಕಣಾಚಾರಿ ಸ್ಮರಣಾರ್ಥ ದಿನ ಆಚರಣೆ ಕಾರ್ಯಕ್ರಮಕ್ಕೆ ಜ್ಯೋತಿ ಬೆಳಗಿಸುವುದರ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಎಸ್.ಬಸವರಾಜ ವಿಶ್ವಕರ್ಮ ಮಾತನಾಡಿ, ಬಸವಣ್ಣ ಕನಕದಾಸರಂತೆ ಅಮರಶಿಲ್ಪಿ ಜಕಣಾಚಾರಿ ಮಹಾನ್ ಪುರುಷರು. ಜಕಣಾಚಾರ್ಯರ ಸ್ಮರಣಾರ್ಥ ದಿನವನ್ನು ಆಚರಿಸುತ್ತಾ ಅವರ ಜೀವನ ಮತ್ತು ಸಾಧನೆಯ ಮಾಹಿತಿ ಮುಂದಿನ ಪೀಳಿಗೆಗೆ ದೊರೆಯುಂತಾಗಲು ಜನಪ್ರತಿನಿಧಿಗಳು ಗಮನಹರಿಸಬೇಕು. ನಿತ್ಯಾಭಿಷೇಕ ಕಾರ್ಯಕ್ರಮಕ್ಕೆ ಹೆಸರು ನೋಂದಾಯಿಸಲು ಶ್ರೀಧರ ಗೋಲ್ಡ್ಸ್ಮೀತ್, ಬಿಷ್ಟಪ್ಪ ಆಚಾರ್ಯ ಅವರನ್ನು ಸಂಪರ್ಕಿಸುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಆಚಾರ್ಯ ಅಮರೇಶ್, ಸಮಾಜದ ಖಜಾಂಚಿ ಚಿಂತಾಮಣಿ ಪತ್ತಾರ, ಅಭಿಷೇಕ ಸಮಿತಿಯ ಶ್ರೀಧರ ಗೋಲ್ಡ್ಸ್ಮೀತ್, ಮಂಜುನಾಥ, ಚಂದ್ರಶೇಖರ, ಪ್ರಭು ವಿಶ್ವಕರ್ಮ, ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಾಘವೇಂದ್ರರಾವ್, ಮೌನೇಶ್ವರ ಯುವಕ ಮಂಡಳಿಯ ಪದಾಧಿಕಾರಿಗಳು ಸೇರಿದಂತೆ ಗ್ರಾಮದ ಮುಖಂಡರು ವಿಶ್ವಕರ್ಮ ಸಮಾಜದವರು, ಸುಮಂಗಲೆಯರು, ಭಕ್ತರು ಪಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.